ಸ್ವತಂತ್ರ ಭಾರತ ಕಂಡ ಅತ್ಯಂತ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ: ಅಮಿತ್ ಶಾ ಬಣ್ಣನೆ

2001 ರಲ್ಲಿ ಪಕ್ಷ ಅವರ ಸಾಮರ್ಥ್ಯ ಗುರುತಿಸಿ ಗುಜರಾತ್‌ ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರಿಸಿತು. ಆಗ ಅವರು ಏನೂ ಆಗಿರಲಿಲ್ಲ. ಪಂಚಾಯಿತಿ ಎಲೆಕ್ಷನ್‌ನಲ್ಲಿ ಕೂಡ ಸ್ಪರ್ಧಿಸಿರಲಿಲ್ಲ. ಕೇವಲ ಎಂಎ ಸ್ನಾತಕೋತ್ತರ ಪದವಿ ಪಡೆದು ಪಕ್ಷದ ಸೇವೆ ಮಾಡಿಕೊಂಡಿದ್ದರು. ಅದೇನು ದೊಡ್ಡ ಪದವಿಯೂ ಆಗಿರಲಿಲ್ಲ. ಇಂತಹ ಸಾಮಾನ್ಯ ಸ್ಥಿತಿಯಲ್ಲಿದ್ದಾಗಲೇ ನರೇಂದ್ರ ಮೋದಿ ಅವರಿಗೆ ಸಿಎಂ ಸ್ಥಾನ ಎನ್ನುವ ದೊಡ್ಡ ಜವಾಬ್ದಾರಿ ವಹಿಸಲಾಯಿತು ಎಂದು ಅಮಿತ್ ಶಾ ಹೇಳಿದರು.

ಸ್ವತಂತ್ರ ಭಾರತ ಕಂಡ ಅತ್ಯಂತ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ: ಅಮಿತ್ ಶಾ ಬಣ್ಣನೆ
Linkup
ಹೊಸದಿಲ್ಲಿ: ಪ್ರಧಾನಿ ಅವರು ಸ್ವತಂತ್ರ ಭಾರತ ಕಂಡ ಅತ್ಯಂತ ಯಶಸ್ವಿ ಪ್ರಧಾನ ಮಂತ್ರಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಣ್ಣಿಸಿದ್ದಾರೆ. ‘2014 ರಿಂದ ದೇಶದಲ್ಲಿ ರಾಮ ರಾಜ್ಯ ಸೃಷ್ಟಿಸಿದ ಶ್ರೇಯಸ್ಸು ಮೋದಿ ಅವರಿಗೆ ಸಲ್ಲುತ್ತದೆ’ ಎಂದಿರುವ ಕೇಂದ್ರ ಗೃಹ ಸಚಿವ ಅವರು, ‘'ಜನ 30 ವರ್ಷ ಕಾಯ್ದು ಅತ್ಯಂತ ತಾಳ್ಮೆಯಿಂದ ಬಿಜೆಪಿಗೆ ಮತ ಹಾಕಿ ಅಧಿಕಾರಕ್ಕೆ ತಂದರು. 1960 ರಿಂದ 2014 ರವರೆಗೆ ಜನರ ತಲೆಯಲ್ಲಿ ಗೊಂದಲಗಳೇ ತುಂಬಿದ್ದವು. ಬಹುಪಕ್ಷಗಳ ಸರಕಾರ ಒಳ್ಳೆಯದೋ ಕೆಟ್ಟದ್ದೋ ಎನ್ನುವ ಗೊಂದಲ ಅವರಲ್ಲಿ ಇತ್ತು. 2014 ರವರೆಗೆ ರಾಮ ರಾಜ್ಯದ ಕನಸು ನುಚ್ಚು ನೂರಾಗಿ ಬಿದ್ದಿತ್ತು ಎಂದು ಅಮಿತ್ ಶಾ ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ರಾಜ್ಯದ ಮುಖ್ಯಮಂತ್ರಿಯಾಗಿ, ನಂತರ ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿ ಒಟ್ಟು 20 ವರ್ಷ ಪೂರೈಸಿದ ಅಂಗವಾಗಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ‘ನರೇಂದ್ರ ಮೋದೀ ಅವರು ಅದ್ಭುತ ಸಂಘಟನಾ ಚಾತುರ್ಯ ಉಳ್ಳ ನಾಯಕ. 2001 ರಲ್ಲಿ ಪಕ್ಷ ಅವರ ಸಾಮರ್ಥ್ಯ ಗುರುತಿಸಿ ಗುಜರಾತ್‌ ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರಿಸಿತು. ಆಗ ಅವರು ಏನೂ ಆಗಿರಲಿಲ್ಲ. ಪಂಚಾಯಿತಿ ಎಲೆಕ್ಷನ್‌ನಲ್ಲಿ ಕೂಡ ಸ್ಪರ್ಧಿಸಿರಲಿಲ್ಲ. ಕೇವಲ ಎಂಎ ಸ್ನಾತಕೋತ್ತರ ಪದವಿ ಪಡೆದು ಪಕ್ಷದ ಸೇವೆ ಮಾಡಿಕೊಂಡಿದ್ದರು. ಅದೇನು ದೊಡ್ಡ ಪದವಿಯೂ ಆಗಿರಲಿಲ್ಲ ಎಂದು ಹೇಳಿದರು. ಇಂತಹ ಸಾಮಾನ್ಯ ಸ್ಥಿತಿಯಲ್ಲಿದ್ದಾಗಲೇ ನರೇಂದ್ರ ಮೋದಿ ಅವರಿಗೆ ಸಿಎಂ ಸ್ಥಾನ ಎನ್ನುವ ದೊಡ್ಡ ಜವಾಬ್ದಾರಿ ವಹಿಸಲಾಯಿತು ಎಂದ ಅಮಿತ್ ಶಾ, ಅಂದಿಗೆ ಗುಜರಾತಿನ ಸ್ಥಿತಿ ನೆಟ್ಟಗಿರಲಿಲ್ಲ. ಕೆಟ್ಟ ಸ್ಥಿತಿಯಲ್ಲಿ ಅಧಿಕಾರ ಹಿಡಿದ ನರೇಂದ್ರ ಮೋದಿ ಅವರು ಯಶಸ್ಸಿನ ರೂವಾರಿಯಾಗಿ ಮಿಂಚಿದರು ಎಂದು ಬಣ್ಣಿಸಿದರು. ಸುಧಾರಣೆ ಎಂದರೆ ಪರಿಸ್ಥಿತಿಯನ್ನು ಬದಲಾಯಿಸುವುದೇ ವಿನಾ ವಿಧಾನವನ್ನು ಬದಲಾಯಿಸುವುದಲ್ಲ. 2014 ರಲ್ಲಿ ಪ್ರಧಾನಿಯಾಗಿ ಬಂದ ನಂತರ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಬದಲಿಸುವ ಮೂಲಕ ದೇಶದಲ್ಲಿ ಅಗಾಧ ಸುಧಾರಣೆ ತಂದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವರಿಸಿದರು.