ನಟ ಸಂಚಾರಿ ವಿಜಯ್ ಮಿದುಳು ನಿಷ್ಕ್ರಿಯ ಆಗಿದೆ ಎಂದ ವೈದ್ಯರು

ಕಳೆದ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಅವರಿಗೆ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಅವರ ಬ್ರೇನ್ ಡೆಡ್ ಆಗಿದೆ ಎಂದು ವೈದ್ಯರು ಅಧಿಕೃತ ಮಾಹಿತಿ ನೀಡಿದ್ದಾರೆ.

ನಟ ಸಂಚಾರಿ ವಿಜಯ್ ಮಿದುಳು ನಿಷ್ಕ್ರಿಯ ಆಗಿದೆ ಎಂದ ವೈದ್ಯರು
Linkup
ನಟ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂನ್ 12ರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ವಿಜಯ್ ಅವರ ತಲೆ, ತೊಡೆಗೆ ಭಾರೀ ಪೆಟ್ಟಾಗಿತ್ತು. ಇನ್ನು ಅವರ ಮಿದುಳಿನಲ್ಲಿ ರಕ್ತಸ್ರಾವ ಕೂಡ ಆಗುತ್ತಿತ್ತು. ಅನೇಕರು ವಿಜಯ್ ಅವರು ಬೇಗ ಹುಷಾರಾಗಲಿ ಎಂದು ಹಾರೈಸಿದ್ದರು. ಅಪೋಲೊ ಆಸ್ಪತ್ರೆಯ ವೈದ್ಯ ಅರುಣ್ ನಾಯಕ್ ಅವರು ಸಂಚಾರಿ ವಿಜಯ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಹೇಳಿದ್ದೇನು? ಸಂಚಾರಿ ವಿಜಯ್ ಅವರ ಬ್ರೇನ್‌ ಡೆಡ್ ಆಗಿದೆ, ಒಟ್ಟಾರೆಯಾಗಿ ವಿಜಯ್‌ಗೆ ಎರಡು ಬಾರಿ ಟೆಸ್ಟ್ ಮಾಡಲಾಗಿತ್ತು. ಈ ಎರಡೂ ಟೆಸ್ಟ್‌ನಲ್ಲಿ ಸಂಚಾರಿ ವಿಜಯ್ ಅವರ ಮಿದುಳು ನಿಷ್ಕ್ರಿಯಗೊಂಡಿರೋದು ಪಕ್ಕಾ ಆಗಿದೆ. ಇಲ್ಲಿಯವರೆಗೆ ಬ್ರೇನ್ ಫೆಲ್ಯೂರ್ ಆಗ್ತಿದೆ ಅಂತ ಹೇಳುತ್ತಿದ್ದೆವು, ಆದರೆ ಈಗ ಕರ್ನಾಟಕ ಸರ್ಕಾರದ ವತಿಯಿಂದ ಜೀವ ಸಾರ್ಥಕತೆ ಅವರು ಬ್ರೇನ್ ಡೆಡ್ ಆಗಿರೋದನ್ನು ಘೋಷಣೆ ಮಾಡಿದ್ದಾರೆ. ಕುಟುಂಬದವರ ಆಸೆಯ ಮೆರೆಗೆ ಅಂಗ ದಾನ ಪ್ರಕ್ರಿಯೆ ಶುರುವಾಗಲಿದೆ. ರಾತ್ರಿ 9.30ಗೆ ವಿಜಯ್ ಅವರ ಅಂಗ ತೆಗೆಯುವ ಪ್ರಕ್ರಿಯೆ ಆರಂಭವಾಗುವುದು, ಆ ನಂತರದಲ್ಲಿ ಅಂಗ ಕಸಿ ಆಗುವುದು. ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕಿಡ್ನಿ, ಲಿವರ್ ಬೇಕಿರುತ್ತದೆ, ಅಂತೆಯೇ ನಮ್ಮ ಆಸ್ಪತ್ರೆಯಲ್ಲಿ ಕೂಡ ಕೆಲ ಅಂಗ ಸಸಿ ನಡೆಯುವುದು. ನಾಳೆ ಬೆಳಗ್ಗೆಯವರೆಗೂ ಕೂಡ ಈ ಪ್ರಕ್ರಿಯೆ ನಡೆಯಬಹುದು. ಸಂಚಾರಿ ವಿಜಯ್ ಅವರ ಬ್ರೇನ್ ಡೆಡ್ ಆಗಿದೆ, ಆದರೆ ಅವರ ಪಲ್ಸ್ ರೇಟ್ ಎಲ್ಲವೂ ಸಮತೋಲನದಿಂದ ಇದೆ. ಅಂಗ ಕಸಿ ನಡೆಯುವವರೆಗೂ ವಿಜಯ್ ಅವರು ಸಮತೋಲನದಿಂದ ಇರುವಂತೆ ನೋಡಿಕೊಳ್ಳುತ್ತೇವೆ. ಲಿವರ್, ಎರಡು ಕಣ್ಣು, ಎರಡು ಕಿಡ್ನಿ ದಾನ ಮಾಡಲಾಗುವುದು ಎಂದು ಈಗಾಗಲೇ ಖಾತರಿಯಾಗಿದೆ, ಕುಟುಂಬದವರಿಗೆ ಯಾವಾಗ ದೇಹವನ್ನು ನೀಡಬೇಕು ಎಂಬುದನ್ನು ಮಾತನಾಡಿಲ್ಲ. ಸಾಕಷ್ಟು ಪ್ರಕ್ರಿಯೆಗಳಿವೆ, ಪೊಲೀಸ್ ಕಂಪ್ಲೇಂಟ್ ಕೂಡ ಆಗಿದೆ. ಹೀಗಾಗಿ ಈಗಲೇ ಈ ಬಗ್ಗೆ ಹೇಳಲಾಗದು. "ದಿನಾಂಕ 15-ಜೂನ್-2021 ರಂದು, ಸಂಚಾರಿ ವಿಜಯ್‌ರವರ ಪಾರ್ಥಿವ ಶರೀರದ ಅಂತಿಮ ದರ್ಶದ ವ್ಯವಸ್ಥೆಯನ್ನು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಮಾಡಲಾಗಿದೆ. ಅದೇ ದಿನ ಸಂಜೆ ಅಂತಿಮ ವಿಧಿವಿದಾನಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ನೆರವೇರಿಸಲಾಗುವುದು" ಎಂದು ನಿರ್ದೇಶಕ ಮಂಸೋರೆ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.