ಕಾಜಲ್ ಅಗರ್ವಾಲ್ ಮುಂದೆ 'ಸ್ವಾರ್ಥ'ದ ಬೇಡಿಕೆಯನ್ನಿಟ್ಟ ಸಹೋದರಿ ನಿಶಾ..! ಏನದು..?

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕಾಜಲ್ ಅಗರ್ವಾಲ್ ಆದಷ್ಟು ಬೇಗ ಒಂದು ಮಗುವಿಗೆ ತಾಯಿಯಾಗಬೇಕು ಎಂಬುದು ಸಹೋದರಿ ನಿಶಾ ಅಗರ್ವಾಲ್ ಅವರ ಬಯಕೆ.

ಕಾಜಲ್ ಅಗರ್ವಾಲ್ ಮುಂದೆ 'ಸ್ವಾರ್ಥ'ದ ಬೇಡಿಕೆಯನ್ನಿಟ್ಟ ಸಹೋದರಿ ನಿಶಾ..! ಏನದು..?
Linkup
ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ನಟಿ . 'ಮಗಧೀರ', 'ಆರ್ಯ 2', 'ಡಾರ್ಲಿಂಗ್', 'ಬೃಂದಾವನಂ', 'ಸಿಂಗಂ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಕಾಜಲ್ ಅಗರ್ವಾಲ್‌ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡರು. ಜೂನ್ 19 ರಂದು ತಮ್ಮ 36ನೇ ಜನ್ಮದಿನವನ್ನು ಕಾಜಲ್ ಅಗರ್ವಾಲ್ ಆಚರಿಸಿಕೊಂಡರು. ಕಾಜಲ್ ಅಗರ್ವಾಲ್ ಜನ್ಮದಿನದಂದು ಸಹೋದರಿ ಶುಭಾಶಯಗಳನ್ನು ತಿಳಿಸಿದರು. ಜೊತೆಗೆ ಕಾಜಲ್ ಮುಂದೆ ಒಂದು ಸ್ವಾರ್ಥದ ಬೇಡಿಕೆಯನ್ನೂ ಇಟ್ಟರು. ಹಾಗಾದ್ರೆ, ಕಾಜಲ್ ಅಗರ್ವಾಲ್ ಮುಂದೆ ನಿಶಾ ಅಗರ್ವಾಲ್ ಇಟ್ಟ ಬೇಡಿಕೆ ಏನು ಅಂದ್ರಾ..? ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕಾಜಲ್ ಅಗರ್ವಾಲ್ ಆದಷ್ಟು ಬೇಗ ಒಂದು ಮಗುವಿಗೆ ತಾಯಿಯಾಗಬೇಕು ಎಂಬುದು ಸಹೋದರಿ ನಿಶಾ ಅಗರ್ವಾಲ್ ಅವರ ಬಯಕೆ. ''ಆದಷ್ಟು ಬೇಗ ಕಾಜಲ್ ಅಗರ್ವಾಲ್‌ಗೆ ಮಗುವಾಗಬೇಕು ಅನ್ನೋದು ನನ್ನ ಬಯಕೆ ಮತ್ತು ಬೇಡಿಕೆ. ಇದರಲ್ಲಿ ನನ್ನ ಸ್ವಾರ್ಥವೂ ಇದೆ. ಯಾಕಂದ್ರೆ, ಒಂದು ವೇಳೆ ಕಾಜಲ್ ಲೇಟ್ ಮಾಡಿದರೆ.. ಅವರ ಮಗು ಜೊತೆಗೆ ನನ್ನ ಮಗ ಹೊಂದಿಕೊಳ್ಳಲು ಕಷ್ಟವಾಗಬಹುದು. ನನ್ನ ಮಗ ಇಶಾನ್‌ಗೆ ಈಗಾಗಲೇ 3 ವರ್ಷ ತುಂಬಿದೆ'' ಎಂದು ಕಾಜಲ್ ಅಗರ್ವಾಲ್ ಹುಟ್ಟುಹಬ್ಬದ ಪ್ರಯುಕ್ತ ನೀಡಿದ ಸಂದರ್ಶನದಲ್ಲಿ ಸಹೋದರಿ ನಿಶಾ ಅಗರ್ವಾಲ್ ಹೇಳಿದ್ದಾರೆ. ನಿಶಾ ಅಗರ್ವಾಲ್ ಕೂಡ ನಟಿಯೇ..! ಕಾಜಲ್ ಅಗರ್ವಾಲ್ ತಂಗಿ ನಿಶಾ ಅಗರ್ವಾಲ್ ಕೂಡ ನಟಿಯೇ. ತೆಲುಗು, ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಿಶಾ ಅಗರ್ವಾಲ್ ಅಭಿನಯಿಸಿದ್ದಾರೆ. 'ಸೋಲೋ', 'ಇಷ್ಟಂ', 'ಸುಕುಮಾರುಡು', 'ಕಸಿನ್ಸ್' ಮುಂತಾದ ಚಿತ್ರಗಳಲ್ಲಿ ನಿಶಾ ಅಗರ್ವಾಲ್ ನಟಿಸಿದ್ದಾರೆ. ಉದ್ಯಮಿ ಕರಣ್ ವಾಲೆಚಾ ಎಂಬುವರನ್ನು ಪ್ರೀತಿಸಿ 2013ರಲ್ಲಿ ನಿಶಾ ಅಗರ್ವಾಲ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 2018ರಲ್ಲಿ ಕರಣ್ ವಾಲೆಚಾ ಮತ್ತು ನಿಶಾ ಅಗರ್ವಾಲ್ ದಂಪತಿಗೆ ಮಗು ಜನಿಸಿತು. ಪ್ರೀತಿಸಿ ಮದುವೆ ಮಾಡಿಕೊಂಡ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಟ್ಚ್ಲು ಎಂಬುವರನ್ನು ಕಾಜಲ್ ಅಗರ್ವಾಲ್ ವರ್ಷಗಳಿಂದ ಪ್ರೀತಿಸುತ್ತಿದ್ದರು. 2020ರ ಅಕ್ಟೋಬರ್ ತಿಂಗಳಿನಲ್ಲಿ ಗೌತಮ್ ಮತ್ತು ಕಾಜಲ್ ಅಗರ್ವಾಲ್ ವಿವಾಹ ಬಂಧನಕ್ಕೊಳಗಾದರು. ಮದುವೆಯಾದ್ಮೇಲೂ ಚಿತ್ರಗಳಲ್ಲಿ ನಟಿ ಕಾಜಲ್ ಅಗರ್ವಾಲ್ ಬಿಜಿಯಾಗಿದ್ದಾರೆ. ಈ ಮಧ್ಯೆ ಮಗು ಬಗ್ಗೆ ಪ್ಲಾನ್ ಮಾಡುವಂತೆ ಕಾಜಲ್ ಅಗರ್ವಾಲ್‌ಗೆ ತಂಗಿ ನಿಶಾ ಹೇಳುತ್ತಲೇ ಇದ್ದಾರೆ. ಚಿತ್ರರಂಗದಿಂದ ಬ್ರೇಕ್ ಪಡೆದು ಫ್ಯಾಮಿಲಿ ಬಗ್ಗೆ ಕಾಜಲ್ ಅಗರ್ವಾಲ್ ಗಮನ ಹರಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ. ಅಂದ್ಹಾಗೆ, ಕಾಜಲ್ ಅಗರ್ವಾಲ್ ಸದ್ಯ ಚಿರಂಜೀವಿ ಅಭಿನಯದ 'ಆಚಾರ್ಯ', ಕಮಲ್ ಹಾಸನ್ ನಟನೆಯ 'ಇಂಡಿಯನ್ 2' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. 'ಇಂಡಿಯನ್ 2' ಚಿತ್ರದ ಶೂಟಿಂಗ್ ಇನ್ನೂ ಬಾಕಿ ಇದೆ.