ಭ್ರಷ್ಟಾಚಾರಕ್ಕೆ ಲಗಾಮ್ ಹಾಕಲಿರುವ 'ರಿಯಲ್ ಸ್ಟಾರ್' ಉಪೇಂದ್ರ; ಹರಿಪ್ರಿಯಾ ಸಾಥ್

ಉಪೇಂದ್ರ ಮತ್ತು ಹರಿಪ್ರಿಯಾ ನಟನೆಯ ಲಗಾಮ್‌ ಸಿನಿಮಾದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಅದರ ಬಗ್ಗೆ ನಿರ್ದೇಶಕ ಕೆ ಮಾದೇಶ್‌ ಮತ್ತು ನಟ ಉಪೇಂದ್ರ ಲವಲವಿಕೆ ಜತೆ ಮಾತನಾಡಿದ್ದಾರೆ.

ಭ್ರಷ್ಟಾಚಾರಕ್ಕೆ ಲಗಾಮ್ ಹಾಕಲಿರುವ 'ರಿಯಲ್ ಸ್ಟಾರ್' ಉಪೇಂದ್ರ; ಹರಿಪ್ರಿಯಾ ಸಾಥ್
Linkup
(ಹರೀಶ್‌ ಬಸವರಾಜ್‌) ಅವರ ಸಿನಿಮಾಗಳಲ್ಲಿ ಸಾಮಾಜಿಕ ವಿಡಂಬನೆ ಇದ್ದೇ ಇರುತ್ತದೆ. ಪ್ರತಿಯೊಂದು ಚಿತ್ರದಲ್ಲೂಸಮಾಜಕ್ಕೆ ಬೇಕಾಗುವಂತಹ ಸಂದೇಶವನ್ನು ತಮ್ಮದೇ ರೀತಿಯಲ್ಲಿಉಪ್ಪಿ ಹೇಳುತ್ತಾರೆ. ಈ ಬಾರಿ ಅವರು ನಟಿಸುತ್ತಿರುವ 'ಲಗಾಮ್‌' ಸಿನಿಮಾದಲ್ಲಿಯೂ ಅಂತಹದ್ದೇ ವಿಷಯವನ್ನಿಟ್ಟುಕೊಂಡು ಕೆಲಸ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಅವರದ್ದು ಕೊಂಚ ನೆಗೆಟಿವ್‌ ಶೇಡ್‌ ಇರುವ ಪಾತ್ರ ಎಂದಿದ್ದಾರೆ ನಿರ್ದೇಶಕರು. ಕೆ. ಮಾದೇಶ್‌ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಚಿತ್ರೀಕರಣ ಇಷ್ಟೊತ್ತಿಗೆ ಶೇ. 50ರಷ್ಟು ಪೂರ್ಣಗೊಳ್ಳಬೇಕಿತ್ತು. ಲಾಕ್‌ಡೌನ್‌ ಪರಿಣಾಮ ಅದು ಮುಂದಕ್ಕೆ ಹೋಗಿದ್ದು, ಇದೇ 28ರಿಂದ ಶೂಟಿಂಗ್‌ ಮಾಡಲು ಪ್ಲಾನ್‌ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಎಲ್ಲರೀತಿಯ ತಯಾರಿಯನ್ನೂ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳನ್ನು ಇಟ್ಟುಕೊಂಡು ವಿಡಂಬನಾತ್ಮಕವಾಗಿ ಸಿನಿಮಾ ಕಟ್ಟಿಕೊಡಲಿದ್ದಾರಂತೆ ನಿರ್ದೇಶಕರು. 'ಈಗಷ್ಟೇ ಎಲ್ಲವನ್ನೂ ಪ್ಲಾನ್‌ ಮಾಡಿಕೊಳ್ಳುತ್ತಿದ್ದೇವೆ. 'ಲಗಾಮ್‌' ಒಂದು ವಿಶೇಷ ಸಿನಿಮಾ. ಭ್ರಷ್ಟಾಚಾರ, ಐಷಾರಾಮಿ ಜೀವನ ಹೀಗೆ ನಾನಾ ವಿಷಯಗಳಿಗೆ ಲಗಾಮು ಹಾಕುವ ಕಥೆ ಸಿನಿಮಾದಲ್ಲಿದೆ. ಉಪೇಂದ್ರ ಅವರದ್ದು ಕೊಂಚ ನೆಗೆಟಿವ್‌ ಶೇಡ್‌ ಇರುವ ಪಾತ್ರ. ಅದಕ್ಕಾಗಿ ಅವರು ತಮ್ಮ ಲುಕ್‌ ಕೂಡ ಬದಲಾಯಿಸಿಕೊಂಡಿದ್ದಾರೆ' ಎಂದಿದ್ದಾರೆ ನಿರ್ದೇಶಕ ಮಾದೇಶ್‌. 'ಈ ಸಿನಿಮಾವನ್ನು ಬಹಳ ದೊಡ್ಡದಾಗಿ ಮಾಡುತ್ತಿದ್ದಾರೆ. ವಿಡಂಬನೆ, ಭ್ರಷ್ಟಾಚಾರ ಸೇರಿದಂತೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ನನ್ನ ಪಾತ್ರವೂ ವಿಶಿಷ್ಟವಾಗಿದೆ. ಅದರ ಬಗ್ಗೆ ನಾನು ಹೆಚ್ಚಿಗೆ ಹೇಳಲಾಗುವುದಿಲ್ಲ. ನಿರ್ದೇಶಕರು ಏನು ಹೇಳಿದ್ದಾರೋ ಅದೇ ಫೈನಲ್‌. ಸಿನಿಮಾದಲ್ಲಿಯೇ ಎಲ್ಲವನ್ನೂ ನೋಡಬೇಕು ಎಂಬುದು ನನ್ನಾಸೆ' ಎಂದಿದ್ದಾರೆ ಉಪೇಂದ್ರ. ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಪ್ರಭು ಕೂಡ ನಟಿಸಲಿದ್ದಾರೆ. ಅವರನ್ನು ಬಿಟ್ಟರೆ ಶೋಭರಾಜ್‌, ರಂಗಾಯಣ ರಘು, ಸಾಧುಕೋಕಿಲಾ ನಟಿಸುತ್ತಿದ್ದಾರೆ. ಕಬ್ಜ ಕೂಡ ಆರಂಭ ಉಪೇಂದ್ರ ಅವರಿಗೆ ಈಗ 'ಲಗಾಮ್‌' ಮತ್ತು 'ಕಬ್ಜ' ಎರಡೂ ಚಿತ್ರಗಳಿಗೆ ಒಟ್ಟಿಗೆ ಶೂಟಿಂಗ್‌ ಆರಂಭಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 'ಕಬ್ಜ'ಗಾಗಿ ಚಂದ್ರು ಕೋಟ್ಯಂತರ ರೂಪಾಯಿ ಸೆಟ್‌ ಹಾಕಿದ್ದಾರೆ. 'ಲಗಾಮ್‌' ಚಿತ್ರತಂಡ ಮೈಸೂರಿನಲ್ಲಿ ಎಲ್ಲವನ್ನೂ ಸಿದ್ಧಮಾಡಿಕೊಂಡ ಸಮಯದಲ್ಲಿ ಲಾಕ್‌ಡೌನ್‌ ಆಗಿತ್ತು. 'ಕಬ್ಜ ಮತ್ತು ಲಗಾಮ್‌ ಎರಡರ ಚಿತ್ರೀಕರಣವನ್ನೂ ಆರಂಭಿಸಬೇಕಿದೆ. ಅದೇ ವಿಚಾರಕ್ಕಾಗಿ ಯೋಜನೆ ತಯಾರಿಸುತ್ತಿದ್ದೇವೆ. ಎರಡೂ ಸಿನಿಮಾಗಳ ನಿರ್ದೇಶಕರು ಮತ್ತು ನಿರ್ಮಾಪಕರ ಜತೆ ಮೀಟಿಂಗ್‌ ಮಾಡುತ್ತಿದ್ದೇನೆ' ಎಂದು ಉಪ್ಪಿ ಹೇಳಿದರು. ಎಲ್ಲದಕ್ಕೂ ಲಗಾಮು ಹಾಕಲು ಹೊರಡುವವನ ಕಥೆ ಇದು. ಉಪೇಂದ್ರ ಅವರಿಗೆ ಬಹಳ ಡಿಫರೆಂಟ್‌ ಆದ ಲುಕ್‌ ಮತ್ತು ವಿಶಿಷ್ಟ ಸಿನಿಮಾ. ಆರಂಭದಿಂದಲೂ ಅವರ ಪಾತ್ರಕ್ಕೆ ನೆಗೆಟಿವ್‌ ಶೇಡ್‌ ಇರುತ್ತದೆ ಎಂದು ನಿರ್ದೇಶಕ ಕೆ. ಮಾದೇಶ್‌ ಹೇಳಿದ್ದಾರೆ. ನಿರ್ದೇಶಕರು ಹೇಳಿದಂತೆ ನೆಗೆಟಿವ್‌ ಶೇಡ್‌ ಇದೆ. ಅದು ಯಾಕೆ ಏನು ಎತ್ತ ಎಂಬುದಕ್ಕೆ ಸಿನಿಮಾ ನೊಡಬೇಕು. ವಿಡಂಬನಾತ್ಮಕವಾದ ಸಿನಿಮಾ. ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ ಎಂದು ಖುಷಿಯಾಗಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ.