ಬೆಂಗಳೂರಿನಲ್ಲಿ ಮಳೆ ತಗ್ಗಿದರೂ ಮುಂದುವರಿದ ಸಂಕಷ್ಟ: ಇನ್ನೂ 5 ದಿನ ಇರಲಿದೆ ವರುಣನ ಕಾಟ

ರಾಜ್ಯದಾದ್ಯಂತ ಮಳೆ ಆರ್ಭಟ ಕಡಿಮೆಯಾಗಿದೆ. ಬಿಸಿಲಿನ ದರ್ಶನವೂ ಆಗಿದೆ. ಆದರೆ ಇನ್ನೂ ಐದು ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಎರಡು ದಿನ ಮಳೆ ಆರ್ಭಟಿಸುವ ಸಂಭವವಿದೆ.

ಬೆಂಗಳೂರಿನಲ್ಲಿ ಮಳೆ ತಗ್ಗಿದರೂ ಮುಂದುವರಿದ ಸಂಕಷ್ಟ: ಇನ್ನೂ 5 ದಿನ ಇರಲಿದೆ ವರುಣನ ಕಾಟ
Linkup
ಬೆಂಗಳೂರು: ರಾಜಧಾನಿ ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಲ್ಲಿ ವರುಣನ ಕಾಟ ಮುಂದುವರಿದಿದೆ. ಆದರೆ ಆರ್ಭಟ ಸ್ವಲ್ಪ ತಗ್ಗಿದೆ. ಸೋಮವಾರ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಸೂರ್ಯನ ದರ್ಶನವಾಗಿದ್ದರಿಂದ ಜನರು ಸ್ವಲ್ಪ ಸಮಾಧಾನಪಟ್ಟಿದ್ದಾರೆ. ಆದರೆ ಜನರಿಗೆ ವರುಣನ ಕೃಪೆ ಸಂಪೂರ್ಣ ಸಿಗುವುದು ಖಾತರಿಯಿಲ್ಲ. ಮುಂದಿನ 48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯ ಸೂಚನೆ ನೀಡಲಾಗಿದೆ. ಕರ್ನಾಟಕದ ಹಲವೆಡೆ ಇನ್ನೂ ಐದು ದಿನ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ (ಐಎಂಡಿ) ತಿಳಿಸಿದೆ. , ಕೇರಳ, ಮಾಹೆ, ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್‌ನಲ್ಲಿ ವ್ಯಾಪಕ ಮಳೆ ಬರಲಿದೆ ಎಂದು ಅದು ಹೇಳಿದೆ. ಭಾನುವಾರ ಸುರಿದ ಮಳೆಗೆ ಬೆಂಗಳೂರಿನ ಅನೇಕ ಭಾಗಗಳ ನಿವಾಸಿಗಳು ಕಂಗಾಲಾಗಿದ್ದಾರೆ. ಮುಖ್ಯವಾಗಿ ಯಲಹಂಕದ ಕೇಂದ್ರೀಯ ವಿಹಾರದಲ್ಲಿನ ನಿವಾಸಿಗಳ ಪರದಾಟ ಮುಂದುವರಿದಿದೆ. ಸೋಮವಾರ ಮಳೆ ಬಿಡುವು ನೀಡಿದ್ದರಿಂದ ಸಂಜೆ ವೇಳೆಗೆ ಎಲ್ಲ ನೀರನ್ನೂ ತೆರವುಗೊಳಿಸಬಹುದು ಎಂದು ಬಿಬಿಎಂಪಿ ಲೆಕ್ಕಾಚಾರ ಹಾಕಿತ್ತು. ಆದರೆ ಇದು ಮಂಗಳವಾರ ಕೂಡ ಮುಂದುವರಿದಿದೆ. ಇಡೀ ದಿನ ಒಂದು ಅಡಿಯಷ್ಟು ಮಾತ್ರ ನೀರು ಖಾಲಿಯಾಗಿದೆ ಎನ್ನಲಾಗಿದೆ. ಇದರಿಂದ ಇಲ್ಲಿನ ಅಪಾರ್ಟ್‌ಮೆಂಟ್ ಸುತ್ತಲಿನ ಕಾಂಪೌಂಡ್‌ಗಳನ್ನು ಒಡೆದು ನೀರು ಹೊರ ಹಾಕುವ ಪ್ರಯತ್ನ ನಡೆಯುತ್ತಿದೆ. ಕೇಂದ್ರೀಯ ವಿಹಾರದಲ್ಲಿನ ಜನರು ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಕೂಡ ಪರದಾಡುವಂತಾಗಿದೆ. ಸುಮಾರು 300 ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ವಿದ್ಯುತ್ ಇಲ್ಲದೆ ಕತ್ತಲಿನಲ್ಲಿಯೇ ರಾತ್ರಿ ಕಳೆದಿದ್ದಾರೆ. ಕೇಂದ್ರೀಯ ವಿಹಾರದ ಒಳಗೆ ರಾಜಕಾಲುವೆ ಒತ್ತುವರಿಯಾಗಿದೆ ಎಂಬ ಆರೋಪವಿದೆ. ಅಲ್ಲಿನ ಜನರನ್ನು ದೋಣಿಗಳಲ್ಲಿ ಕರೆದೊಯ್ಯಲಾಗುತ್ತಿದೆ. ಯಲಹಂಕ ಸಮೀಪದ ಅಲ್ಲಾಳಸಂದ್ರ ಕೆರೆ ತುಂಬಿ ಹರಿದ ಪರಿಣಾಮ ಈ ಭಾಗದ ಮನೆಗಳ ಒಳಗೆ ನೀರು ನುಗ್ಗಿತ್ತು. ಪೀಠೋಪಕರಣಗಳು, ವಿದ್ಯುತ್ ಉಪಕರಣಗಳು, ಅಗತ್ಯ ವಸ್ತುಗಳು ನೀರು ಪಾಲಾಗಿವೆ. ಜಕ್ಕೂರು ಏರೋಡ್ರಮ್ ಸಮೀಪವಿರುವ ಜವಹರಲಾಲ್ ನೆಹರೂ ಸಂಶೋಧನಾ ಕೇಂದ್ರದ ಒಳಗೆ ನೀರು ನುಗ್ಗಿದ್ದು, ಕೇಂದ್ರದ ಕಂಪ್ಯೂಟರ್‌ ವಿಭಾಗ, ಆಡಳಿತ ವಿಭಾಗ, ಲ್ಯಾಬ್‌ಗಳು ಜಲಾವೃತವಾಗಿತ್ತು. ಇದರಿಂದ ಸುಮಾರು 25 ವರ್ಷಗಳಿಂದ ಸಂಗ್ರಹಿಸಿದ್ದ ಅನೇಕ ಮಹತ್ವದ ದಾಖಲೆಗಳು, ಮಾದರಿ ಸಂಗ್ರಹಗಳು ನಾಶವಾಗಿವೆ. ನಾಲ್ಕು ಕೆರೆಗಳಿಂದ !ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಉತ್ತರ ಬೆಂಗಳೂರಿನಲ್ಲಿ ಯಲಹಂಕ, ಅಲ್ಲಾಳಸಂದ್ರ, ಜಕ್ಕೂರು ಮತ್ತು ಸಿಂಗಾಪುರದಲ್ಲಿರುವ ಕೆರೆಗಳು ಉಕ್ಕಿ ಹರಿದ ಪರಿಣಾಮ ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿತ್ತು. ಕೆರೆಗಳನ್ನು ಮುಚ್ಚಿ ಕಟ್ಟಿರುವ ಅಪಾರ್ಟ್‌ಮೆಂಟ್‌ಗಳು ಜಲಾವೃತವಾಗಿವೆ. ಯಲಹಂಕದಲ್ಲಿರುವ ಕೇಂದ್ರೀಯ ವಿಹಾರವು ಕೇಂದ್ರ ಸರ್ಕಾರಿ ಉದ್ಯೋಗಿಗಳ ಕುಟುಂಬಗಳು ವಾಸಿಸುತ್ತಿರುವ ಜಾಗ. ಇಲ್ಲಿನ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ನಾಲ್ಕು ಅಡಿಗಳಷ್ಟು ನೀರು ತುಂಬಿತ್ತು. ಈ ಭಾಗಗಳಲ್ಲಿ ಭಾರಿ ಅನಾಹುತ ಸಂಭವಿಸಿವೆ. ಅನೇಕ ಕಾರು ಮತ್ತು ಬೈಕುಗಳು ಕೆಸರು ನೀರಿನಿಂದಾಗಿ ನಿಂತಲ್ಲೇ ಕೆಟ್ಟು ಹೋಗಿವೆ. ರಸ್ತೆಗಳ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ವಾಹನಗಳು ಮುಂದ ಸಾಗಲಾಗದೆ, ಜನರು ರಾತ್ರಿಯಿಡೀ ರಸ್ತೆ ನಡುವೆಯೇ ಸಿಲುಕಿದ್ದರು. ಇನ್ನೊಂದೆಡೆ ವಿದ್ಯುತ್ ಸಂಪರ್ಕ ಕಡಿತದಿಂದ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಸಿಂಗಾಪುರ ಪ್ರದೇಶದಲ್ಲಿ ರಸ್ತೆಗಳ ಮೇಲೆ ಎರಡು ಅಡಿಯಷ್ಟು ನೀರು ಹರಿದಿತ್ತು. ಕೆಳಮಹಡಿಗಳಿಗೆ ನೀರು ನುಗ್ಗಿತ್ತು. ಇಲ್ಲಿ ಕೆರೆಗಳಿಂದ ಬಂದ ಮೀನುಗಳನ್ನು ಹಿಡಿಯಲು ಜನ ಮುಗಿಬಿದ್ದಿದ್ದರು. ಮಾನ್ಯತಾ ಟೆಕ್ ಪಾರ್ಕ್‌ ಅವಾಂತರಬೆಂಗಳೂರಿನ ಅತಿ ದೊಡ್ಡ ಹಾಗೂ ವ್ಯವಸ್ಥಿತ ತಂತ್ರಜ್ಞಾನ ಹಬ್‌ಗಳಲ್ಲಿ ಒಂದಾದ ಮಾನ್ಯತಾ ಟೆಕ್ ಪಾರ್ಕ್ ಸೋಮವಾರ ಪ್ರವಾಹದಲ್ಲಿ ಮುಳುಗಿತ್ತು. ಭಾನುವಾರ ಸುರಿದ ಭಾರಿ ಮಳೆಯಿಂದ ಹೆಬ್ಬಾಳ ಸಮೀಪದ ಟೆಕ್ ಪಾರ್ಕ್‌ನಲ್ಲಿ ಆವರಿಸಿದ್ದ ನೀರು ಕಂಡು ಕಂಗೆಟ್ಟ ಉದ್ಯೋಗಿಗಳು ಮನೆಗೆ ಹಿಂದಿರುಗಿ, ವರ್ಕ್ ಫ್ರಂ ಹೋಮ್ ನಡೆಸಿದ್ದರು. ಟೆಕ್ ಪಾರ್ಕ್ ಮಾರ್ಗದಲ್ಲಿ ಮೂರು ನಾಲ್ಕು ಅಡಿ ನೀರು ನಿಂತಿತ್ತು. ಕಚೇರಿಗೆ ಹೋಗಲು ಪಾರ್ಕ್ ಬಳಿ ಬಂದ ಸಿಬ್ಬಂದಿ ತುಂಬಿಕೊಂಡಿದ್ದ ನೀರು ಕಂಡು ಕಂಗಾಲಾದರು. ಕೆಲವು ಸಿಬ್ಬಂದಿ ಆ ನೀರಿನಲ್ಲಿಯೇ ತೆರಳಿದರು.