ಆದಾಯ ಕಡಿಮೆ, ಗ್ರಾಹಕರ ವಿಶ್ವಾಸದ ಮಟ್ಟ ದಾಖಲೆಯ ಕುಸಿತ - ಆರ್‌ಬಿಐ ವರದಿ

ಜನತೆಯ ಆದಾಯ ಮಟ್ಟದ ಇಳಿಕೆಯಾಗುತ್ತಿದ್ದು, ದಿನ ನಿತ್ಯದ ಖರ್ಚು ವೆಚ್ಚಗಳು ಏರುತ್ತಿವೆ. ಹೀಗಾಗಿ ಜುಲೈನಲ್ಲಿ ಗ್ರಾಹಕರ ವಿಶ್ವಾಸದ ಮಟ್ಟ ದಾಖಲೆಯ ಕುಸಿತಕ್ಕೀಡಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ನ ವರದಿ ತಿಳಿಸಿದೆ.

ಆದಾಯ ಕಡಿಮೆ, ಗ್ರಾಹಕರ ವಿಶ್ವಾಸದ ಮಟ್ಟ ದಾಖಲೆಯ ಕುಸಿತ - ಆರ್‌ಬಿಐ ವರದಿ
Linkup
ಮುಂಬಯಿ: ಭಾರತದಲ್ಲಿ ಜನತೆಯ ಮಟ್ಟದಲ್ಲಿ ಇಳಿಮುಖವಾಗಿದ್ದು ದಿನ ನಿತ್ಯದ ಖರ್ಚು ವೆಚ್ಚಗಳು ಏರುತ್ತಿವೆ. ಹೀಗಾಗಿ ಜುಲೈನಲ್ಲಿ ಗ್ರಾಹಕರ ವಿಶ್ವಾಸದ ಮಟ್ಟ ದಾಖಲೆಯ ಕುಸಿತಕ್ಕೀಡಾಗಿದೆ ಎಂದು ವರದಿ ತಿಳಿಸಿದೆ. ಹೀಗಿದ್ದರೂ, ಭವಿಷ್ಯದ ಬಗ್ಗೆ ಜನತೆ ಆಶಾವಾದಿಗಳಾಗಿಯೂ ಇದ್ದಾರೆ ಎಂದು ಹೇಳಿದೆ. ಆರ್‌ಬಿಐನ ಗ್ರಾಹಕ ವಿಶ್ವಾಸ ಸಮೀಕ್ಷಾ ಸೂಚ್ಯಂಕ ಮೇನಲ್ಲಿ 48.5 ಮತ್ತು ಜುಲೈನಲ್ಲಿ 48.6 ಅಂಕ ಗಳಿಸಿದ್ದು, ಇನ್ನೂ ನಿರಾಶಾದಾಯಕ ಸ್ಥಿತಿಯಲ್ಲಿದೆ. 100ಕ್ಕಿಂತ ಕೆಳಗಿನ ಮಟ್ಟ ಜನತೆ ಆರ್ಥಿಕವಾಗಿ ನಿರಾಶಾದಾಯಕ ಸ್ಥಿತಿಯಲ್ಲಿರುವುದನ್ನು ಬಿಂಬಿಸುತ್ತದೆ. ಹೀಗಿದ್ದರೂ ಭವಿಷ್ಯದ ನಿರೀಕ್ಷೆಗಳ ಬಗ್ಗೆ 96.4ರಿಂದ 104ಕ್ಕೆ ಅಂಕ ವೃದ್ಧಿಸಿದ್ದು, ಜನತೆ ಆಶಾವಾದಿಗಳಾಗಿದ್ದಾರೆ ಎಂದು ತಿಳಿಸಿದೆ. ಒಟ್ಟಾರೆಯಾಗಿ ಸದ್ಯಕ್ಕೆ ಜನ ಅಗತ್ಯ ವಸ್ತು ಮತ್ತು ಸೇವೆ ಹೊರತುಪಡಿಸಿ ಉಳಿದ ಖರ್ಚು ವೆಚ್ಚಗಳನ್ನು ನಿಯಂತ್ರಿಸಿದ್ದಾರೆ. ಹೀಗಿದ್ದರೂ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದಿದೆ. ಒಟ್ಟು 13 ನಗರಗಳಲ್ಲಿ 5,384 ಮಂದಿಯನ್ನು ಗ್ರಾಹಕ ವಿಶ್ವಾಸ ಸಮೀಕ್ಷಾ ಸೂಚ್ಯಂಕಕ್ಕಾಗಿ ಸಂದರ್ಶಿಸಲಾಗಿದೆ.