ಉತ್ತರಾಖಂಡ ಮತದಾರರ ಮನಗೆಲ್ಲುವ ಸರ್ಕಸ್: ಉಚಿತ ವಿದ್ಯುತ್‌ ಭರವಸೆ ನೀಡಿದ ಆಪ್‌..!

'ಉತ್ತರಾಖಂಡದಲ್ಲಿ ಸಾಕಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೂ ಇಲ್ಲಿನ ಆಡಳಿತಾರೂಢ ಸರಕಾರ ಜನರಿಂದ ಭಾರಿ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿದೆ. ಇದುವರೆಗೂ ಇಲ್ಲಿನ ಸರಕಾರ ಉಚಿತ ವಿದ್ಯುತ್‌ ಏಕೆ ಪೂರೈಸುತ್ತಿಲ್ಲ' - ಕೇಜ್ರಿವಾಲ್ ಪ್ರಶ್ನೆ

ಉತ್ತರಾಖಂಡ ಮತದಾರರ ಮನಗೆಲ್ಲುವ ಸರ್ಕಸ್: ಉಚಿತ ವಿದ್ಯುತ್‌ ಭರವಸೆ ನೀಡಿದ ಆಪ್‌..!
Linkup
: ವಿಧಾನಸಭೆ ಚುನಾವಣೆಗೆ ಇನ್ನೂ ಹಲವು ತಿಂಗಳು ಇರುವಾಗಲೇ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಭರವಸೆಗಳ ಸುರಿಮಳೆ ಆರಂಭಿಸಿದೆ. ರಾಜ್ಯದಲ್ಲಿಆಮ್‌ ಆದ್ಮಿ ಪಕ್ಷವನ್ನು ಗೆಲ್ಲಿಸಿದರೆ, ದಿಲ್ಲಿ ಮಾದರಿಯಲ್ಲಿ ಉತ್ತರಾಖಂಡದಲ್ಲೂ ನಗರ ಪ್ರದೇಶದ ಜನರಿಗೆ 300 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಕೇಜ್ರಿವಾಲ್‌ ಘೋಷಿಸಿದ್ದಾರೆ. ವಿದ್ಯುತ್‌ಗೆ ಸಂಬಂಧಿಸಿದಂತೆ ನಾಲ್ಕು ಭರವಸೆಗಳನ್ನು ಕೇಜ್ರಿವಾಲ್‌ ನೀಡಿದ್ದಾರೆ. 'ಮೊದಲು ನಾವು 300 ಯೂನಿಟ್‌ ಉಚಿತ ವಿದ್ಯುತ್‌ ನೀಡುತ್ತೇವೆ. ಇದರಿಂದ 1,200 ಕೋಟಿ ರೂ. ಆರ್ಥಿಕ ಹೊರೆಯಾಗಲಿದೆ. ಎರಡನೆಯದಾಗಿ, ಜನರು ಬಾಕಿ ಬಿಲ್‌ಗಳನ್ನು ತುಂಬುವ ಅಗತ್ಯವಿಲ್ಲ. ಮೂರನೆಯದಾಗಿ, ರಾಜ್ಯದಲ್ಲಿ ವಿದ್ಯುತ್‌ ಕಡಿತವೇ ಇರುವುದಿಲ್ಲ. ದಿನದ 24 ಗಂಟೆಯೂ ತಡೆರಹಿತ ವಿದ್ಯುತ್‌ ಪೂರೈಸಲಾಗುವುದು. ನಾಲ್ಕನೆಯದಾಗಿ ಕೃಷಿ ಉದ್ದೇಶಕ್ಕೆ ರೈತರಿಗೆ ಉಚಿತ ವಿದ್ಯುತ್‌ ನೀಡಲಾಗುವುದು' ಎಂದು ಕೇಜ್ರಿವಾಲ್‌ ಹೇಳಿದ್ದಾರೆ. 'ಉತ್ತರಾಖಂಡದಲ್ಲಿ ಸಾಕಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೂ ಇಲ್ಲಿನ ಆಡಳಿತಾರೂಢ ಸರಕಾರ ಜನರಿಂದ ಭಾರಿ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿದೆ. ಇದುವರೆಗೂ ಇಲ್ಲಿನ ಸರಕಾರ ಉಚಿತ ವಿದ್ಯುತ್‌ ಏಕೆ ಪೂರೈಸುತ್ತಿಲ್ಲ' ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್‌ನಲ್ಲಿಯೂ ಕೇಜ್ರಿವಾಲ್‌ ಉಚಿತ ವಿದ್ಯುತ್‌ ಪೂರೈಕೆಯ ಭರವಸೆ ನೀಡಿದ್ದಾರೆ.