Junior Chiru: ಮೇಘನಾ ರಾಜ್ ಪುತ್ರನ ನಾಮಕರಣ ಸಮಾರಂಭ ಯಾವಾಗ?

ಮುದ್ದು ಮಗನನ್ನು ಸದ್ಯ ಮೇಘನಾ ರಾಜ್ ಮತ್ತು ಕುಟುಂಬ 'ಜೂನಿಯರ್ ಚಿರು', 'ಜೂನಿಯರ್ ಸಿ', 'ಚಿಂಟು' ಅಂತ ಕರೆಯುತ್ತಿದ್ದಾರೆ. ಮಗನಿಗೆ ಇನ್ನೂ ಮೇಘನಾ ರಾಜ್ ಮತ್ತು ಕುಟುಂಬ ನಾಮಕರಣ ಮಾಡಿಲ್ಲ. ಹಾಗಾದ್ರೆ, ಮೇಘನಾ ರಾಜ್ ಪುತ್ರನ ನಾಮಕರಣ ಸಮಾರಂಭ ಯಾವಾಗ ನಡೆಯಲಿದೆ? ಈ ಪ್ರಶ್ನೆಗೆ ಇದೀಗ ಮೇಘನಾ ರಾಜ್ ಉತ್ತರ ಕೊಟ್ಟಿದ್ದಾರೆ.

Junior Chiru: ಮೇಘನಾ ರಾಜ್ ಪುತ್ರನ ನಾಮಕರಣ ಸಮಾರಂಭ ಯಾವಾಗ?
Linkup
ನಟಿ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಮುದ್ದು ಮಗನ ಲಾಲನೆ-ಪಾಲನೆ ಮಾಡುವುದರಲ್ಲಿ ನಟಿ ಮೇಘನಾ ರಾಜ್ ಬಿಜಿಯಾಗಿದ್ದಾರೆ. ಆಗಾಗ ಪುತ್ರನ ಫೋಟೋ ಮತ್ತು ವಿಡಿಯೋಗಳನ್ನು ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜ್ಯೂನಿಯರ್ ಚಿರು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ಮುದ್ದು ಮಗನನ್ನು ಸದ್ಯ ಮೇಘನಾ ರಾಜ್ ಮತ್ತು ಕುಟುಂಬ '', 'ಜೂನಿಯರ್ ಸಿ', 'ಚಿಂಟು' ಅಂತ ಕರೆಯುತ್ತಿದ್ದಾರೆ. ಮಗನಿಗೆ ಇನ್ನೂ ಮೇಘನಾ ರಾಜ್ ಮತ್ತು ಕುಟುಂಬ ನಾಮಕರಣ ಮಾಡಿಲ್ಲ. ಹಾಗ್ನೋಡಿದ್ರೆ, ಇಷ್ಟೊತ್ತಿಗಾಗಲೇ ಮೇಘನಾ ರಾಜ್ ಪುತ್ರನ ನಾಮಕರಣ ಸಮಾರಂಭ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಈವರೆಗೂ ನಾಮಕರಣ ಸಮಾರಂಭ ಮಾಡಿಲ್ಲ. ಹಾಗಾದ್ರೆ, ಮೇಘನಾ ರಾಜ್ ಪುತ್ರನ ನಾಮಕರಣ ಸಮಾರಂಭ ಯಾವಾಗ ನಡೆಯಲಿದೆ? ಈ ಪ್ರಶ್ನೆಗೆ ಇದೀಗ ಮೇಘನಾ ರಾಜ್ ಉತ್ತರ ಕೊಟ್ಟಿದ್ದಾರೆ. ''ಕೋವಿಡ್ ಕಾರಣದಿಂದ ಈವರೆಗೂ ನಾಮಕರಣ ಸಮಾರಂಭ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮಗನಿಗೆ ನಾಮಕರಣ ಮಾಡಲಾಗುತ್ತದೆ. ಮಗನಿಗೆ ಹೆಸರನ್ನು ಇನ್ನೂ ಫೈನಲ್ ಮಾಡಿಲ್ಲ. ಆದಷ್ಟು ಬೇಗ ಆ ಕೆಲಸವೂ ಆಗಬೇಕಿದೆ. ನಾನು ಸದ್ಯಕ್ಕೆ ಚಿನ್ನಾರಿ, ಬಟಾಣಿ ಅಂತ ಎಲ್ಲಾ ಹೆಸರುಗಳಲ್ಲಿ ಮಗನನ್ನು ಕರೆಯುತ್ತಿದ್ದೇನೆ'' ಅಂತ ಮೇಘನಾ ರಾಜ್ ಹೇಳಿದ್ದಾರೆ. ಮಗನ ಆರೈಕೆಯಲ್ಲಿ ಬಿಜಿಯಾಗಿರುವ ಮೇಘನಾ ರಾಜ್ ಚಿತ್ರರಂಗಕ್ಕೆ ವಾಪಸ್ ಆಗುತ್ತಾರಾ ಅಂತ ಕೇಳಿದರೆ, ''ಕೆಲವು ಆಫರ್‌ಗಳು ಬಂದಿವೆ. ಆದರೆ, ಮಗನ ಜೊತೆ ನಾನೀಗ ಇರಬೇಕಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಮನೆಯಲ್ಲಿ ಮಗು ಇರುವುದರಿಂದ ನಾನು ಹೊರಗೆ ಹೋಗಿ ಬರುವುದು ತುಂಬಾ ರಿಸ್ಕ್. ಮುಂದಿನ ವರ್ಷ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುತ್ತೇನೆ. ಖಂಡಿತ ನಾನು ನಟನೆಯನ್ನು ಮುಂದುವರೆಸುವೆ'' ಎಂದು ಮೇಘನಾ ರಾಜ್ ತಿಳಿಸಿದ್ದಾರೆ. ಅಂದ್ಹಾಗೆ, ಕಳೆದ ವರ್ಷ ಅಂದ್ರೆ 2020ರ ಅಕ್ಟೋಬರ್ 22 ರಂದು ಮಗನಿಗೆ ಮೇಘನಾ ರಾಜ್ ಜನ್ಮ ನೀಡಿದರು. ಮೇಘನಾ ರಾಜ್ ಪುತ್ರನಿಗೆ ಇದೀಗ ಹತ್ತು ತಿಂಗಳು ತುಂಬಿದೆ.