ನಿವೇದಾ ಸ್ವಿಗ್ಗಿ ಊಟದಲ್ಲಿ ಜಿರಳೆ, ಶಬಾನಾ ಅಜ್ಮಿಗೆ ಮದ್ಯದ ಆರ್ಡರ್ ಮಾಡಿದರೆ ಸಿಕ್ಕಿಲ್ಲ; ದೂರು ನೀಡಿದ ನಟಿಯರು!

ಆನ್‌ಲೈನ್‌ ವ್ಯವಹಾರದಿಂದಾಗಿ ನಟಿ ಶಬಾನಾ ಅಜ್ಮಿ ಅವರಿಗೆ ಮೋಸ ಆಗಿದೆ, ನಟಿ ನಿವೇದಾ ಪೇತುರಾಜ್ ಅವರ ಸ್ವಿಗ್ಗಿ ಊಟದಲ್ಲಿ ಜಿರಳೆ ಸಿಕ್ಕಿದೆಯಂತೆ, ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ನಟಿಯರು ಮಾಹಿತಿ ಹಂಚಿಕೊಂಡಿದ್ದಾರೆ.

ನಿವೇದಾ ಸ್ವಿಗ್ಗಿ ಊಟದಲ್ಲಿ ಜಿರಳೆ, ಶಬಾನಾ ಅಜ್ಮಿಗೆ ಮದ್ಯದ ಆರ್ಡರ್ ಮಾಡಿದರೆ ಸಿಕ್ಕಿಲ್ಲ; ದೂರು ನೀಡಿದ ನಟಿಯರು!
Linkup
ಆನ್‌ಲೈನ್ ವ್ಯವಹಾರ ಎಷ್ಟು ಪ್ರಯೋಜನಕಾರಿಯೇ ಅಷ್ಟೇ ನಷ್ಟ ಕೂಡ ಇದೆ. ಅನೇಕರು ಇದನ್ನು ಬಳಸಿ ಮೋಸ ಮಾಡುತ್ತಿದ್ದಾರೆ. ತಮಿಳು ನಟಿ ಅವರಿಗೆ ಊಟದಲ್ಲಿ ಎರಡನೇ ಬಾರಿಗೆ ಜಿರಳೆ ಸಿಕ್ಕಿದೆಯಂತೆ. ಇನ್ನು ನಟಿ ಶಬಾನಾ ಅಜ್ಮಿಯವರು ಆಲ್ಕೋಹಾಲ್ ಆರ್ಡರ್ ಹಾಕಿದ್ದು, ಅದು ಫೇಕ್ ಅಂತೆ. ನಿವೇದಾ ಊಟದಲ್ಲಿ ಜಿರಳೆಹೌದು, ನಟಿ ನಿವೇದಾ ಪೇತುರಾಜ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸ್ವಿಗ್ಗಿ ಊಟದ ಕುರಿತು ಮಾಹಿತಿ ಹಂಚಿಕೊಂಡಿದ್ದು, "ಸ್ವಿಗ್ಗಿ ಹೇಗಿದೆ ಅಂತ ನನಗೆ ಗೊತ್ತಿಲ್ಲ. ಆದರೆ ರೆಸ್ಟೋರೆಂಟ್‌ಗಳು ಇತ್ತೀಚೆಗೆ ನಿಭಾಯಿಸಿಕೊಂಡು ಹೋಗುತ್ತಿವೆ. ನನ್ನ ಆಹಾರದಲ್ಲಿ ಎರಡು ಬಾರಿ ಜಿರಳೆ ಸಿಕ್ಕಿದೆ. ಈ ರೆಸ್ಟೋರೆಂಟ್‌ಗಳನ್ನು ಪರಿಶೀಲಿಸುವುದು, ಒಂದು ವೇಳೆ ಚೆನ್ನಾಗಿಲ್ಲದಿದ್ದರೆ ಭಾರೀ ಪ್ರಮಾಣದ ದಂಡ ಹಾಕುವುದು ಮುಖ್ಯ" ಎಂದು ಹೇಳಿದ್ದಾರೆ. ಸ್ವಿಗ್ಗಿಗೆ ನಿವೇದಾ ಮನವಿ ಇನ್ನು ಅದೇ ರೆಸ್ಟೋರೆಂಟ್ ಬಗ್ಗೆ ಉಳಿದವರು ಕೂಡ ನಿವೇದಾ ಬಳಿ ದೂರು ಹೇಳಿದ್ದಾರೆ. "ನಾನು ಆ ರೆಸ್ಟೋರೆಂಟ್ ಬಗ್ಗೆ ಸಾಕಷ್ಟು ಮೆಸೇಜ್ ಪಡೆದಿದ್ದೇನೆ. ಆಹಾರದಲ್ಲಿ ಜಿರಳೆ ಸಿಗುತ್ತಿರುವುದು ಮೊದಲ ಬಾರಿ ಅಲ್ಲ. ಇಷ್ಟೊಂದು ಬೇಜವಾಬ್ದಾರಿತನದಿಂದ ನಡೆದುಕೊಳ್ಳಲು ಹೇಗೆ ಸಾಧ್ಯ? ಸ್ವಿಗ್ಗಿಯವರು ಈ ರೆಸ್ಟೋರೆಂಟ್‌ನ್ನು ಅವರ ಆಪ್‌ನಿಂದ ತೆಗೆದುಹಾಕಿ ಅಂತ ನಾನು ಮನವಿ ಮಾಡುವೆ" ಎಂದು ನಿವೇದಾ ಹೇಳಿದ್ದಾರೆ. ಶಬಾನಾ ಅಜ್ಮಿಗೆ ಮದ್ಯ ಸಿಕ್ಕಿಲ್ಲ 70 ವರ್ಷದ ನಟಿ ಶಬಾನಾ ಅಜ್ಮಿliving liquidz ಆಲ್ಕೋಹಾಲ್ ಆರ್ಡರ್ ಮಾಡಿದ್ದರು, ಹಣ ನೀಡಿದ್ದರು. ಆದರೆ ಅವರಿಗೆ ಮದ್ಯ ಸಿಕ್ಕಿಲ್ಲ. ಇನ್ನು ಅವರ ಫೋನ್ ಕೂಡ ರಿಸೀವ್ ಮಾಡುತ್ತಿಲ್ಲವಂತೆ, ಸೋಶಿಯಲ್ ಮೀಡಿಯಾದಲ್ಲಿ ಹಣ ನೀಡಿರುವ ಮಾಹಿತಿ ಹಂಚಿಕೊಂಡು ಮೋಸ ಆಗಿದೆ ಎಂದು ಶಬಾನಾ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ನಟ-ನಟಿಯರು, ಸಾಮಾನ್ಯ ಜನರು ಕೂಡ ಆನ್‌ಲೈನ್ ಮಾರಾಟದ ಬಗ್ಗೆ ಅನೇಕ ಬಾರಿ ದೂರು ನೀಡಿದ್ದಾರೆ. ಶಬಾನಾ ಅವರು ಈ ಪ್ರಕರಣದ ಬಗ್ಗೆ ದೂರು ನೀಡಿದ್ದಾರೋ ಇಲ್ಲವೋ ಎಂದು ಹೇಳಿಕೊಂಡಿಲ್ಲ.