ಸುಪ್ರೀಂ ಅಂಗಳಕ್ಕೆ ಲಖೀಮ್‌ಪುರ ಖೇರಿ ನ್ಯಾಯ: ಸಿಬಿಐ ತನಿಖೆಗೆ ಒತ್ತಾಯ

ಲಖೀಮ್‌ಪುರ ಖೇರಿಯಲ್ಲಿ ರೈತರ ಮೇಲೆಯೇ ವಾಹನ ಚಲಾಯಿಸಲಾಗಿದೆ ಎಂಬ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿಯೇ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನಿಖೆ ನಡೆಸಬೇಕು,'' ಎಂದು ಪಿಐಎಲ್‌ ಸಲ್ಲಿಕೆಯಾಗಿದೆ.

ಸುಪ್ರೀಂ ಅಂಗಳಕ್ಕೆ ಲಖೀಮ್‌ಪುರ ಖೇರಿ ನ್ಯಾಯ: ಸಿಬಿಐ ತನಿಖೆಗೆ ಒತ್ತಾಯ
Linkup
ಲಖನೌ: ಉತ್ತರ ಪ್ರದೇಶದ ಲಖೀಮ್‌ಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣ ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ''ಲಖೀಮ್‌ಪುರ ಖೇರಿಯಲ್ಲಿ ರೈತರ ಮೇಲೆಯೇ ವಾಹನ ಚಲಾಯಿಸಲಾಗಿದೆ ಎಂಬ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿಯೇ ಕೇಂದ್ರೀಯ ತನಿಖಾ ಸಂಸ್ಥೆ () ತನಿಖೆ ನಡೆಸಬೇಕು,'' ಎಂದು ಉತ್ತರ ಪ್ರದೇಶದ ಇಬ್ಬರು ವಕೀಲರು ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ () ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶವು ರಾಜಕೀಯ ಅಖಾಡವಾಗಿ ಮಾರ್ಪಟ್ಟಿದ್ದು, ಹಲವು ಪ್ರತಿಪಕ್ಷಗಳು ಲಖೀಮ್‌ಪುರ ಖೇರಿಗೆ ಭೇಟಿ ನೀಡಲು ತೀರ್ಮಾನಿಸಿವೆ. ''ಭಾನುವಾರ ನಡೆದ ಘಟನೆಯಲ್ಲಿ ನಾಲ್ವರು ರೈತರು ಮೃತಪಟ್ಟಿದ್ದಾರೆ. ಅವರ ಮೇಲೆಯೇ ವಾಹನ ಚಲಾಯಿಸಲಾಗಿದೆ. ಹಾಗಾಗಿ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು. ಸರ್ವೋಚ್ಚ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿಯೇ ಸಿಬಿಐ ತನಿಖೆ ನಡೆಸಬೇಕು. ಹಾಗೆಯೇ ಘಟನೆ ಕುರಿತು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು,'' ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈಗಾಗಲೇ ರಾಜ್ಯ ಸರಕಾರವು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಆದರೆ, ಕೇಂದ್ರೀಯ ತನಿಖಾ ಸಂಸ್ಥೆಯಿಂದಲೇ ತನಿಖೆ ನಡೆಯಬೇಕು ಎಂಬುದು ವಕೀಲರ ಮನವಿಯಾಗಿದೆ. ಅತ್ತ, ಪ್ರತಿಪಕ್ಷಗಳು ಸಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿವೆ. ಹಾಗಾಗಿ ತನಿಖೆ ಕುರಿತು ಸುಪ್ರೀಂ ಕೋರ್ಟ್‌ ನಿಲುವೇನು ಎಂಬ ಕುತೂಹಲ ಮೂಡಿದೆ. ಕಳೆದ ಭಾನುವಾರ ಲಖೀಮ್‌ಪುರ ಖೇರಿಯಲ್ಲಿ ಕೇಂದ್ರ ಸರಕಾರದ ಮೂರು ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ರೈತರ ಮೇಲೆ ವಾಹನ ಚಲಿಸಿದ ಹಾಗೂ ಇದಾದ ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಎಂಟು ಜನ ಮೃತಪಟ್ಟಿದ್ದಾರೆ. ಪ್ರಿಯಾಂಕಾ ಸೇರಿ 11 ಜನರ ವಿರುದ್ಧ ಎಫ್‌ಐಆರ್‌ ಎಫ್‌ಐಆರ್‌ ದಾಖಲಿಸದೆಯೇ ನನ್ನನ್ನು ಬಂಸಲಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪ್ರಿಯಾಂಕಾ ಸೇರಿ 11 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಮತ್ತೊಂದೆಡೆ ಸೀತಾಪುರ ಅತಿಥಿ ಗೃಹದ ಸುತ್ತ ಡ್ರೋನ್‌ ಕ್ಯಾಮೆರಾಗಳ ಕಣ್ಗಾವಲು ಇಡಲಾಗಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹಿಂಸಾಚಾರ ನಡೆದ ಲಖೀಮ್‌ಪುರ ಖೇರಿಗೆ ತೆರಳಲು ಯತ್ನಿಸುವ ಮೂಲಕ ಶಾಂತಿಗೆ ಭಂಗವುಂಟು ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಹರಗಾಂವ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ''ಶಾಂತಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರಾದ ಪ್ರಿಯಾಂಕಾ ವಾದ್ರಾ, ದೀಪೇಂದರ್‌ ಸಿಂಗ್‌ ಹೂಡಾ, ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್‌ ಕುಮಾರ್‌ ಲಲ್ಲು ಸೇರಿ 11 ಮಂದಿ ವಿರುದ್ಧ ಐಪಿಸಿ ಸೆಕ್ಷನ್‌ 107/16ರ ಅನ್ವಯ ಎಫ್‌ಐಆರ್‌ ದಾಖಲಿಸಲಾಗಿದೆ,'' ಎಂದು ಹರಗಾಂವ್‌ ಪೊಲೀಸ್‌ ಠಾಣೆ ಎಸ್‌ಎಚ್‌ಒ ಬ್ರಿಜೇಶ್‌ ತ್ರಿಪಾಠಿ ತಿಳಿಸಿದ್ದಾರೆ. ಸೋಮವಾರ ಲಖೀಮ್‌ಪುರ ಖೇರಿಗೆ ತೆರಳಲು ಯತ್ನಿಸಿದ ಪ್ರಿಯಾಂಕಾ ವಾದ್ರಾ ಅವರನ್ನು ಹರಗಾಂವ್‌ನಲ್ಲಿ ಬಂಧಿಸಲಾಗಿದ್ದು, ಸೀತಾಪುರದ ಅತಿಥಿ ಗೃಹದಲ್ಲಿ ಇರಿಸಲಾಗಿದೆ. ಪ್ರಿಯಾಂಕಾ ಬಂಧನಕ್ಕೆ ಕಾಂಗ್ರೆಸ್‌ ಆಕ್ರೊಶ ವ್ಯಕ್ತಪಡಿಸಿದ್ದು, ಮಂಗಳವಾರವೂ ದೇಶದ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ. ಅತಿಥಿ ಗೃಹವೇ ತಾತ್ಕಾಲಿಕ ಜೈಲು: ಪ್ರಿಯಾಂಕಾ ವಾದ್ರಾ ಅವರನ್ನು ಇರಿಸಲಾಗಿರುವ ಸೀತಾಪುರದ ಪಿಎಸಿ ಅತಿಥಿ ಗೃಹವನ್ನೇ ತಾತ್ಕಾಲಿಕ ಜೈಲಾಗಿ ಪರಿಗಣಿಸಲಾಗಿದೆ. ಸೋಮವಾರ ವಾದ್ರಾರನ್ನು ಬಂಧಿಸಿದ ಪೊಲೀಸರು ಇದೇ ಅತಿಥಿ ಗೃಹದ ಕೊಠಡಿಯಲ್ಲಿ ಇರಿಸಲಾಗಿದ್ದು, ಸದ್ಯ ಇದನ್ನೇ ತಾತ್ಕಾಲಿಕ ಜೈಲನ್ನಾಗಿ ಮಾರ್ಪಡಿಸಲಾಗಿದೆ. ''ಎಫ್‌ಐಆರ್‌ ಇಲ್ಲದೆಯೇ ನನ್ನನ್ನು ಬಂಧಿಸಲಾಗಿದೆ. ಬಂಧಿಸಿ 28 ಗಂಟೆ ಕಳೆದರೂ ಎಫ್‌ಐಆರ್‌ ದಾಖಲಿಸಿಲ್ಲ. ಇದು ಸರ್ವಾಧಿಕಾರದ ಸಂಕೇತ,'' ಎಂದು ವಾದ್ರಾ ಆಕ್ರೋಶ ವ್ಯಕ್ತಪಡಿಸಿದ್ದರು. ಕಾರಿನಲ್ಲಿ ಸಚಿವರ ಪುತ್ರ ಆಶಿಶ್‌ ಇದ್ದರು ಎಂದ ಗಾಯಾಳು ರೈತ ರೈತರ ಮೇಲೆ ಚಲಿಸಿದೆ ಎನ್ನಲಾದ ಕಾರಿನಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಆಶಿಶ್‌ ಮಿಶ್ರಾ ಇದ್ದರು ಎಂದು ವಾಹನಕ್ಕೆ ಸಿಲುಕಿ ಗಾಯಗೊಂಡಿರುವ ರೈತರೊಬ್ಬರು ತಿಳಿಸಿದ್ದಾರೆ. ''ಅಜಯ್‌ ಮಿಶ್ರಾ ಹೇಳಿಕೆ ವಿರೋಧಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೆವು. ಆಗ ವೇಗವಾಗಿ ಬಂದ ಕಾರು ನಮ್ಮ ಮೇಲೆ ಚಲಿಸಿದೆ. ಅದರಲ್ಲಿ ಸಚಿವರ ಪುತ್ರ ಆಶಿಶ್‌ ಮಿಶ್ರಾ ಸಹ ಇದ್ದರು,'' ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ತೇಜಿಂದರ್‌ ವಿರ್ಕ್ ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲೇ ಧರಣಿ ನಡೆಸಿದ ಬಘೇಲ್‌ ಲಖನೌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರನ್ನು ಅಧಿಕಾರಿಗಳು ತಡೆದ ಹಿನ್ನೆಲೆಯಲ್ಲಿ ಬಘೇಲ್‌ ಅವರು ವಿಮಾನ ನಿಲ್ದಾಣದಲ್ಲಿಯೇ ಧರಣಿ ನಡೆಸಿದರು. ''ನಾನು ಲಖೀಮ್‌ಪುರ ಖೇರಿಗೆ ತೆರಳಲು ಬಂದಿಲ್ಲ. ಪಕ್ಷದ ಕಚೇರಿ ಹಾಗೂ ನಾಯಕಿ ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿಯಾಗಲು ಬಂದಿದ್ದೇನೆ. ಆದರೂ, ನಾನು ವಿಮಾನ ನಿಲ್ದಾಣದ ಹೊರಗೆ ಹೋಗಲು ಸಹ ಬಿಡುತ್ತಿಲ್ಲ,'' ಎಂದು ಬಘೇಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊನೆಗೆ ಅಧಿಕಾರಿಗಳು ಲಖನೌ ಪ್ರವೇಶಿಸಲು ಬಿಡದ ಕಾರಣ ಅವರು ರಾಯಪುರಕ್ಕೆ ಹಿಂದಿರುಗಿದರು. ಕಾರು ಚಾಲನೆ ಕುರಿತು ವರುಣ್‌ ಗಾಂಧಿ ವಿಡಿಯೊ ಬಿಡುಗಡೆ ಲಖೀಮ್‌ಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಚಲಾಯಿಸಿದ ಘಟನೆ ಕುರಿತು ಬಿಜೆಪಿ ಸಂಸದ ವರುಣ್‌ ಗಾಂಧಿಯವರು ವಿಡಿಯೊ ಒಂದನ್ನು ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ''ರೈತರ ಮೇಲೆಯೇ ವಾಹನ ಚಲಿಸಿದೆ. ವಿಡಿಯೊ ನೋಡಿದರೆ ಎಲ್ಲರ ಮನಸ್ಸೂ ಕಲಕುತ್ತದೆ. ಪೊಲೀಸರು ವಿಡಿಯೊ ನೋಡಿ, ಯಾರು ತಪ್ಪಿತಸ್ಥರೋ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು,'' ಎಂದು ವರುಣ್‌ ಟ್ವೀಟ್‌ ಮಾಡಿದ್ದಾರೆ. ಆಶಿಶ್‌ ಬಂಧನ ವಿಳಂಬ, ಪೊಲೀಸರಿಂದ ಸಬೂಬು ರೈತರ ಮೇಲೆ ಚಲಿಸಿದ ವಾಹನದಲ್ಲಿ ಇದ್ದರು ಎನ್ನಲಾದ, ಇದೇ ಪ್ರಕರಣಕ್ಕೆ ಸಂಬಂಸಿದಂತೆ ಎಫ್‌ಐಆರ್‌ ದಾಖಲಾಗಿ 24 ಗಂಟೆ ಕಳೆದರೂ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿಲ್ಲ. ಅಲ್ಲದೆ, ''ರೈತರ ಜತೆ ಸಂಧಾನ, ಹಿಂಸಾಚಾರಕ್ಕೆ ಬಲಿಯಾದವರ ಮರಣೋತ್ತರ ಪರೀಕ್ಷೆ, ಅವರ ಅಂತ್ಯಸಂಸ್ಕಾರ ಸೇರಿ ಹಲವು ಕೆಲಸಗಳಲ್ಲಿಯೇ ತೊಡಗಿದ ಕಾರಣ ಬಂಧನ ವಿಳಂಬವಾಗಿದೆ,'' ಎಂದು ಪೊಲೀಸರು ಸಬೂಬು ನೀಡಿದ್ದಾರೆ. ''ಹಿಂಸಾಚಾರಕ್ಕೆ ಸಂಬಂಸಿದಂತೆ ಪೊಲೀಸರು ಬಿಡುವಿಲ್ಲದ ಕೆಲಸದಲ್ಲಿ ನಿರತರಾಗಿದ್ದಾರೆ. ಪ್ರತಿಯೊಂದು ಪ್ರಕರಣದಲ್ಲೂ ಪ್ರಕ್ರಿಯೆ ಪಾಲಿಸಬೇಕಾಗುತ್ತದೆ. ಹಾಗಾಗಿ ತುಸು ವಿಳಂಭವಾಗಿದೆ,'' ಎಂದು ಲಖನೌ ವಲಯದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಎಸ್‌.ಎನ್‌.ಸಾಬತ್‌ ಹೇಳಿದ್ದಾರೆ. ಪೊಲೀಸರ ವಿಳಂಬ ಧೋರಣೆಯನ್ನು ಪ್ರತಿಪಕ್ಷಗಳು, ಸಾರ್ವಜನಿಕರು ಖಂಡಿಸಿದ್ದಾರೆ. ಪರಿಸ್ಥಿತಿ ತಹಬಂದಿಗೆ ಬರುತ್ತಿರುವ ಕಾರಣ ಲಖೀಮ್‌ಪುರ ಖೇರಿಯಲ್ಲಿಅಂತರ್ಜಾಲ ಸೇವೆ ಪುನಾರಂಭ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಪಂಜಾಬ್‌ ಸಿಎಂ ಚನ್ನಿ, ಹಿಂಸಾಚಾರ ಕುರಿತು ಚರ್ಚೆ