ಬಹುಭಾಷಾ ಚಿತ್ರಕ್ಕೆ ಸಹಿ ಹಾಕಿದ ನಟಿ ಸಂಜನಾ ಗಲ್ರಾನಿ

ಒಂದೊಳ್ಳೆ ಪ್ರಾಜೆಕ್ಟ್‌ಗಾಗಿ ಕಾಯುತ್ತಿದ್ದ ನಟಿ ಸಂಜನಾ ಗಲ್ರಾನಿ ಇದೀಗ ಬಹುಭಾಷಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜಿ.ವೆಂಕಟ ಕೃಷ್ಣನ್ ನಿರ್ದೇಶನದ 'ಮಣಿಶಂಕರ್' ಚಿತ್ರದಲ್ಲಿ ನಟಿಸಲು ಸಂಜನಾ ಗಲ್ರಾನಿ ಒಪ್ಪಿಕೊಂಡಿದ್ದಾರೆ.

ಬಹುಭಾಷಾ ಚಿತ್ರಕ್ಕೆ ಸಹಿ ಹಾಕಿದ ನಟಿ ಸಂಜನಾ ಗಲ್ರಾನಿ
Linkup
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿನಿತ್ಯ ನೂರಾರು ಜನರಿಗೆ ಆಹಾರ ನೀಡಿ ಸಾಮಾಜಿಕ ಕಳಕಳಿ ಮೆರೆದಿದ್ದ ನಟಿ ಇದೀಗ ಮರಳಿ ಬಣ್ಣ ಹಚ್ಚಿದ್ದಾರೆ. ಲಾಕ್‌ಡೌನ್ ಸಡಿಲಗೊಂಡಿರುವ ಕಾರಣ ಚಿತ್ರರಂಗದ ಚಟುವಟಿಕೆಗಳು ಪುನರಾರಂಭಗೊಂಡಿವೆ. ಮತ್ತೆ ನಟನೆಗೆ ವಾಪಸ್ ಆಗಿರುವ ನಟಿ ಸಂಜನಾ ಗಲ್ರಾನಿ ಇದೀಗ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ. ಒಂದೊಳ್ಳೆ ಪ್ರಾಜೆಕ್ಟ್‌ಗಾಗಿ ಕಾಯುತ್ತಿದ್ದ ನಟಿ ಸಂಜನಾ ಗಲ್ರಾನಿ ಇದೀಗ ಬಹುಭಾಷಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜಿ.ವೆಂಕಟ ಕೃಷ್ಣನ್ ನಿರ್ದೇಶನದ 'ಮಣಿಶಂಕರ್' ಚಿತ್ರದಲ್ಲಿ ನಟಿಸಲು ಸಂಜನಾ ಗಲ್ರಾನಿ ಒಪ್ಪಿಕೊಂಡಿದ್ದಾರೆ. 'ಮಣಿಶಂಕರ್' ಚಿತ್ರ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ನಟಿ ಸಂಜನಾ ಗಲ್ರಾನಿ ಹೇಳಿದ್ದೇನು? ''ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಾನು ಸಕ್ರಿಯವಾಗಿದ್ದೇನೆ. ಕೆಲವು ಸಿನಿಮಾಗಳ ಬಳಿಕ ನಟಿಯರು ಮರೆಯಾಗುತ್ತಾರೆ. ಅಂಥದ್ರಲ್ಲಿ ಶೀಘ್ರದಲ್ಲಿ ನಾನು 50 ಚಿತ್ರಗಳನ್ನು ಕಂಪ್ಲೀಟ್ ಮಾಡುತ್ತೇನೆ. ದಕ್ಷಿಣ ಭಾರತದ ಎಲ್ಲಾ ನಾಲ್ಕು ಭಾಷೆಗಳಲ್ಲೂ ನಾನು ನಟಿಸಿದ್ದೇನೆ. ಹಿಂದಿ ಭಾಷೆಯ ಚಿತ್ರದಲ್ಲೂ ಅಭಿನಯಿಸಿದ್ದೇನೆ'' ''ಸ್ವರ್ಣ ಖಡ್ಗಂ'ನಲ್ಲಿ ಅಭಿನಯಿಸಿದ ಬಳಿಕ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ನನಗೆ ಇತ್ತು. ಇದೀಗ 'ಮಣಿಶಂಕರ್' ಸಿನಿಮಾ ಸಿಕ್ಕಿದೆ. ಇದೀಗ 'ಮಣಿಶಂಕರ್' ಸಿನಿಮಾ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. 'ಮಿರ್ಜಾಪುರ್', 'ಗ್ಯಾಂಗ್ಸ್ ಆಫ್ ವಸ್ಸೇಪುರ್' ರೀತಿಯಲ್ಲಿ 'ಮಣಿಶಂಕರ್' ಸಿನಿಮಾ ಇರಲಿದೆ. ಆಂಧ್ರ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ'' ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ.