ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ ವಿನಾಯಕನನ್ನು ಪೂಜಿಸೋಣ; ಎಚ್‌ಡಿಕೆ ಕರೆ

ಗಣೇಶ ಚತುರ್ಥಿ ಹಬ್ಬದ ವೇಳೆ ಎಲ್ಲೂ ಮೈಮರೆಯುವುದು ಬೇಡ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಇನ್ನೊಬ್ಬರಿಗೆ ತೊಂದರೆ ಆಗುವುದೂ ಬೇಡ. ರಾಜ್ಯ ಸರಕಾರ ಜಾರಿ ಮಾಡಿರುವ ಕೋವಿಡ್-‌19 ನಿಯಮಗಳನ್ನು ಪಾಲಿಸುತ್ತಲೇ ವಿನಾಯಕನನ್ನು ಪೂಜಿಸೋಣ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆ ಗೌರಿಪುತ್ರನಲ್ಲಿ ಪ್ರಾರ್ಥನೆ ಮಾಡುವೆ ಎಂದು ತಿಳಿಸಿದ್ದಾರೆ.

ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ ವಿನಾಯಕನನ್ನು ಪೂಜಿಸೋಣ; ಎಚ್‌ಡಿಕೆ ಕರೆ
Linkup
ಬೆಂಗಳೂರು: ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡಿದ್ದು,ನಾಡಿನ ಸಮಸ್ತ ಜನತೆಗೆ ಮಾಜಿ ಮುಖ್ಯಮಂತ್ರಿ ಶುಭಕೋರಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆ ಟ್ವೀಟ್ ಮಾಡಿರುವ ಅವರು, ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು. ಆ ತಾಯಿ ಗೌರಿ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ. ಶ್ರೀ ವಿಘ್ನೇಶ್ವರನು ಎಲ್ಲರ ವಿಘ್ನಗಳನ್ನು ನಿವಾರಿಸಿ ಕರುಣೆ ತೋರಲಿ. ಹಬ್ಬವನ್ನು ನಮ್ಮ ಮನೆ-ಮನಗಳಲ್ಲಿ ಸಂಭ್ರಮದಿಂದ, ಶ್ರದ್ಧೆ-ಭಕ್ತಿಯಿಂದ ಆಚರಿಸೋಣ. ಕೊರೊನಾ ಅಪಾಯ ಮರೆಯದಿರೋಣ. ಆದಷ್ಟು ಬೇಗ ಮಹಾಮಾರಿ ವೈರಸ್‌ ತೊಲಗಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದ್ದಾರೆ. ಜೊತೆಗೆ ಗಣೇಶ ಚತುರ್ಥಿ ಹಬ್ಬದ ವೇಳೆ ಎಲ್ಲೂ ಮೈಮರೆಯುವುದು ಬೇಡ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಇನ್ನೊಬ್ಬರಿಗೆ ತೊಂದರೆ ಆಗುವುದೂ ಬೇಡ. ರಾಜ್ಯ ಸರಕಾರ ಜಾರಿ ಮಾಡಿರುವ ಕೋವಿಡ್-‌19 ನಿಯಮಗಳನ್ನು ಪಾಲಿಸುತ್ತಲೇ ವಿನಾಯಕನನ್ನು ಪೂಜಿಸೋಣ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆ ಗೌರಿಪುತ್ರನಲ್ಲಿ ಪ್ರಾರ್ಥನೆ ಮಾಡುವೆ ಎಂದು ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಹಬ್ಬಕ್ಕೆ ಹತ್ತಾರು ನಿಯಮಗಳುಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ಗೊಂದು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಸಂಘ- ಸಂಸ್ಥೆಗಳು, ಸಮಿತಿಗಳಿಂದ ಹೆಚ್ಚಿನ ಅರ್ಜಿಗಳು ಬಂದರೆ, ಸ್ಥಳೀಯ ಪೊಲೀಸ್‌ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಹಾಗೂ ಪಾಲಿಕೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಆಯ್ದ ಕೆರೆಗಳಲ್ಲಿನ ಕಲ್ಯಾಣಿಗಳಲ್ಲಿ ಹಾಗೂ ಮನೆಗಳಲ್ಲಿ ಪೂಜಿಸುವ ಗಣೇಶ ವಿಗ್ರಹಗಳ ವಿಸರ್ಜನೆಗೆ ಸಂಚಾರಿ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ. ಐದು ದಿನಗಳ ಬಳಿಕ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಗಣೇಶ ಮೂರ್ತಿಗಳ ವಿಸರ್ಜನೆಗೆ ನಿಗದಿಪಡಿಸಿರುವ ಕೆರೆಗಳು, ಕಲ್ಯಾಣಿಗಳ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಬೆಳಗ್ಗೆಯಿಂದ ರಾತ್ರಿ 9 ರವರೆಗೆ ಮಾತ್ರ ವಿಸರ್ಜನೆ ಮಾಡಬಹುದು. ಆನಂತರ ಕರ್ಫ್ಯೂ ಜಾರಿಯಾಗಲಿದೆ. ಹಾಗಾಗಿ, ಸಂಘ- ಸಂಸ್ಥೆಗಳು, ಉತ್ಸವ ಸಮಿತಿಗಳ ಆಯೋಜಕರು 8 ಗಂಟೆಯೊಳಗೆ ಕಲ್ಯಾಣಿಗಳ ಬಳಿ ಮೂರ್ತಿಗಳನ್ನು ತಂದಿಟ್ಟು ಪೂಜೆ ಮುಗಿಸಿ ಮನೆಗಳಿಗೆ ವಾಪಸ್ಸಾಗಬೇಕು ಎಂದು ಮನವಿ ಮಾಡಿದರು.