'ಸಲಾಂ ಸೋಲ್ಜರ್': ಯೋಧನಾಗಿ ಕಾಣಿಸಿಕೊಂಡ ‘ಜೇಮ್ಸ್’ ಪುನೀತ್ ರಾಜ್‌ಕುಮಾರ್

ಇಂದು 73ನೇ ಗಣರಾಜ್ಯೋತ್ಸವ. ರಿಪಬ್ಲಿಕ್ ಡೇ ಪ್ರಯುಕ್ತ ‘ಜೇಮ್ಸ್’ ಚಿತ್ರದ ನೂತನ ಪೋಸ್ಟರ್ ರಿಲೀಸ್ ಆಗಿದೆ. ‘ಜೇಮ್ಸ್’ ಸಿನಿಮಾದ ಹೊಸ ಪೋಸ್ಟರ್‌ನಲ್ಲಿ ಯೋಧನಾಗಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ.

'ಸಲಾಂ ಸೋಲ್ಜರ್': ಯೋಧನಾಗಿ ಕಾಣಿಸಿಕೊಂಡ ‘ಜೇಮ್ಸ್’ ಪುನೀತ್ ರಾಜ್‌ಕುಮಾರ್
Linkup
ಪವರ್ ಸ್ಟಾರ್ ಅಭಿನಯದ ಕಡೆಯ ಸಿನಿಮಾ ‘’. ನಿರ್ದೇಶನ ಮಾಡಿರುವ ‘ಜೇಮ್ಸ್’ ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿ ಇರುವಾಗಲೇ ಪುನೀತ್ ರಾಜ್‌ಕುಮಾರ್ ಹಠಾತ್ ನಿಧನ ಹೊಂದಿದರು. ‘ಜೇಮ್ಸ್’ ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಾರ್ಚ್‌ 17 ರಂದು ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದೇ ‘ಜೇಮ್ಸ್’ ಚಿತ್ರವನ್ನು ತೆರೆಗೆ ತರಲು ಸಿನಿಮಾ ತಂಡ ಸಕಲ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಹೀಗಿರುವಾಗಲೇ, ಇಂದು ‘ಜೇಮ್ಸ್’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ‘ಜೇಮ್ಸ್’ ಹೊಸ ಪೋಸ್ಟರ್ ರಿಲೀಸ್ ಇಂದು 73ನೇ ಗಣರಾಜ್ಯೋತ್ಸವ. ರಿಪಬ್ಲಿಕ್ ಡೇ ಪ್ರಯುಕ್ತ ‘ಜೇಮ್ಸ್’ ಚಿತ್ರದ ನೂತನ ಪೋಸ್ಟರ್ ರಿಲೀಸ್ ಆಗಿದೆ. ‘ಜೇಮ್ಸ್’ ಸಿನಿಮಾದ ಹೊಸ ಪೋಸ್ಟರ್‌ನಲ್ಲಿ ಯೋಧನಾಗಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪೋಸ್ಟರ್‌ನಲ್ಲಿ ‘ಸಲಾಂ ಸೋಲ್ಜರ್.. ದೇಶಕ್ಕೆ ನೀನೆ ಪವರ್’ ಎಂದು ಬರೆಯಲಾಗಿದೆ. ಆ ಮೂಲಕ ದೇಶ ಕಾಯುವ ಸೈನಿಕರಿಗೆ ‘ಜೇಮ್ಸ್’ ಚಿತ್ರತಂಡ ಸಲಾಂ ಎಂದಿದೆ. ಹಾಗೇ, ದೇಶದ ಎಲ್ಲಾ ಪ್ರಜೆಗಳಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದೆ. ‘ಜೇಮ್ಸ್’ ಚಿತ್ರದ ಹೊಸ ಪೋಸ್ಟರ್ ಹಾಗೂ ಸೈನಿಕನ ಲುಕ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ಕಂಡು ಅಭಿಮಾನಿಗಳು ಉಘೇ ಉಘೇ ಎಂದಿದ್ದಾರೆ. ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ ‘ಜೇಮ್ಸ್’ ಪುನೀತ್ ರಾಜ್‌ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ವಿಚಾರ ಇದೀಗಷ್ಟೇ ಬಿಡುಗಡೆಯಾಗಿರುವ ‘ಜೇಮ್ಸ್’ ಚಿತ್ರದ ಪೋಸ್ಟರ್‌ನಲ್ಲಿ ಸ್ಪಷ್ಟವಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ‘ಜೇಮ್ಸ್’ ತೆರೆಗೆ ಬರಲಿದೆ. ಈ ಹಿಂದೆ ‘ಬಹದ್ದೂರ್’, ‘ಭರ್ಜರಿ’, ‘ಭರಾಟೆ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಚೇತನ್ ಕುಮಾರ್ ‘ಜೇಮ್ಸ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ‘ಜೇಮ್ಸ್’ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ‘ಕಾಮಿಡಿ ಕಿಲಾಡಿ’ ಖ್ಯಾತಿಯ ನಯನಾ, ಹಂಸಾ ಪ್ರತಾಪ್, ಕಾವ್ಯಾ ಶಾಸ್ತ್ರೀ, ಸಮೀಕ್ಷಾ, ಹರ್ಷ, ಶೈನ್ ಶೆಟ್ಟಿ, ಶ್ರೀಕಾಂತ್, ಅನು ಪ್ರಭಾಕರ್ ಮುಂತಾದವರ ದೊಡ್ಡ ತಾರಾಬಳಗವೇ ಇದೆ. ‘ಜೇಮ್ಸ್’ ಚಿತ್ರದಲ್ಲಿದ್ದಾರೆ ರಾಘಣ್ಣ, ಶಿವಣ್ಣ ತಮ್ಮ ಮೂವರು ಮಕ್ಕಳು ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬುದು ದಿ.ಪಾರ್ವತಮ್ಮ ರಾಜ್‌ಕುಮಾರ್‌ ಅವರ ಕನಸಾಗಿತ್ತು. ಆ ಕನಸು ಇದೀಗ ‘ಜೇಮ್ಸ್’ ಮೂಲಕ ನನಸಾಗಿದೆ. ಅಪ್ಪು ನಟನೆಯ ‘ಜೇಮ್ಸ್’ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಕೂಡ ಅಭಿನಯಿಸಿದ್ದಾರೆ. ‘ಜೇಮ್ಸ್’ ಚಿತ್ರದಲ್ಲಿ ಅಪ್ಪು ಧ್ವನಿ ಇರಲಿದೆಯೇ? ‘ಜೇಮ್ಸ್’ ಚಿತ್ರಕ್ಕೆ ಪುನೀತ್ ರಾಜ್‌ಕುಮಾರ್ ಡಬ್ಬಿಂಗ್ ಮಾಡಿರಲಿಲ್ಲ. ಹೀಗಾಗಿ, ಶೂಟಿಂಗ್ ಸಮಯದಲ್ಲಿ ರೆಕಾರ್ಡ್ ಆಗಿರುವ ಅಪ್ಪು ಧ್ವನಿಯನ್ನೇ ಉಳಿಸಿಕೊಳ್ಳಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಒಂದು ವೇಳೆ ಅದು ಸರಿಯಾಗದೇ ಇದ್ದರೆ, ಶಿವರಾಜ್ ಕುಮಾರ್ ಡಬ್ಬಿಂಗ್ ಮಾಡಲಿದ್ದಾರೆ.