ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚೆಬ್ಬಿಸಿದ ಹೊಂಬಾಳೆ ಫಿಲ್ಮ್ಸ್‌! ಮತ್ತೊಂದು ಸಿನಿಮಾಕ್ಕೆ ತಯಾರಿ

ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಹೆಸರಾದ ನಿರ್ಮಾಣದ ಸಂಸ್ಥೆಯೆಂದರೆ, ಅದು ಹೊಂಬಾಳೆ ಫಿಲ್ಮ್ಸ್‌. ಇದೀಗ ಆ ಬ್ಯಾನರ್‌ನಿಂದ ಸಾಲು ಸಾಲು ಸಿನಿಮಾಗಳು ಘೋಷಣೆ ಆಗುತ್ತಿವೆ. ಈಗ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಶುಕ್ರವಾರ (ಆ.6) ಅನೌನ್ಸ್ ಆಗಲಿದೆ.

ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚೆಬ್ಬಿಸಿದ ಹೊಂಬಾಳೆ ಫಿಲ್ಮ್ಸ್‌! ಮತ್ತೊಂದು ಸಿನಿಮಾಕ್ಕೆ ತಯಾರಿ
Linkup
2013ರಲ್ಲಿ 'ನಿನ್ನಿಂದಲೇ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ , ಕಳೆದ ಎಂಟು ವರ್ಷಗಳಲ್ಲಿ ಬೆಳೆದುಬಂದ ರೀತಿ ಸಾಮಾನ್ಯವಾದುದಲ್ಲ. ಒಂದರ ಹಿಂದೊಂದು ಬಿಗ್ ಬಜೆಟ್ ಸಿನಿಮಾಗಳನ್ನು ನೀಡುತ್ತ, ದೇಶದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಮಾಡಿದ್ದ ಹೊಂಬಾಳೆ ಸಂಸ್ಥೆ ಮತ್ತೊಂದು ಸಿನಿಮಾವನ್ನು ಶುಕ್ರವಾರ (ಆ.6) ಅನೌನ್ಸ್ ಮಾಡಲಿದೆ. ನಿನ್ನೊಳಗಿ ಕಿಚ್ಚು ನಿನ್ನನ್ನು ಸುಡದಿರಲಿ..ತಮ್ಮ ಬ್ಯಾನರ್‌ನ 11 ಸಿನಿಮಾವನ್ನು ಘೋಷಣೆ ಮಾಡಲಿರುವ ಹೊಂಬಾಳೆ ಸಂಸ್ಥೆಯು, ಅದರ ಟೈಟಲ್ ಮತ್ತು ಫಸ್ಟ್‌ ಲುಕ್ ಅನ್ನು ಶುಕ್ರವಾರ (ಆ.6) ಬೆಳಗ್ಗೆ 11.43ಕ್ಕೆ ಬಹಿರಂಗ ಪಡಿಸಲಿದೆ. ಈಗ ರಿಲೀಸ್ ಮಾಡಿರುವ ಪೋಸ್ಟರ್‌ನಲ್ಲಿ 'ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ..' ಎಂಬ ಟ್ಯಾಗ್ ಲೈನ್ ಎಲ್ಲರ ಗಮನಸೆಳೆಯುತ್ತಿದೆ. ಅದರಲ್ಲೂ ಕಿಚ್ಚು ಅನ್ನೋದನ್ನು ಹೆಚ್ಚು ಹೈಲೈಟ್ ಮಾಡಿರುವುದರಿಂದ, ಸಿನಿಪ್ರಿಯರು ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಹೊಂಬಾಳೆ ಸಂಸ್ಥೆಯಲ್ಲಿ ರಿಲೀಸ್ ಆಗಿವೆ 5 ಸಿನಿಮಾಗಳು! 2014ರಿಂದ 2021ರವರೆಗೆ ಒಟ್ಟು ಐದು ಸಿನಿಮಾಗಳನ್ನು ಸಂಸ್ಥೆ ರಿಲೀಸ್ ಮಾಡಿದೆ. ನಿರ್ಮಾಣದ ಮೊದಲ 'ನಿನ್ನಿಂದಲೇ' ಸಿನಿಮಾದಲ್ಲಿ ಹೀರೋ ಆಗಿದ್ದವರು ಪುನೀತ್ ರಾಜ್‌ಕುಮಾರ್. ಆ ನಂತರ ಈ ಬ್ಯಾನರ್‌ನಲ್ಲಿ ರಿಲೀಸ್ ಆದ 'ರಾಜಕುಮಾರ' ಮತ್ತು 'ಯುವರತ್ನ' ಚಿತ್ರಗಳಿಗೂ ಅವರೇ ಹೀರೋ. ಹಾಗೆಯೇ, 'ಮಾಸ್ಟರ್‌ಪೀಸ್‌' ಮತ್ತು 'ಕೆಜಿಎಫ್: ಚಾಪ್ಟರ್ 1' ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಯಶ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಬ್ಯಾನರ್‌ನ '' ಚಿತ್ರ ರಿಲೀಸ್‌ಗೆ ಸಿದ್ಧವಾಗಿದೆ. ಐದು ಸಿನಿಮಾಗಳ ಚಾಲನೆ ಕೊಟ್ಟಿರುವ ಹೊಂಬಾಳೆ ರಿಲೀಸ್‌ಗೆ ರೆಡಿ ಇರುವ 'ಕೆಜಿಎಫ್: ಚಾಪ್ಟರ್ 2' ಬಿಟ್ಟರೆ, ಪ್ರಭಾಸ್ ನಟನೆಯ 'ಸಲಾರ್‌'ಗೆ ಶೂಟಿಂಗ್ ಸಾಗುತ್ತಿದೆ. ಅದನ್ನು 2022ರ ಏಪ್ರಿಲ್‌ನಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ನಂತರ ಶ್ರೀಮುರಳಿ ಜೊತೆಗೆ 'ಬಘೀರ'. ಇದಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದರೆ, ಡಾ. ಸೂರಿ ನಿರ್ದೇಶನ ಮಾಡಲಿದ್ದಾರೆ. ಪುನೀತ್ ರಾಜ್‌ಕುಮಾರ್, ತ್ರಿಷಾ, ನಿರ್ದೇಶಕ ಪವನ್‌ಕುಮಾರ್ ಕಾಂಬಿನೇಷನ್‌ನ 'ದ್ವಿತ್ವ' ಈ ಬ್ಯಾನರ್‌ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾವಾಗಿದೆ. ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ 'ರಿಚರ್ಡ್‌ ಆಂಟನಿ' ಸಿನಿಮಾದ ಶೂಟಿಂಗ್ ಕೂಡ ಶುರುವಾಗಬೇಕಿದೆ. ಇವಿಷ್ಟು ಸಿನಿಮಾಗಳ ಜೊತೆಗೆ ಹೊಂಬಾಳೆ ಸಂಸ್ಥೆಯು ನಾಳೆ ಇನ್ನೊಂದು ಸಿನಿಮಾವನ್ನು ಘೋಷಣೆ ಮಾಡಲಿದೆ.