ಸಾರ್ವಜನಿಕ ಸ್ಥಳದಲ್ಲಷ್ಟೇ ಮಾಸ್ಕ್, ಕಾರಲ್ಲಿ ಇಲ್ಲ ರಿಸ್ಕ್: ದೆಹಲಿ ಪೊಲೀಸರಿಗೆ ಬೈದಿದ್ದ ಮಹಿಳೆ ವಾದವೇನು?
ಸಾರ್ವಜನಿಕ ಸ್ಥಳದಲ್ಲಷ್ಟೇ ಮಾಸ್ಕ್, ಕಾರಲ್ಲಿ ಇಲ್ಲ ರಿಸ್ಕ್: ದೆಹಲಿ ಪೊಲೀಸರಿಗೆ ಬೈದಿದ್ದ ಮಹಿಳೆ ವಾದವೇನು?
ಕಾರಿನಲ್ಲಿ ಮಾಸ್ಕ್ ಧರಿಸಿದ್ದನ್ನು ಪ್ರಶ್ನಿಸಿದ್ದ ದೆಹಲಿ ಪೊಲೀಸರ ಮೇಲೆ ದೌಲತ್ತು ಪ್ರದರ್ಶಿಸಿದ್ದ ಮಹಿಳೆ, ಈಗಲೂ ತನ್ನ ವಾದಕ್ಕೆ ಅಂಟಿಕೊಂಡಿರುವುದು ಆಶ್ಚರ್ಯ ಮೂಡಿಸಿದೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪಂಕಜ್ ದತ್ತಾ ಪತ್ನಿ ಅಭಾ ಯಾದವ್, ಕಾರಿನಲ್ಲಿ ಮಾಸ್ಕ್ ಧರಿಸಲು ಅದೇನು ಸಾರ್ವಜನಿಕ ಸ್ಥಳವೇ ಎಂದು ಪ್ರಶ್ನಿಸಿದ್ದಾರೆ.
ಹೊಸದಿಲ್ಲಿ: ಕಾರಿನಲ್ಲಿ ಮಾಸ್ಕ್ ಧರಿಸಿದ್ದನ್ನು ಪ್ರಶ್ನಿಸಿದ್ದ ದೆಹಲಿ ಪೊಲೀಸರ ಮೇಲೆ ದೌಲತ್ತು ಪ್ರದರ್ಶಿಸಿದ್ದ ಮಹಿಳೆ, ಈಗಲೂ ತನ್ನ ವಾದಕ್ಕೆ ಅಂಟಿಕೊಂಡಿರುವುದು ಆಶ್ಚರ್ಯ ಮೂಡಿಸಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪಂಕಜ್ ದತ್ತಾ ಪತ್ನಿ ಅಭಾ ಯಾದವ್, ಕಾರಿನಲ್ಲಿ ಮಾಸ್ಕ್ ಧರಿಸಲು ಅದೇನು ಸಾರ್ವಜನಿಕ ಸ್ಥಳವೇ ಎಂದು ಪ್ರಶ್ನಿಸಿದ್ದಾರೆ.
ನನಗೆ ಮಾಸ್ಕ್ ಧರಿಸುವುದರಿಂದ ಉಸಿರುಗಟ್ಟಿದಂತಾಗುತ್ತದೆ. ಅಲ್ಲದೇ ಕಾರಿನಲ್ಲಿ ನಾನು ಮತ್ತು ನನ್ನ ಪತಿ ಇಬ್ಬರೇ ಸಂಚರಿಸುತ್ತಿದ್ದರಿಂದ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ನಾನು ಭಾವಿಸಿದ್ದೆ ಎಂದು ಅಭಾ ಯಾದವ್ ಹೇಳಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕಿಕೊಳ್ಳುವುದನ್ನು ಕಡ್ಡಾಯಪಡಿಸಬೇಕು. ಆದರೆ ಪತಿಯ ಜೊತೆ ಕಾರಿನಲ್ಲಿ ಹೋಗುವಾಗಲೂ ಮಾಸ್ಕ್ ಹಾಕಿಕೊಳ್ಳಬೇಕು ಎಂದರೆ ಹೇಗೆ ಎಂದು ಅಭಾ ಯಾದವ್ ಪ್ರಶ್ನಿಸಿದ್ದಾರೆ.
ಮಾಸ್ಕ್ ಧರಿಸುವುದರಿಂದ ಉಸಿರುಗಟ್ಟಿದಂತೆ ಭಾಸವಾಗುತ್ತಿತ್ತು. ಹೇಗಿದ್ದರೂ ಕಾರಿನಲ್ಲಿ ನಾನು ಮತ್ತು ನನ್ನ ಪತಿ ಇಬ್ಬರೇ ಇದ್ದಿದ್ದರಿಂದ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ಭಾವಿಸಿ ಮಾಸ್ಕ್ ಧರಿಸದಿರುವ ನಿರ್ಣಯ ಮಾಡಿದೆ ಎಂದು ಅಭಾ ಯಾದವ್ ಹೇಳಿದ್ದಾರೆ.
ಆದರೆ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ಅಭಾ ಯಾದವ್, ತಮ್ಮ ವಾದಕ್ಕೆ ಅಂಟಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಈ ಮೊದಲು ತಮ್ಮ ಪತ್ನಿಯ ದುರ್ವರ್ತನೆ ಟೀಕಸಿದ್ದ ಪತಿ ಪಂಜ್ ದತ್ತಾ ಕೂಡ ಇದೀಗ ಕಾರಿನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಭಾವಿಸಿದ್ದಾಗಿ ಹೇಳಿರುವುದು ಕುತೂಹಲ ಕೆರಳಿಸಿದೆ.
ಇನ್ನು ಕಾರಿನಲ್ಲಿ ಮಾಸ್ಕ್ ಏಕೆ ಧರಿಸಬೇಕು ಎಂದು ಕೇಳಿರುವ ಅಭಾ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು, ಯುಪಿಎಸ್‌ಸಿ ಪರೀಕ್ಷೆ ಪಾಸಾದ ನಿಮಗೆ ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸಬೇಕು ಎಂಬ ದೆಹಲಿ ಹೈಕೋರ್ಟ್ ನೀಡಿರುವ ಆದೇಶ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸದ್ಯ ದೆಹಲಿಯ ಪಶ್ಚಿಮ ಪಟೇಲ್ ನಗರದ ನಿವಾಸಿ ಪಂಕಜ್ ಮತ್ತು ಅಭಾ ವಿರುದ್ಧ ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿದೆ.