'ಕಥಾ ಸಂಗಮ'ದ ರೀತಿಯಲ್ಲೇ ಮತ್ತೊಂದು ಸಿನಿಮಾ ಶುರು! 'ಶಾಂತಿಯನ್ನು ಕಳೆದುಕೊಳ್ಳಬೇಡಿ' ಎಂದಿದ್ದೇಕೆ ನಿರ್ದೇಶಕರು?

ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಕಥಾ ಸಂಗಮ, ಐದೊಂದ್ಲಾ ಐದು ಥರದ anthology ಸಿನಿಮಾಗಳು ತೆರೆಕಂಡಿವೆ. ಸದ್ಯ 'ಪೆಂಟಗನ್' ಶೀರ್ಷಿಕೆಯ ಸಿನಿಮಾವೊಂದು ತೆರೆಗೆ ಸಿದ್ಧವಾಗಿದೆ. ಈ ಮಧ್ಯೆ ಮತ್ತೊಂದು ಅಂಥದ್ದೇ ಸಿನಿಮಾ ಸೆಟ್ಟೇರಿದೆ.

'ಕಥಾ ಸಂಗಮ'ದ ರೀತಿಯಲ್ಲೇ ಮತ್ತೊಂದು ಸಿನಿಮಾ ಶುರು! 'ಶಾಂತಿಯನ್ನು ಕಳೆದುಕೊಳ್ಳಬೇಡಿ' ಎಂದಿದ್ದೇಕೆ ನಿರ್ದೇಶಕರು?
Linkup
ಈಚೆಗೆ ನಟ/ನಿರ್ದೇಶಕ ರಿಷಬ್‌ ಶೆಟ್ಟಿ ತಮ್ಮ ತಂಡದ ಜೊತೆಗೆ ಸೇರಿಕೊಂಡು '' ಸಿನಿಮಾ ಮಾಡಿದ್ದರು. ಐವರು ನಿರ್ದೇಶಕರ ಐದು ಕಥೆಗಳನ್ನು ಒಂದು ಸಿನಿಮಾವನ್ನಾಗಿ ಮಾಡಲಾಗಿತ್ತು. ಸದ್ಯ ಇಂಥ ಪ್ರಯತ್ನಗಳು ತಮಿಳು-ತೆಲುಗಿನಲ್ಲಿ ಹೆಚ್ಚಾಗಿವೆ. ಅದರಲ್ಲೂ ಓಟಿಟಿಗಾಗಿ ಈ ಥರದ ಕಂಟೆಂಟ್‌ಗಳನ್ನು ಇಟ್ಟುಕೊಂಡು ಹೆಚ್ಚು ಸಿನಿಮಾಗಳನ್ನು ಮಾಡಲಾಗುತ್ತಿದೆ. ಇದೀಗ ಅದೇ ಮಾದರಿಯಲ್ಲಿ ಕನ್ನಡದಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಇಲ್ಲಿ ಮೂರು ಕಥೆಗಳಿದ್ದು, ಅವುಗಳನ್ನು ಮೂವರು ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಶಾಂತಿಯನ್ನು ಕಳೆದುಕೊಳ್ಳಬೇಡಿ!ಮೂರು ಕಥೆಗಳ ಈ ಸಿನಿಮಾಗೆ '' ಅಂತ ಶೀರ್ಷಿಕೆ ಇಡಲಾಗಿದೆ. ಇಲ್ಲಿ ಬರುವ ಮೂರು ಕಥೆಗಳಲ್ಲಿ ಒಂದು ಸಂದೇಶ ಇರಲಿದೆಯಂತೆ. 'ಮೀರಾ ಮಾಧವ', 'ಚುಕ್ಕಿ', 'ಮೇಘ ಮಯೂರಿ', 'ಅಂಬಾರಿ' ಮುಂತಾದ ಕನ್ನಡ ಧಾರಾವಾಹಿಗಳಿಗೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ ಅನುಭವಿರುವ ವಿಘ್ನೇಶ್ ಶೇರೆಗಾರ್, ಕನ್ನಡ ಹಾಗೂ ತುಳು ಭಾಷೆಯ ಸಿನಿಮಾಗಳಿಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಈಗ ಪೂರ್ಣಪ್ರಮಾಣದಲ್ಲಿ ನಿರ್ದೇಶಕರಾಗಲು ಸಿದ್ಧವಾಗಿದ್ದಾರೆ. ಮೂರು ಕಥೆಗಳಲ್ಲಿ ಒಂದು ಕಥೆಗೆ ವಿಘ್ನೇಶ್ ಶೇರೆಗಾರ್ ನಿರ್ದೇಶನ ಮಾಡಿದರೆ, ಉಳಿದ ಎರಡು ಕಥೆಗಳಿಗೆ ಬಾಸುಮ ಕೊಡಗು ಮತ್ತು ಶಿವ ಎಂಬುವವರು ಡೈರೆಕ್ಷನ್‌ ಮಾಡಲಿದ್ದಾರೆ. ಗಿರೀಶ್‌ ಕಾಸರವಳ್ಳಿ ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವ ಬಾಸುಮ ಕೊಡಗು ಅವರಿಗೆ ಇದ್ದರೆ, ಶಿವ ಈ ಹಿಂದೆ ಹಲವಾರು ಕಿರುಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಈಗ ಮೂವರು ಸೇರಿ 'ಶಾಂತಿಯನ್ನು ಕಳೆದುಕೊಳ್ಳಬೇಡಿ' ಎನ್ನುತ್ತಿದ್ದಾರೆ. ಪದ್ಮಾವತಿ ಸ್ಟುಡಿಯೋಸ್ ಸಂಸ್ಥೆಯು ಈ anthology ಸಿನಿಮಾಗೆ ಹಣ ಹಾಕುತ್ತಿದೆ. ಕಲ್ಕಿ ಅಭಿಷೇಕ್-ಜಾನ್ ಮೊಜಾರ್ಟ್ ಅವರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಹಾಡುಗಳಿಗೆ ಅಜಯ್, ವೇದಾಂತಿ, ಯಶಸ್ ಶುಕ್ರ ಸಾಹಿತ್ಯ ಬರೆಯುತ್ತಿದ್ದಾರೆ. ಕಾರ್ತಿಕ್, ಹರ್ಷಿತಾ ಮುಖ್ಯಭೂಮಿಕೆಯಲ್ಲಿದ್ದು, ಜಿ.ಕೆ. ಶಂಕರ್, ರಾಜಣ್ಣ, ಇಂದ್ರಜಿತ್, ಸಂಗೀತಾ, ಚಂದ್ರಕಲಾ ಭಟ್, ರಾಕೇಶ್, ಸಂಪತ್ ಶಾಸ್ತ್ರೀ, ಕಾವ್ಯಾ ಕೊಡಗು ಮುಂತಾದವರು ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾದ ಮೊದಲ ಕಥೆಯು ಮಾನವನ ಅಸ್ತಿತ್ವದ ಬಗ್ಗೆ, ಮನುಷ್ಯ ಸತ್ತ ಮೇಲೂ ಜೀವಂತವಾಗಿರುವ ಬಗ್ಗೆ ಇರಲಿದೆಯಂತೆ. ಅದನ್ನು ವಿಘ್ನೇಶ್ ನಿರ್ದೇಶನ ಮಾಡಲಿದ್ದಾರೆ. ಎರಡನೇ ಭಾಗದ ಕಥೆಯನ್ನು ಬಾಸುಮ ಕೊಡಗು ನಿರ್ದೇಶಿಸುತ್ತಿದ್ದು, ತಾಯಿ ಮಗುವಿನ ಸಂಬಂಧದ ಬಗ್ಗೆ ಕಥೆ ಇರಲಿದೆ. ಮೂರನೇ ಕಥೆಗೆ ಶಿವ ನಿರ್ದೇಶನವಿದ್ದು, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುವ ಹುಡುಗನೊಬ್ಬ ಹ್ಯಾಕರ್ ಆಗಿ ಬದಲಾಗುವ ಕಥೆ ಇರಲಿದೆಯಂತೆ!