ಮತ್ತೆ ಬೆಂಗಳೂರನ್ನು ನಡುಗಿಸಿದ ನಿಗೂಢ ಸದ್ದು..! ಇದು 'ಸಾನಿಕ್ ಬೂಮ್' ಇರಬಹುದಾ..?

ಹಾಗೆ ನೋಡಿದ್ರೆ ಬೆಂಗಳೂರಿನ ಮಟ್ಟಿಗೆ ಈ ರೀತಿಯ ಶಬ್ಧ ಹೊಸದೇನಲ್ಲ. ಮೂರು ವರ್ಷಗಳ ಹಿಂದೆಯೂ ಇದೇ ರೀತಿಯ ಶಬ್ಧ ಕೇಳಿಬಂದಿತ್ತು. ಆಗಸ್ಟ್‌ 16, 2018ರಲ್ಲಿ ಇದೇ ರೀತಿಯ ಸ್ಫೋಟದ ಸದ್ದು ಕೇಳಿಬಂದಿತ್ತು.

ಮತ್ತೆ ಬೆಂಗಳೂರನ್ನು ನಡುಗಿಸಿದ ನಿಗೂಢ ಸದ್ದು..! ಇದು 'ಸಾನಿಕ್ ಬೂಮ್' ಇರಬಹುದಾ..?
Linkup
: ಶುಕ್ರವಾರ ಮಧ್ಯಾಹ್ನ 12:20ರ ಸುಮಾರಿಗೆ ಬೆಂಗಳೂರಿನಲ್ಲಿ ಭಾರೀ ಸ್ಪೋಟದ ಕೇಳಿಸಿತು. ಇಡೀ ಬೆಂಗಳೂರಿನಾದ್ಯಂತ ಈ ಸದ್ದು ಕೇಳಿಸಿದೆ. ಸರಿಸುಮಾರು 5 ಸೆಕೆಂಡ್‌ಗಳ ಮಟ್ಟಿಗೆ ಈ ಶಬ್ದ ಕೇಳಿ ಬಂದಿದೆ. ಕೆಲವೆಡೆ ಬಹುಮಹಡಿ ಕಟ್ಟಡಗಳಲ್ಲಿ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಈ ಶಬ್ದ ಕೇಳಿ ಬಂದ ಕೂಡಲೇ ಕಿಟಕಿಗಳು ಅಲುಗಾಡಿವೆ. ಭೂಕಂಪದ ಅನುಭವವೂ ಕೆಲವರಿಗೆ ಆಗಿದೆ. ಎಚ್‌ಎಎಲ್ ಹೇಳೋದೇನು..? ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್‌ಎಎಲ್, ತಮ್ಮ ಏರ್‌ಪೋರ್ಟ್‌ನಲ್ಲಿ ಎಂದಿನಂತೆ ವಿಮಾನಗಳ ತರಬೇತಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ. ಬೆಂಗಳೂರಿನಾದ್ಯಂತ ಕೇಳಿಬಂದಿರುವ ಸ್ಫೋಟದ ಸದ್ದಿನ ಸಂಬಂಧ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಎಚ್‌ಎಎಲ್ ವಕ್ತಾರ ಗೋಪಾಲ್ ಸುತಾರ್ ತಿಳಿಸಿದ್ದಾರೆ. ಈ ಸಂಬಂಧ ವಿಪತ್ತು ನಿರ್ವಹಣಾ ಪಡೆ ಕೂಡಾ ಪ್ರತಿಕ್ರಿಯೆ ನೀಡಿದೆ. ಇದು ಭೂಕಂಪದಿಂದ ಸಂಭವಿಸಿದ ಸದ್ದಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಹಾಗಾದ್ರೆ, ಇದು ಕಳೆದ ಬಾರಿಯಂತೆಯೇ ಸೂಪರ್ ಸಾನಿಕ್ ವಿಮಾನದ ಪರೀಕ್ಷೆ ವೇಳೆ ಉಂಟಾದ ಶಬ್ಧವೇ..? ಅಥವಾ ಬೇರೆ ಇನ್ನೇನಾದ್ರೂ ಕಾರಣವಿದೆಯೇ..? ಅದು ಇನ್ನಷ್ಟೇ ಹೊರಬೀಳಬೇಕಿದೆ. ಈ ರೀತಿಯ ಸದ್ದು ಹೊಸದೇನಲ್ಲ..! ಕಳೆದ ವರ್ಷ ಮೇ ತಿಂಗಳಲ್ಲೂ ಇದೇ ರೀತಿಯ ಶಬ್ಧ ಕೇಳಿಬಂದಿತ್ತು. ಆಗ ಈ ಕುರಿತು ಸ್ಪಷ್ಟನೆ ನೀಡಿದ್ದ ರಕ್ಷಣಾ ಇಲಾಖೆ, ಇದನ್ನು ಸೋನಿಕ್ ಬೂಮ್‌ನಿಂದ ಉಂಟಾದ ಶಬ್ಧ ಎಂದು ಸ್ಪಷ್ಟಪಡಿಸಿತ್ತು. ಸೂಪರ್ ಸಾನಿಕ್ ವಿಮಾನಗಳ ಪರೀಕ್ಷೆ ವೇಳೆ ಇಂಥಾದ್ದೊಂದು ಶಬ್ಧ ಉತ್ಪತ್ತಿಯಾಗಿದೆ ಎಂದು ಇಲಾಖೆ ವಿವರಿಸಿತ್ತು. ಹಾಗೆ ನೋಡಿದ್ರೆ ಬೆಂಗಳೂರಿನ ಮಟ್ಟಿಗೆ ಈ ರೀತಿಯ ಶಬ್ಧ ಹೊಸದೇನಲ್ಲ. ಮೂರು ವರ್ಷಗಳ ಹಿಂದೆಯೂ ಇದೇ ರೀತಿಯ ಶಬ್ಧ ಕೇಳಿಬಂದಿತ್ತು. ಆಗಸ್ಟ್‌ 16, 2018ರಲ್ಲಿ ಇದೇ ರೀತಿಯ ಸ್ಫೋಟದ ಸದ್ದು ಕೇಳಿಬಂದಿತ್ತು.