ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಕಾಣಿಸಿಕೊಂಡ 'ಮಳೆ ಹುಡುಗಿ' ಪೂಜಾ! ಹೊಸ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

ಸ್ಯಾಂಡಲ್‌ವುಡ್‌ ನಟಿ ಪೂಜಾ ಗಾಂಧಿ ಬಹಳ ದಿನಗಳ ನಂತರ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿದ್ದಾರೆ. ಈಚೆಗಷ್ಟೇ ಸಂಹಾರಿಣಿ ಸಿನಿಮಾದಲ್ಲಿ ನಟಿಸಿದ್ದ ಅವರೀಗ ಮತ್ತೊಂದು ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಕಾಣಿಸಿಕೊಂಡ 'ಮಳೆ ಹುಡುಗಿ' ಪೂಜಾ! ಹೊಸ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ
Linkup
ಹರೀಶ್‌ ಬಸವರಾಜ್‌ 'ಮುಂಗಾರು ಮಳೆ' ಮೂಲಕ ಮಳೆ ಹುಡುಗಿ ಎಂದೇ ಹೆಸರು ಮಾಡಿದ ನಟಿ ಬಹಳಷ್ಟು ವರ್ಷಗಳ ಕಾಲ ಒಳ್ಳೊಳ್ಳೆಯ ಸಿನಿಮಾಗಳನ್ನು ಒಪ್ಪಿಕೊಂಡು ಹೆಸರು ಮಾಡಿದರು. ಬಳಿಕ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಿದ್ದರು. ಕೆಲ ದಿನಗಳಿಂದ ಚಿತ್ರರಂಗದಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದ ಅವರು ಈಗ ಮತ್ತೆ ಸಕ್ರಿಯರಾಗಿದ್ದು, 'ದಂಡುಪಾಳ್ಯ' ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು ಜತೆ ಸಿನಿಮಾ ಮಾಡುತ್ತಿದ್ದಾರೆ. 'ದಂಡುಪಾಳ್ಯ' ಚಿತ್ರಗಳ ಸಿರೀಸ್‌ ಮೂಲಕ ಶ್ರೀನಿವಾಸ ರಾಜು ಒಂದಷ್ಟು ಹೆಸರು ಮಾಡಿದರು. ಆದರೆ ಅದರಲ್ಲಿ ಕೆಲವು ಹಿಟ್‌ ಆದರೆ ಇನ್ನೊಂದು ಸಿನಿಮಾ ವಿವಾದಕ್ಕೆ ಸಿಲುಕಿತ್ತು. ಈ ದಂಡುಪಾಳ್ಯ ಚಿತ್ರದ ಸಿರೀಸ್‌ನಲ್ಲಿ ಪೂಜಾ ಗಾಂಧಿ ನಟಿಸಿದ್ದರು. ಈ ಸಿನಿಮಾಗಳಲ್ಲಿ ನಟನೆಯ ಮೂಲಕ ಪೂಜಾ ಗಾಂಧಿಗೆ ಮತ್ತೊಮ್ಮೆ ಖ್ಯಾತಿ ಸಿಕ್ಕಿತು ಎಂದರೆ ತಪ್ಪಾಗುವುದಿಲ್ಲ. ಆದರೆ ಆ ಚಿತ್ರಗಳ ನಂತರ ತಮ್ಮ ವೈಯಕ್ತಿಕ ಬದುಕಿನ ವಿವಾದಗಳು ಸುತ್ತಿಕೊಂಡು ಚಿತ್ರರಂಗದಿಂದ ಒಂದಷ್ಟು ದೂರ ಇದ್ದರು ಪೂಜಾ. ಇತ್ತೀಚೆಗೆ ಅವರು 'ಸಂಹಾರಿಣಿ' ಎಂಬ ಸಿನಿಮಾವನ್ನು ಕಂಪ್ಲೀಟ್‌ ಮಾಡಿ ಅದರ ಬಗ್ಗೆ ಮಾತನಾಡಲು ಮಾಧ್ಯಮದವರ ಮುಂದೆ ಬಂದಿದ್ದರು. ಇದೀಗ ದಂಡುಪಾಳ್ಯ ಶ್ರೀನಿವಾಸ ರಾಜು ಮತ್ತು ಪೂಜಾ ಗಾಂಧಿ ಮತ್ತೆ ಒಂದಾಗಿದ್ದಾರೆ. ವಿಜಯ ಕರ್ನಾಟಕಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಸಿನಿಮಾದ ನಿರ್ದೇಶಕ ಶ್ರೀನಿವಾಸ ರಾಜು ಮೂರು ಕಥೆಗಳುಳ್ಳ ಒಂದು ಸಿನಿಮಾ ಮಾಡುತ್ತಿದ್ದು, ಅದರಲ್ಲಿ ಪೂಜಾ ಒಂದು ಕಥೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಕೋವಿಡ್‌ ಕಾರಣಕ್ಕೆ ಇದು ಮುಂದಕ್ಕೆ ಹೋಗಿದೆ. ನೈಜ ಕಥೆಗಳು ಮತ್ತು ಕ್ರೈಮ್‌ ಬೇಸ್‌ ಸಿನಿಮಾಗಳನ್ನು ಮಾಡುತ್ತಿದ್ದ ಶ್ರೀನಿವಾಸ ರಾಜು ಈ ಬಾರಿ ವಿಶೇಷವಾದ ಪ್ರಯತ್ನವನ್ನು ಮಾಡುತ್ತಿದ್ದಾರೆ. 'ನನ್ನ ಕರಿಯರ್‌ನಲ್ಲಿ ವಿಭಿನ್ನವಾದ ಪ್ರಯತ್ನ ಇದು. ಲವ್‌ ಸ್ಟೋರಿ ಜತೆಗೆ ತನಿಖೆ ಸಹ ಸಿನಿಮಾದಲ್ಲಿರುತ್ತದೆ. ಸಾಕಷ್ಟು ಜನ ಕಲಾವಿದರು ಸಿನಿಮಾದಲ್ಲಿರುತ್ತಾರೆ. ಇದು ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ತಯಾರಾಗುತ್ತಿರುವ ಸಿನಿಮಾ. ಇದು ಲವ್‌ ಸ್ಟೋರಿ ಸಹ ಇರುವ ಸಿನಿಮಾ. ಪೂಜಾ ಗಾಂಧಿ ಒಂದು ಪಾತ್ರ ಮಾಡುತ್ತಿದ್ದಾರೆ. ಕೋವಿಡ್‌ ಕಾರಣಕ್ಕೆ ಮುಂದಕ್ಕೆ ಹಾಕಲಾಗಿದೆ. ಮೇ ಎರಡನೇ ವಾರದಲ್ಲಿ ಮಾಧ್ಯಮಗಳಿಗೆ ಇನ್ನುಳಿದ ಮಾಹಿತಿಯನ್ನು ನೀಡುತ್ತೇನೆ' ಎನ್ನುತ್ತಾರೆ ಶ್ರೀನಿವಾಸ ರಾಜು. ದಂಡುಪಾಳ್ಯದ ಹಂತಕರ ಕಥೆ ಹೇಳಿದ್ದ ಶ್ರೀನಿವಾಸ ರಾಜು ಮತ್ತು ಪೂಜಾ ಗಾಂಧಿ ಈ ಬಾರಿಯೂ ಯಾರದ್ದೋ ಒಂದು ಕೊಲೆ ಕಥೆಯನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ಅದರ ಎಲ್ಲವಿವರಗಳು ಚಿತ್ರತಂಡದಿಂದ ಅಧಿಕೃತವಾಗಿ ಬಿಡುಗಡೆಯಾಗಲಿದೆ. 'ಶ್ರೀನಿವಾಸ ರಾಜು ಅವರ ಜತೆ ಸಿನಿಮಾ ಮಾಡುವ ಪ್ಲಾನ್‌ ನಿಜ. ಸದ್ಯಕ್ಕೆ ನಾನು ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ನಿರ್ದೇಶಕರು ಮತ್ತು ಚಿತ್ರತಂಡದಿಂದ ಸದ್ಯದಲ್ಲೇ ಅಧಿಕೃತವಾಗಿ ಅನೌನ್ಸ್‌ ಮಾಡಲಾಗುವುದು' ಎಂದು ಪೂಜಾ ಗಾಂಧಿ ಹೇಳುತ್ತಾರೆ.