ಸ್ವ-ಸಹಾಯ ಗುಂಪುಗಳಿಗೆ ಸಾಲದ ಮಿತಿ ಏರಿಕೆ: ಉತ್ನನ್ನಗಳಿಗೆ ಇ-ಕಾಮರ್ಸ್‌ ತಾಣ

ಆರ್‌ಬಿಐ ಸ್ವಸಹಾಯ ಗುಂಪುಗಳಿಗೆ ಅಡಮಾನ ಅಥವಾ ಮೇಲಾಧಾರ ರಹಿತ ಸಾಲದ ಮೊತ್ತವನ್ನು ಈಗಿನ 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗೆ ವಿಸ್ತರಿಸಿದೆ. ಸ್ವಸಹಾಯ ಗುಂಪುಗಳಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಇ-ಕಾಮರ್ಸ್‌ ವೇದಿಕೆಯನ್ನು ಕಲ್ಪಿಸಲಿದೆ

ಸ್ವ-ಸಹಾಯ ಗುಂಪುಗಳಿಗೆ ಸಾಲದ ಮಿತಿ ಏರಿಕೆ: ಉತ್ನನ್ನಗಳಿಗೆ ಇ-ಕಾಮರ್ಸ್‌ ತಾಣ
Linkup
ಹೊಸದಿಲ್ಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ವಸಹಾಯ ಗುಂಪುಗಳಿಗೆ ಅಡಮಾನ ಅಥವಾ ಮೇಲಾಧಾರ ರಹಿತ ಸಾಲದ ಮೊತ್ತವನ್ನು ಈಗಿನ 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗೆ ವಿಸ್ತರಿಸಿದೆ. ದೀನ ದಯಾಳ್‌ ಅಂತ್ಯೋದಯ ಯೋಜನೆ-ನ್ಯಾಶನಲ್‌ ರೂರಲ್‌ ಲೈವ್ಲಿಹುಡ್ಸ್‌ ಮಿಶನ್‌ ಯೋಜನೆಯ ಅಡಿಯಲ್ಲಿ (ಡಿಎವೈ-ಎನ್‌ ಆರ್‌ ಎಲ್‌ಎಂ) ಮೇಲಾಧಾರ ರಹಿತ ಸಾಲದ ಮೊತ್ತವನ್ನು 20 ಲಕ್ಷ ರೂ.ಗೆ ಏರಿಸಲಾಗಿದೆ. ಈ ಯೋಜನೆಯು ಬಡ ಮಹಿಳೆಯರಿಗೆ ಹಣಕಾಸು ಸೌಲಭ್ಯ ಒದಗಿಸಿ ಸ್ವ ಉದ್ಯೋಗಕ್ಕೆ ಸಹಕರಿಸುವ ಉದ್ದೇಶ ಹೊಂದಿದೆ. ಪಡೆಯಲು ಸ್ವಸಹಾಯ ಗುಂಪುಗಳ ಬ್ಯಾಂಕ್‌ ಉಳಿತಾಯ ಖಾತೆಗಳಲ್ಲಿಇಂತಿಷ್ಟು ಹಣ ಠೇವಣಿ ಇಡಬೇಕು ಎಂಬ ನಿಯಮಗಳೂ ಇರುವುದಿಲ್ಲ. ಸರಕಾರ ಸ್ವಸಹಾಯ ಗುಂಪುಗಳಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಇ-ಕಾಮರ್ಸ್‌ ವೇದಿಕೆಯನ್ನು ಕಲ್ಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸ್ವಾತಂತ್ರೊತ್ರ್ಯೕತ್ಸವ ಭಾಷಣದಲ್ಲಿಈ ಬಗ್ಗೆ ಪ್ರಸ್ತಾಪಿಸಿದ್ದಾರೆ. '' ದೇಶದಲ್ಲಿ 8 ಕೋಟಿ ಗ್ರಾಮೀಣ ಮಹಿಳೆಯರು ಸ್ವ ಸಹಾಯ ಗುಂಪುಗಳೊಂದಿಗೆ ಗುರುತಿಸಿಕೊಂಡಿದ್ದು, ನಾನಾ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಇ-ಕಾಮರ್ಸ್‌ ಮೂಲಕ ದೇಶಿ-ವಿದೇಶಿ ಮಾರುಕಟ್ಟೆ ಕಲ್ಪಿಸಲು ಸರಕಾರ ಮುಂದಾಗಿದೆ'' ಎಂದರು. ನಮ್ಮ ಗ್ರಾಮೀಣ ಪ್ರದೇಶಗಳು ತ್ವರಿತವಾಗಿ ಬದಲಾಗುತ್ತಿವೆ. ರಸ್ತೆ, ವಿದ್ಯುತ್‌ ಸಂಪರ್ಕ ಹೆಚ್ಚುತ್ತಿದೆ. ಆಪ್ಟಿಕ್‌ ಫೈಬರ್‌ ನೆಟ್‌ವರ್ಕ್ನಿಂದ ಇಂಟರ್‌ ನೆಟ್‌ ಸಂಪರ್ಕ ಕೂಡ ವೃದ್ಧಿಸುತ್ತಿದೆ ಎಂದರು.