ನಾಗ ಚೈತನ್ಯರಿಂದ ದೂರಾದ ಬಳಿಕ ಸಮಾಜದ ನೈತಿಕತೆ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದ ಸಮಂತಾ!

ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ನಡೆಯುತ್ತಲೇ ಇದೆ. ಹೀಗಿರುವಾಗಲೇ, ಸಮಾಜದ ನೈತಿಕತೆ ಬಗ್ಗೆ ನಟಿ ಸಮಂತಾ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

ನಾಗ ಚೈತನ್ಯರಿಂದ ದೂರಾದ ಬಳಿಕ ಸಮಾಜದ ನೈತಿಕತೆ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದ ಸಮಂತಾ!
Linkup
ಟಾಲಿವುಡ್‌ನಲ್ಲಿ ‘ಚಾರ್ಮಿಂಗ್ ಕಪಲ್’, ‘ಕ್ಯೂಟ್ ಕಪಲ್’ ಅಂತೆಲ್ಲಾ ಜನಪ್ರಿಯತೆ ಪಡೆದಿದ್ದ ಮತ್ತು ಇದೀಗ ದೂರಾಗಿದ್ದಾರೆ. ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗಿದ್ದ ನಾಗ ಚೈತನ್ಯ ಮತ್ತು ಸಮಂತಾ ಈಗ ಬೇರೆ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಆ ಮೂಲಕ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ನಟಿ ಸಮಂತಾ ಮತ್ತು ನಾಗ ಚೈತನ್ಯ ಪೂರ್ಣ ವಿರಾಮ ಇಟ್ಟಿದ್ದಾರೆ. ನಟಿ ಸಮಂತಾ ಮತ್ತು ನಾಗ ಚೈತನ್ಯ ದೂರಾಗುತ್ತಿರುವುದು ಹಲವರಿಗೆ ಬೇಸರ ತಂದಿದೆ. ಅಭಿಮಾನಿಗಳ ಹೃದಯವಂತೂ ಛಿದ್ರ ಛಿದ್ರವಾಗಿದೆ. ಸಮಂತಾ ಮತ್ತು ನಾಗ ಚೈತನ್ಯ ಬೇರ್ಪಡುತ್ತಿರುವ ಸುದ್ಧಿ ಕೇಳಿ ಸಮಂತಾ ತಂದೆ ಕೂಡ ಆಘಾತಗೊಂಡಿದ್ದರು. ನಾಗಾರ್ಜುನ ‘’ಇದು ದುರಾದೃಷ್ಟಕರ ಸಂಗತಿ’’ ಎಂದಿದ್ದರು. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ನಡೆಯುತ್ತಲೇ ಇದೆ. ಹೀಗಿರುವಾಗಲೇ, ಸಮಾಜದ ನೈತಿಕತೆ ಬಗ್ಗೆ ನಟಿ ಸಮಂತಾ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ನಟಿ ಸಮಂತಾ ಇನ್ಸ್ಟಾಗ್ರಾಮ್ ಸ್ಟೋರಿ ’’ಮಹಿಳೆಯರು ಮಾಡುವ ಕೆಲಸಗಳು ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೆ, ಪುರುಷರು ಮಾಡುವ ಕೆಲಸಗಳನ್ನು ನೈತಿಕವಾಗಿ ಪ್ರಶ್ನಿಸದಿದ್ದರೆ - ನಮ್ಮ ಸಮಾಜದಲ್ಲಿ ಮೂಲಭೂತವಾಗಿ ನೈತಿಕತೆಯೇ ಇಲ್ಲ’’ ಎಂಬ ಫರೀದಾ.ಡಿ ಅವರ ಹೇಳಿಕೆಯನ್ನ ಉಲ್ಲೇಖಿಸಿ ಇಂದು ಬೆಳಗ್ಗೆ ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಅವರ ಈ ಇನ್ಸ್ಟಾಗ್ರಾಮ್ ಸ್ಟೋರಿ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿದೆ. ವಿಚ್ಛೇದನಕ್ಕೆ ಸಮಂತಾ ಕಾರಣ ಎಂಬ ಗುಸುಗುಸು ಮಾತು ಕೇಳಿಬಂದಿದ್ದಕ್ಕೆ ನಟಿ ಸಮಂತಾ ಈ ರೀತಿ ಪೋಸ್ಟ್ ಹಾಕಿದ್ದಾರಾ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ. ಎಲ್ಲಾದಕ್ಕೂ ಹೆಣ್ಣನ್ನೇ ದೂಷಿಸುವ ಸಮಾಜದ ನೈತಿಕತೆ ಬಗ್ಗೆ ಪರೋಕ್ಷವಾಗಿ ನಟಿ ಸಮಂತಾ ಪ್ರಶ್ನಿಸಿದ್ರಾ ಎಂಬ ಡೌಟ್ ಕೂಡ ಫ್ಯಾನ್ಸ್ ತಲೆ ಹೊಕ್ಕಿದೆ. ಮತ್ತೆ ಮುಂಬೈ ವದಂತಿ ‘’ನಾನು ಮುಂಬೈಗೆ ಹೋಗುವ ವದಂತಿ ಸುಳ್ಳು. ಹೈದರಾಬಾದ್‌ ನನ್ನ ಮನೆ. ಹೈದರಾಬಾದ್‌ ನನಗೆ ಎಲ್ಲವನ್ನೂ ನೀಡಿದೆ. ಹೀಗಾಗಿ, ನಾನು ಖುಷಿಯಾಗಿ ಹೈದರಾಬಾದ್‌ನಲ್ಲೇ ಇರುತ್ತೇನೆ’’ ಎಂದು ಮೊನ್ನೆಮೊನ್ನೆಯಷ್ಟೇ ಸಮಂತಾ ಹೇಳಿದ್ದರು. ಈಗ ನೋಡಿದ್ರೆ, ಮತ್ತೆ ‘’ಸಮಂತಾ ಮುಂಬೈಗೆ ಹಾರಲಿದ್ದಾರೆ. ಮುಂಬೈನಲ್ಲಿ ಸಮಂತಾ ನೆಲೆಸಲಿದ್ದಾರಂತೆ’’ ಎಂಬ ಅಂತೆ-ಕಂತೆ ಕೇಳಿಬರುತ್ತಿದೆ. ಕೆಲಸಗಳಲ್ಲಿ ಸಮಂತಾ ಬಿಜಿ ನಟಿ ಸಮಂತಾ ಸದ್ಯ ತಮ್ಮ ಕೆಲಸ ಕಾರ್ಯಗಳಲ್ಲಿ ಬಿಜಿಯಾಗಿದ್ದಾರೆ. ತೆಲುಗು ಹಾಗೂ ತಮಿಳಿನ ಚಿತ್ರಗಳು ಸಮಂತಾ ಕೈಯಲ್ಲಿವೆ. ಈ ಮಧ್ಯೆ ತೆಲುಗಿನ ಜನಪ್ರಿಯ ಕಾರ್ಯಕ್ರಮ ‘ಎವರು ಮೀಲೋ ಕೋಟೀಶ್ವರುಲು’ ಕಾರ್ಯಕ್ರಮದಲ್ಲೂ ನಟಿ ಸಮಂತಾ ಭಾಗವಹಿಸಿದ್ದಾರೆ ಎನ್ನಲಾಗಿದೆ. ದೂರಾಗುತ್ತಿರುವ ಬಗ್ಗೆ ಘೋಷಿಸಿದ ಸಮಂತಾ-ನಾಗ ಚೈತನ್ಯ ‘’ಹೆಚ್ಚು ಆಲೋಚನೆ ಮಾಡಿದ ನಂತರ ನಾವು ದೂರಾಗಲು ನಿರ್ಧರಿಸಿದ್ದೇವೆ. ಗಂಡ ಮತ್ತು ಹೆಂಡತಿಯಾಗಿದ್ದ ನಾವು ಈಗ ನಮ್ಮದೇ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿದ್ದೇವೆ. ಸ್ನೇಹವೇ ನಮ್ಮ ಸಂಬಂಧದ ಹೂರಣ. ಒಂದು ದಶಕದಿಂದ ನಾವಿಬ್ಬರು ಸ್ನೇಹಿತರಾಗಿದ್ದದ್ದು ನಮ್ಮ ಅದೃಷ್ಟ. ಈ ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಸಪೋರ್ಟ್ ಮಾಡಿ ಹಾಗೂ ನಮ್ಮ ವೈಯಕ್ತಿಕ ಬದುಕನ್ನ ಗೌರವಿಸಲು ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮಗಳಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು’’ ಎಂದು ನಾಗ ಚೈತನ್ಯ ಹಾಗೂ ನಟಿ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಟೋಬರ್ 2 ರಂದು ಪೋಸ್ಟ್ ಮಾಡಿದ್ದರು.