ಗಾಯಕ ಸೋನು ನಿಗಮ್, ನಟಿ ಸಾಹುಕಾರ ಜಾನಕಿಗೆ 2022ರ ಪದ್ಮಶ್ರೀ ಪ್ರಶಸ್ತಿ ಘೋಷಣೆ

ಕಲಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ಪ್ರಯುಕ್ತ ವಿಕ್ಟರ್ ಬ್ಯಾನರ್ಜಿ, ಸೋನು ನಿಗಮ್, ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ, ಸಾಹುಕಾರ ಜಾನಕಿ ಅವರಿಗೆ 2022ರ ಪದ್ಮ ಗೌರವ ಸಿಕ್ಕಿದೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಗಾಯಕ ಸೋನು ನಿಗಮ್, ನಟಿ ಸಾಹುಕಾರ ಜಾನಕಿಗೆ 2022ರ ಪದ್ಮಶ್ರೀ ಪ್ರಶಸ್ತಿ ಘೋಷಣೆ
Linkup
2022ರ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ವಿಕ್ಟರ್ ಬ್ಯಾನರ್ಜಿ, ಸೋನು ನಿಗಮ್, ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ, ಸಾಹುಕಾರ ಜಾನಕಿ ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದಾಗಿ ಅವರಿಗೆ ಪದ್ಮ ಗೌರವ ಸಿಕ್ಕಿದೆ. ವಿಕ್ಟರ್ ಬ್ಯಾನರ್ಜಿ ಅವರಿಗೆ , ಸೋನು ನಿಗಮ್, ಸಾಹುಕಾರ ಜಾನಕಿ, ಚಂದ್ರಪ್ರಕಾಶ್ ದ್ವಿವೇದಿ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಪ್ರತಿ ವರ್ಷ ಗಣರಾಜ್ಯೋತ್ಸವದಂದು ಪದ್ಮ ಪುರಸ್ಕಾರ ನೀಡಲಾಗುವುದು. ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಪ್ರಶಸ್ತಿ ಪ್ರದಾನ ಮಾಡುವರು. ವಿಕ್ಟರ್ ಬ್ಯಾನರ್ಜಿ ಕಳೆದ 4 ದಶಕಗಳಿಂದ ವಿಕ್ಟರ್ ಬ್ಯಾನರ್ಜಿ ಅವರು ಬಂಗಾಳಿ, ಹಿಂದಿ, ಇಂಗ್ಲಿಷ್ ಭಾಷಾ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ghare baire ಚಿತ್ರಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. BAFTA ಪ್ರಶಸ್ತಿಗೆ ಭಾಜನರಾದ ಕೆಲವೇ ಕೆಲವು ಭಾರತೀಯರಲ್ಲಿ ವಿಕ್ಟರ್ ಕೂಡ ಒಬ್ಬರು. 1984ರಲ್ಲಿ ತೆರೆಕಂಡ ಡೇವಿಡ್ ಲೀನ್ ಅವರ A Passage to India ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ಬ್ಯಾನರ್ಜಿ ಎಲ್ಲರ ಗಮನ ಸೆಳೆದರು. ಸೋನು ನಿಗಮ್ ಸೋನು ನಿಗಮ್, ಅವರ ಪೀಳಿಗೆಯ ಲೀಡ್ ಗಾಯಕರಲ್ಲಿ ಒಬ್ಬರು. 1990ರಿಂದ ಈಗಾಗಲೇ ಸಾಕಷ್ಟು ಹಿಂದಿ ಹಾಡುಗಳನ್ನು ಹಾಡಿ ಅವರು ಪ್ರಖ್ಯಾತಿ ಗಳಿಸಿದ್ದಾರೆ. ಇದುವರೆಗೆ ಅವರು 5000ಕ್ಕೂ ಅಧಿಕ ಹಾಡುಗಳಿಗೆ ದನಿಯಾಗಿದ್ದಾರೆ. ಈಗಾಗಲೇ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. 2013ರಲ್ಲಿ US Billboard Uncharted charts ಅಲ್ಲಿ ಸೋನು ನಿಗಮ್ ಎರಡು ಬಾರಿ ನಂಬರ್ 1 ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಹಿಂದಿ, ಕನ್ನಡ, ಬಂಗಾಳಿ, ಓಡಿಯಾ, ತಮಿಳು, ತೆಲುಗು, ಮರಾಠಿ, ನೇಪಾಳಿ, ಮಲಯಾಳಂ, ಭೋಜಪುರಿ ಸೇರಿದಂತೆ ಉಳಿದ ಭಾರತೀಯ ಭಾಷೆಗಳಲ್ಲಿ ಸೋನು ಹಾಡು ಹಾಡಿ ಜನಪ್ರಯತೆ ಗಳಿಸಿದ್ದಾರೆ. ಮಾಡರ್ನ್ ರಫಿ, ಸ್ವರಮೇಳಗಳ ಲಾರ್ಡ್, ಮಾಧುರ್ಯದ ಮೇಷ್ಟ್ರು ಎಂದು ಸೋನು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಾರೆ. ಹರಿಯಾಣ ಮೂಲದ ಸೋನು ನಿಗಮ್ ಅವರು 4ನೇ ವಯಸ್ಸಿಗೆ ತಂದೆ ಜೊತೆಗೆ ವೇದಿಕೆ ಮೇಲೆ ಹಾಡಲು ಆರಂಭಿಸಿದ್ದರು. 19ನೇ ವಯಸ್ಸಿನಲ್ಲಿದ್ದಾಗ ಬಾಲಿವುಡ್‌ನಲ್ಲಿ ಹಾಡಬೇಕು ಎಂದು ತಂದೆ ಜೊತೆಗೆ ಸೋನು ಮುಂಬೈಗೆ ಬಂದಿದ್ದರು. Aaja Meri Jaan ಚಿತ್ರದ O Aasman Wale ಅವರು ಹಾಡಿದ ಮೊದಲ ಸಿನಿಮಾ ಹಾಡಾಗಿತ್ತು. ಅಲ್ಲಿಂದ ಸೋನು ನಿಗಮ್ ಯುಗ ಶುರುವಾಯ್ತು ಎನ್ನಬಹುದು. ಸಾಹುಕಾರ ಜಾನಕಿ 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸಾಹುಕಾರ ಜಾನಕಿ ಅವರು ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸಿದ್ದಾರೆ. 3000ಕ್ಕೂ ಅಧಿಕ ಶೋಗಳನ್ನು ನೀಡಿರುವ ಜಾನಕಿ ಅವರು ಆರಂಭದಲ್ಲಿ ರೇಡಿಯೋ ಕಲಾವಿದೆ ಕೂಡ ಆಗಿದ್ದರು. ಅರಿಜೋನಾ ವಿಶ್ವವಿದ್ಯಾಲಯದಿಂದ ಅವರಿಗೆ ಡಾಕ್ಟರೇಟ್ ಗೌರವ ಸಿಕ್ಕಿದೆ. 14ನೇ ವಯಸ್ಸಿನಲ್ಲಿದ್ದಾಗಲೇ ರೇಡಿಯೋ ಆರ್ಟಿಸ್ಟ್ ಆಗಿದ್ದರು ಜಾನಕಿಯವರು. 1949ರಿಂದ 1975ರವರೆಗೆ ಅವರು ಲೀಡ್ ನಾಯಕಿಯಾಗಿದ್ದರು. ಮದುವೆಯ ನಂತರದಲ್ಲಿ Shavukaru ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಜಾನಕಿ ಬಣ್ಣ ಹಚ್ಚಿದ್ದರು. 1975ರ ನಂತರ ಜಾನಕಿ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಲು ಆರಂಭಿಸಿದ್ದರು. 'ಶಬ್ದವೇದಿ', 'ಒಂದೇ ಗುರಿ', 'ಕುಲಪುತ್ರ', 'ಗೀತಾ', 'ಆರದ ಗಾಯ', 'ತಾಯಿಗೆ ತಕ್ಕ ಮಗ', ಪುನೀತ್ ರಾಜ್‌ಕುಮಾರ್ ನಟನೆಯ 'ಅಭಿ' ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದರು. ಚಂದ್ರಪ್ರಕಾಶ್ ದ್ವಿವೇದಿ ಬರಹಗಾರ, ನಿರ್ದೇಶಕರಾಗಿ ಹೆಸರು ಮಾಡಿರುವ ಚಂದ್ರಪ್ರಕಾಶ್ ದ್ವಿವೇದಿ ಅವರು 1991 ಚಾಣಕ್ಯ ಟಿವಿ ಸಿರೀಸ್ ಮೂಲಕ ಸಿಕ್ಕಾಪಟ್ಟೆ ಜನಮನ್ನಣೆ ಗಳಿಸಿದರು. 2003ರಲ್ಲಿ 'ಪಿಂಜರ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆದರು. ಅಕ್ಷಯ್ ಕುಮಾರ್ ನಟನೆಯ ''ಪೃಥ್ವಿರಾಜ್' ಚಿತ್ರಕ್ಕೆ ಚಂದ್ರಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಮಾನುಷಿ ಚಿಲ್ಲರ್ ನಟಿಸಿರುವ ಈ ಸಿನಿಮಾ ಏಪ್ರಿಲ್ 1ಕ್ಕೆ ರಿಲೀಸ್ ಆಗ್ತಿದೆ.