Lakhimpur Kheri Violence: ಪ್ರವೇಶ ನಿರಾಕರಿಸಿದ ಉತ್ತರ ಪ್ರದೇಶ ಸರ್ಕಾರಕ್ಕೆ ರಾಹುಲ್ ಗಾಂಧಿ ಸಡ್ಡು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗವು ಗಲಭೆ ಪೀಡಿತ ಲಖಿಂಪುರ ಖೇರಿ ಜಿಲ್ಲೆಗೆ ಭೇಟಿ ನೀಡಲು ಉತ್ತರ ಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿದೆ. ಆದರೂ ಈ ತಂಡ ಲಕ್ನೋದತ್ತ ಹೊರಟಿದೆ.

Lakhimpur Kheri Violence: ಪ್ರವೇಶ ನಿರಾಕರಿಸಿದ ಉತ್ತರ ಪ್ರದೇಶ ಸರ್ಕಾರಕ್ಕೆ ರಾಹುಲ್ ಗಾಂಧಿ ಸಡ್ಡು
Linkup
ಹೊಸದಿಲ್ಲಿ: ಗಲಭೆ ಪೀಡಿತ ಉತ್ತರ ಪ್ರದೇಶದ ಜಿಲ್ಲೆಗೆ ಭೇಟಿ ನೀಡಲು ಕಾಂಗ್ರೆಸ್ ಸಂಸದ ಅವರಿಗೆ ಸರ್ಕಾರ ಅನುಮತಿ ನಿರಾಕರಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ವಿರೋಧಪಕ್ಷಗಳ ಅನೇಕ ಮುಖಂಡರಿಗೆ ಪೊಲೀಸರು ಪ್ರವೇಶ ನಿರಾಕರಿಸಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್, ರಾಹುಲ್ ಗಾಂಧಿ ನೇತೃತ್ವದ ಐವರು ಸದಸ್ಯರ ನಿಯೋಗವು ಜಿಲ್ಲೆಗೆ ಭೇಟಿ ನೀಡಲು ಆಲೋಚಿಸಿದೆ ಎಂದು ತಿಳಿಸಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನವು ಯಾವುದೇ ಕಾರಣ ಅಥವಾ ಸಮರ್ಥನೆಯಿಲ್ಲದೆ ನಡೆದಿದೆ ಎಂದು ಅದು ಆರೋಪಿಸಿದೆ. ದೊಡ್ಡ ಗುಂಪುಗಳಲ್ಲಿ ಜನರು ತಡೆಯುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಕೆಲವೇ ಸಮಯದ ಬಳಿಕ ರಾಹುಲ್ ಹಾಗೂ ಕಾಂಗ್ರೆಸ್‌ನ ಇತರೆ ನಾಯಕರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ರಾಹುಲ್ ಗಾಂಧಿ, ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ವಾಘೇಲ್, ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಪಕ್ಷದ ನಾಯಕ ಕೆಸಿ ವೇಣುಗೋಪಾಲ್ ಮತ್ತು ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಲಕ್ನೋ ಕಡೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 1.30ಕ್ಕೆ ಅವರು ಅಲ್ಲಿಗೆ ತಲುಪುವ ನಿರೀಕ್ಷೆಯಿದೆ. ತಮ್ಮನ್ನು ಸೀತಾಪುರದ ಅತಿಥಿಗೃಹದಲ್ಲಿ ಅಕ್ರಮವಾಗಿ ಬಂಧಿಸಿಡಲಾಗಿದೆ. ತಮ್ಮ ಬಂಧನ ಮಾಡಿ ಒಂದು ದಿನ ಕಳೆದಿದ್ದರೂ ಎಫ್‌ಐಆರ್ ದಾಖಲಿಸಿಲ್ಲ. ಕಾನೂನು ಸಲಹೆಗಾರರನ್ನು ಭೇಟಿ ಮಾಡಲು ಸಹ ಅವಕಾಶ ನೀಡುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದರು. ಎದೆನಡುಗಿಸುವ ವಿಡಿಯೋಗಳುಭಾನುವಾರ ನಡೆದ ಹಿಂಸಾಚಾರದ ಬಳಿಕ ಆ ಘಟನೆಯ ವಿಡಿಯೋಗಳು ಒಂದೊಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿವೆ. ನಾಲ್ವರು ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು, ಒಬ್ಬ ಚಾಲಕ ಹಾಗೂ ಒಬ್ಬ ಪತ್ರಕರ್ತ ಈ ಗಲಭೆಯಲ್ಲಿ ಮೃತಪಟ್ಟಿದ್ದರು. ಕಾರೊಂದು ಪ್ರತಿಭಟನಾಕಾರರ ಮೇಲೆ ಹರಿದು ಹೋದ ವಿಡಿಯೋಗಳು ಮಂಗಳವಾರ ವೈರಲ್ ಆಗಿದ್ದವು. ಜತೆಗೆ ತಮ್ಮನ್ನು ವಿರೋಧಿಸಿದವರನ್ನು ಬಿಜೆಪಿ ಬೆಂಬಲಿಗರು ಥಳಿಸುವ ವಿಡಿಯೋಗಳು ಕೂಡ ಹರಿದಾಡುತ್ತಿವೆ. ಇದು ಪೂರ್ವ ನಿಯೋಜಿತಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಅವರ ಮಗ ಆಶಿಶ್ ಮಿಶ್ರಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಬಹಿರಂಗವಾಗಿದೆ. ರೈತರು ನೀಡಿದ್ದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದ್ದು, 'ರೈತರ ಮೇಲೆ ವಾಹನ ಹರಿಸುವ ಕೃತ್ಯವು ಸಚಿವರು ಮತ್ತು ಅವರ ಮಗ ನಡೆಸಿದ್ದ ಪೂರ್ವ ನಿಯೋಜಿತ ಸಂಚು' ಎಂದು ಅದರಲ್ಲಿ ಆರೋಪಿಸಲಾಗಿದೆ. ಕೊಲೆ ಮತ್ತು ನಿರ್ಲಕ್ಷ್ಯದಿಂದ ವಾಹನ ಚಾಲನೆ ಆರೋಪಗಳನ್ನು ಆಶಿಶ್ ಮಿಶ್ರಾ ವಿರುದ್ಧ ದಾಖಲಿಸಲಾಗಿದೆ. ಆದರೆ ಘಟನೆ ನಡೆದು ಮೂರು ದಿನಗಳಾದರೂ ಅವರನ್ನು ಬಂಧಿಸಿಲ್ಲ. ಈ ವಿಳಂಬಕ್ಕೆ ರೈತರ ಜತೆಗಿನ ಮಾತುಕತೆ, ಮರಣೋತ್ತರ ಪರೀಕ್ಷೆ ವರದಿ ಹಾಗೂ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಪೊಲೀಸರು ಕಾರಣವಾಗಿ ನೀಡುತ್ತಿದ್ದಾರೆ. ಭಾನುವಾರ ಕಪ್ಪು ಬಾವುಟ ಹಿಡಿದು ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಅವರಿಗೆ ತಡೆಯೊಡ್ಡುವುದು ಅದರ ಉದ್ದೇಶವಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೂರು ವಾಹನಗಳಲ್ಲಿ ತನ್ನ 15-20 ಜನರೊಂದಿಗೆ ಆಯುಧಗಳೊಂದಿಗೆ ಬಂದ ಆಶಿಶ್ ಮಿಶ್ರಾ, ತಮ್ಮ ಥಾರ್ ಮಹೀಂದ್ರಾ ವಾಹನದ ಎಡಭಾಗದಲ್ಲಿ ಕುಳಿತಿದ್ದರು. ಅವರು ಜನರ ಗುಂಪಿನ ಮೇಲೆ ಗುಂಡು ಹಾರಿಸಿದರು. ವಾಹನ ರೈತರ ಮೇಲೆ ಹರಿಯಿತು. ಗುಂಡೇಟಿನಿಂದ ರೈತ ಸುಖ್ವಿಂದರ್ ಸಿಂಗ್ ಅವರ 22 ವರ್ಷದ ಮಗ ಗುರ್ವಿಂದರ್ ಮೃತಪಟ್ಟಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಕಾರು ರಸ್ತೆಯ ಎರಡೂ ಬದಿಗಳಲ್ಲಿದ್ದ ರೈತರಿಗೆ ಅಪ್ಪಳಿಸಿದೆ. ಅದರ ಬಳಿಕ ಚಾಲಕ ನಿಯಂತ್ರಣ ತಪ್ಪಿ, ವಾಹನ ಕಂದಕವೊಂದಕ್ಕೆ ಉರುಳಿದೆ. ಇದರಿಂದ ಅನೇಕರಿಗೆ ಗಾಯಗಳಾಗಿವೆ. ಬಳಿಕ ವಾಹನದಿಂದ ಇಳಿದ ಸಚಿವರ ಮಗ ಗುಂಡು ಹಾರಿಸುತ್ತಲೇ ಕಬ್ಬಿನ ಹೊಲದೊಳಗೆ ಓಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಐವರು ಮೃತಪಟ್ಟಿದ್ದರು. ಈ ಘಟನೆ ರೈತರಲ್ಲಿ ಆಕ್ರೋಶ ಮೂಡಿಸಿದ್ದರಿಂದ ಭಾರಿ ಹಿಂಸಾಚಾರಕ್ಕೆ ತಿರುಗಿದೆ. ಈ ಸಂಘರ್ಷದಲ್ಲಿ ಮೂವರು ಜೀವ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಮೃತಪಟ್ಟವರು ಗಾಯಗಳಿಂದ, ಆಘಾತ ಹಾಗೂ ಬ್ರೈನ್ ಹ್ಯಾಮರೇಜ್‌ನಿಂದ ಬಲಿಯಾಗಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿಗಳು ಹೇಳಿವೆ. ಬಲಿಯಾದವರ ಮೃತದೇಹಗಳ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಮನೆಯವರು ಪಟ್ಟು ಹಿಡಿದಿದ್ದರು. ಬಳಿಕ ಮನವೊಲಿಸಿ ಮೂರು ಮೃತದೇಹಗಳ ಅಂತ್ಯಸಂಸ್ಕಾರ ನಡೆಸಲಾಯಿತು. ಗುಂಡೇಟಿನಿಂದ ಬಲಿಯಾದ ವ್ಯಕ್ತಿಗೆ ಎರಡನೆಯ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಒಪ್ಪಿಕೊಂಡಿದ್ದಾರೆ. ದಿಲ್ಲಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ರೈತರು ಒತ್ತಾಯಿಸಿದ್ದರು. ಕೊನೆಗೆ ಬಹ್ರೈಚ್ ಆಸ್ಪತ್ರೆಯಲ್ಲಿ ನಡೆಸಲು ಒಪ್ಪಿಕೊಂಡರು. ಈ ವಾಹನಗಳು ತಮಗೆ ಸೇರಿದ್ದು ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಒಪ್ಪಿಕೊಂಡಿದ್ದರೂ, ತಮ್ಮ ಮಗ ಆ ಸಂದರ್ಭದಲ್ಲಿ ಅಲ್ಲಿ ಇರಲಿಲ್ಲ ಎಂದು ವಾದಿಸಿದ್ದಾರೆ. ಗುಂಪುಗೂಡಿದ್ದ ಜನರು ವಾಹನದ ಮೇಲೆ ಹಲ್ಲು ತೂರಾಟ ನಡೆಸಿದ್ದರಿಂದ ಚಾಲಕ ನಿಯಂತ್ರಣ ಕಳೆದುಕೊಂಡು ಜನರ ಮೇಲೆ ನುಗ್ಗಿಸಿರಬಹುದು ಎಂದು ಅವರು ಹೇಳಿದ್ದಾರೆ. ಆದರೆ ಮುಂದೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ವಾಹನ ಹಿಂದಿನಿಂದ ಅಪ್ಪಳಿಸಿ ಸಾಗಿರುವುದು ಅನೇಕ ನಾಯಕರು ಹಂಚಿಕೊಂಡ ವಿಡಿಯೋಗಳಲ್ಲಿ ಕಾಣಿಸಿದೆ. ಮತ್ತೊಂದು ವಿಡಿಯೋದಲ್ಲಿ ಆಶಿಶ್ ಮಿಶ್ರಾ ವಾಹನದಿಂದ ಕೆಳಗೆ ಇಳಿದು ಓಡುವುದು ಸೆರೆಯಾಗಿದೆ. ಈ ವಿಡಿಯೋಗಳ ಅಧಿಕೃತತೆಯನ್ನು ಪೊಲೀಸರು ದೃಢಪಡಿಸಿಲ್ಲ.