![](https://vijaykarnataka.com/photo/88183466/photo-88183466.jpg)
ಜೂ. ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ 'ಆರ್‌ಆರ್‌ಆರ್' ಸಿನಿಮಾದ ಟ್ರೈಲರ್ ಕೊನೆಗೂ ರಿಲೀಸ್ ಆಗಿದೆ. ಡಿ.3ರಂದು ರಿಲೀಸ್ ಆಗಬೇಕಿದ್ದ ಟ್ರೈಲರ್ ಡಿ.9ರಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ಐದು ಭಾಷೆಗಳಲ್ಲಿ ರಿಲೀಸ್ ಆಗಿರುವ ಟ್ರೈಲರ್ ಅನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ರಾಜಮೌಳಿಯ ಮತ್ತೊಂದು ಅದ್ದೂರಿ ಕನಸಿಗೆ ಬಹುಪರಾಕ್ ಹೇಳಿದ್ದಾರೆ. ಈ ಮಧ್ಯೆ ಕನ್ನಡಿಗರ ಮನಗೆಲ್ಲುವ ಕೆಲಸವೊಂದನ್ನು & ಟೀಮ್ ಮಾಡಿದೆ. ಏನದು? ಮುಂದೆ ಓದಿ.
ಕನ್ನಡದಲ್ಲಿ ಡಬ್ ಮಾಡಿದ ತಾರಕ್ & ಚರಣ್'ಆರ್‌ಆರ್‌ಆರ್' ಸಿನಿಮಾವನ್ನು ಕನ್ನಡದಲ್ಲೂ ರಿಲೀಸ್ ಮಾಡಲಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಕ್ಯಾರೆಕ್ಟರ್ ಟೀಸರ್‌ನಲ್ಲಿ ರಾಮ್ ಚರಣ್ ಮತ್ತು ಎನ್‌ಟಿಆರ್ ಕನ್ನಡದಲ್ಲಿ ವಾಯ್ಸ್ ನೀಡಿದ್ದರು. ಆ ಟೀಸರ್‌ಗಳನ್ನು ನೋಡಿದ ಕನ್ನಡಿಗರ ಖುಷಿಯಾಗಿದ್ದರು. ಇದೀಗ ಅದನ್ನೇ ಟ್ರೈಲರ್‌ನಲ್ಲೂ ಮುಂದುವರಿಸಲಾಗಿದೆ. ಇಲ್ಲಿಯೂ ಕೂಡ ಇಬ್ಬರು ಕನ್ನಡದಲ್ಲೇ ಡೈಲಾಗ್ ಹೇಳಿದ್ದಾರೆ. ಸಹಜವಾಗಿ ಇದು ಕನ್ನಡಿಗರಿಗೆ ಖುಷಿ ನೀಡಿದೆ. ಮೂಲ ಭಾಷೆಯಲ್ಲಿ ನಟಿಸಿದ ಕಲಾವಿದರ ಧ್ವನಿಯನ್ನೇ ಎಲ್ಲ ಭಾಷೆಯಲ್ಲೂ ಕೇಳಬೇಕು ಎಂದು ಸಿನಿಪ್ರಿಯರು ಅಂದುಕೊಂಡಿರುತ್ತಾರೆ. ಅದೀಗ ಆರ್‌ಆರ್‌ಆರ್‌ನಲ್ಲಿ ಸಾಧ್ಯವಾಗುತ್ತಿದೆ.
ಕನ್ನಡಕ್ಕೆ ಈವರೆಗೂ ಅನೇಕ ಸಿನಿಮಾಗಳು ಡಬ್ ಆಗಿವೆ. ಆದರೆ, ಕನ್ನಡದಲ್ಲಿ ಧ್ವನಿ ನೀಡಲು ಆ ಸಿನಿಮಾಗಳ ಕಲಾವಿದರು ಮನಸ್ಸು ಮಾಡಿಲ್ಲ. ಡಬ್ಬಿಂಗ್ ಕಲಾವಿದರ ಮೂಲಕ ಮೂಲ ಚಿತ್ರಗಳ ಪಾತ್ರಗಳಿಗೆ ಡಬ್ ಮಾಡಿಸಲಾಗುತ್ತದೆ. ಆದರೆ, ''ನಲ್ಲಿ ಮಾತ್ರ ಆ ರೀತಿ ಮಾಡಿಲ್ಲ. ಚಿತ್ರದ ಇಬ್ಬರು ಹೀರೋಗಳಿಂದಲೇ ಕನ್ನಡದಲ್ಲೂ ಡಬ್ ಮಾಡಿಸಲಾಗಿದೆ ಮತ್ತು ಅದು ನೀಟ್ ಆಗಿ ಮೂಡಿಬಂದಿದೆ. ಸದ್ಯ ಐದು ಭಾಷೆಗಳಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಎನ್‌ಟಿಆರ್ ಮತ್ತು ರಾಮ್ ಚರಣ್ ಧ್ವನಿ ನೀಡಿದ್ದಾರೆ. ಮಲಯಾಳಂ ಭಾಷೆಗೆ ಮಾತ್ರ ಬೇರೆಯವರಿಂದ ಡಬ್ ಮಾಡಿಸಲಾಗಿದೆ.
ಎನ್‌ಟಿಆರ್‌ಗೆ ಇದೆ ಕರ್ನಾಟಕದ ನಂಟುಇನ್ನು, ಚಿತ್ರದ ಹೀರೋಗಳಲ್ಲಿ ಒಬ್ಬರಾದ ಜೂ. ಎನ್‌ಟಿಆರ್‌ಗೆ ಕರ್ನಾಟಕದ ಜೊತೆಗೆ ವಿಶೇಷ ನಂಟು ಇದೆ. ಅವರಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುತ್ತದೆ. ಅದಕ್ಕೆ ಕಾರಣ, ಅವರ ತಾಯಿ. ಹೌದು, ಜೂ. ಎನ್‌ಟಿಆರ್ ಅವರ ತಾಯಿ ಶಾಲಿನಿ ಕುಂದಾಪುರದವರು. ಹಾಗಾಗಿ, ಮಾತೃ ಭಾಷೆ ತೆಲುಗು ಜೊತೆಗೆ ಅಮ್ಮನ ಭಾಷೆಯನ್ನು ತಾರಕ್ ಕಲಿತಿದ್ದಾರೆ. ಇದೀಗ ಅವರೇ ಕನ್ನಡ ವರ್ಷನ್‌ಗೆ ಡಬ್ ಮಾಡಿರುವುದು ಕರ್ನಾಟಕದ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಚಿತ್ರವನ್ನು ಡಿವಿವಿ ದಾನಯ್ಯ 450 ಕೋಟಿ ರೂ.ಗಳಿಗೂ ಅಧಿಕ ಖರ್ಚು ಮಾಡಿ ನಿರ್ಮಾಣ ಮಾಡಿದ್ದಾರೆ. ಜನವರಿ 7ರಂದು ವಿಶ್ವಾದ್ಯಂತ ಈ ಸಿನಿಮಾ ತೆರೆಗೆ ಬರುತ್ತಿದೆ.