ಶಿವರಾಮ ಕಾರಂತ ಬಡಾವಣೆ ವಿವಾದ: ನಿವೇಶನ ಕಳೆದುಕೊಂಡವರಿಗೆ ಬದಲಿ ನಿವೇಶನ

ಶಿವರಾಮ ಕಾರಂತ ಬಡಾವಣೆ ನಿರ್ಮಾಣದಲ್ಲಿ ನಿವೇಶನ ಹಾಗೂ ಭೂಮಿ ಕಳೆದುಕೊಂಡವರಿಗೆ ಭೂಸ್ವಾಧೀನ ಕಾಯಿದೆ 18ರ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಸಮಿತಿ ತಿಳಿಸಿದೆ. 2018ರ ನಂತರ ಕಟ್ಟಿದ ಮನೆಗಳನ್ನು ಸಕ್ರಮಗೊಳಿಸಲಾಗದು ಎಂದು ಸಮಿತಿ ತಿಳಿಸಿದೆ.

ಶಿವರಾಮ ಕಾರಂತ ಬಡಾವಣೆ ವಿವಾದ: ನಿವೇಶನ ಕಳೆದುಕೊಂಡವರಿಗೆ ಬದಲಿ ನಿವೇಶನ
Linkup
ಪೀಣ್ಯ ದಾಸರಹಳ್ಳಿ (): ನಿರ್ಮಾಣಕ್ಕಾಗಿ ಹಾಗೂ ಭೂಮಿ ಕಳೆದುಕೊಂಡ ಮಾಲೀಕರಲ್ಲಿದ್ದ ಗೊಂದಲಗಳಿಗೆ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್‌ ಸಮಿತಿ ತೆರೆ ಎಳೆಯುವ ಜತೆಗೆ ಉತ್ತಮ ಪರಿಹಾರ ಒದಗಿಸುವ ಭರವಸೆ ನೀಡಿದರು. ಡಾ. ಶಿವರಾಮ ಕಾರಂತ ಬಡಾವಣೆಯ ಅಧಿಸೂಚಿತ ಪ್ರದೇಶವನ್ನೊಳಗೊಂಡ 17 ಹಳ್ಳಿಗಳಲ್ಲಿನ 3,546 ಎಕರೆ 12 ಗುಂಟೆಯ ಆಸ್ತಿ ಮಾಲೀಕರಲ್ಲಿ ತಪ್ಪು ಮಾಹಿತಿ, ತಪ್ಪು ತಿಳುವಳಿಕೆ ಮತ್ತು ಗೊಂದಲ ನಿವಾರಿಸುವ ಬಗ್ಗೆ ಸೋಮಶಟ್ಟಿಹಳ್ಳಿಯಲ್ಲಿ ಮಂಗಳವಾರ ಜನ ಸಂಪರ್ಕ ಸಭೆ ಕರೆಯಲಾಗಿತ್ತು. ಶಿವರಾಮ ಕಾರಂತ ಬಡಾವಣೆ ನಿರ್ಮಾಣದಲ್ಲಿ ನಿವೇಶನ ಹಾಗೂ ಭೂಮಿ ಕಳೆದುಕೊಂಡವರಿಗೆ ಭೂಸ್ವಾಧೀನ ಕಾಯಿದೆ 18ರ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಸಮಿತಿ ತಿಳಿಸಿದೆ. ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಬಿಡಿಎ 3-8-2018ರಂದು ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನ ಕಟ್ಟಿದ ಮನೆಗಳನ್ನು ಗಣತಿ ನಡೆಸಿ ಸಕ್ರಮ ಎಂದು ವರದಿ ನೀಡಲಾಗಿದೆ. 'ಹಾಗೆಯೇ ಕೃಷಿ ಭೂಮಿ ಉಳ್ಳವರಿಗೆ ಬಿಡಿಎ ಎರಡು ಅವಕಾಶಗಳನ್ನು ನೀಡಲಿದೆ. 2008ರಲ್ಲಿನ ಮಾರುಕಟ್ಟೆ ಬೆಲೆ ಹಣ ಪಡೆಯಬಹುದು ಇಲ್ಲವೇ, ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ಅವರವರ ಜಮೀನಿಗೆ ಅನುಸಾರ ಶೇ.40ರಷ್ಟು ನಿವೇಶನಗಳನ್ನು ಪಡೆಯಬಹುದಾಗಿದೆ. ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಪಡೆದವರು ಮತ್ತು 2018ರ ನಂತರ ಕಟ್ಟಿದ ಮನೆಗಳನ್ನು ಸಕ್ರಮಗೊಳಿಸಲಾಗದು. ಮತ್ತು ಅಂತಹ ಮನೆಗಳನ್ನು ನೆಲಸಮ ಮಾಡುವಂತೆ ಸುಪ್ರೀಂ ಕೋರ್ಟ್‌ ಬಿಡಿಎಗೆ ಆದೇಶ ನೀಡಿದೆ. ಆದರೆ ರೆವೆನ್ಯೂ ಸೈಟ್‌ ಕಳೆದುಕೊಂಡವರಿಗೆ ನಿರ್ಮಾಣಗೊಳ್ಳುವ ಶಿವರಾಮ ಕಾರಂತ ಬಡಾವಣೆಯಲ್ಲಿ 30*40 ನಿವೇಶನ ಪಡೆಯಲು ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚುವರಿ ಹಣ ಕಟ್ಟುವ ಅವಶ್ಯಕತೆ ಇಲ್ಲ. ಕೇವಲ 500 ರೂ. ಶುಲ್ಕ ಕಟ್ಟಬೇಕು' ಎಂದು ನ್ಯಾಯಮೂರ್ತಿ ಚಂದ್ರಶೇಖರ್‌ ಸ್ಪಷ್ಟಪಡಿಸಿದರು. 2018ರ ನಂತರ ನಿರ್ಮಿಸಲಾದ ಮನೆಗಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ನಿವೇಶನ ಕಳೆದುಕೊಂಡವರಿಗೆ ನಿವೇಶನ ಸಿಗಲಿದೆ. ಸಂತ್ರಸ್ತರಿಗೆ ಪರಿಹಾರ ಕಡಿಮೆ ಎಂಬ ಪ್ರಶ್ನೆ ಎದುರಾದರೆ ನ್ಯಾಯಾಲಯಕ್ಕೆ ಅರ್ಜಿ ಹಾಕಬಹುದು. ನಿವೇಶನ ಕಳೆದುಕೊಂಡವರು ಸಮಿತಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 9 ಕಡೆಯ ದಿನವಾಗಿದೆ. 2018ರ ಹಿಂದೆ ಸುಮಾರು 5 ರಿಂದ 6 ಸಾವಿರ ಮನೆಗಳು ನಿರ್ಮಾಣಗೊಂಡಿದ್ದು, ಈ ಪೈಕಿ ಇದುವರೆಗೆ 5 ಸಾವಿರ ಅರ್ಜಿಗಳು ಮಾತ್ರ ಬಂದಿದ್ದು, ಇನ್ನೂ ಒಂದು ಸಾವಿರ ಅರ್ಜಿಗಳು ಬರಬೇಕಿದೆ. ದಯಮಾಡಿ ಎಲ್ಲರೂ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು. ಭೂಸ್ವಾಧೀನಕ್ಕೊಳಗಾಗುವ ಪ್ರದೇಶಗಳನ್ನು ಬಿಟ್ಟು ಬೇರೆ ಪ್ರದೇಶಗಳಲ್ಲಿ ಮನೆ ಕಟ್ಟುವವರಿಗೂ ಬೆಸ್ಕಾಂನವರು ವಿದ್ಯುತ್‌ ಸಂಪರ್ಕ ಕೊಡುತ್ತಿಲ್ಲ. ಈ ಬಗ್ಗೆ ಬೆಸ್ಕಾಂನವರಿಗೆ ಸೂಕ್ತ ಸೂಚನೆ ನೀಡಬೇಕೆಂದು ನಾಗರಿಕರೊಬ್ಬರ ಮನವಿಗೆ ಸ್ಪಂದಿಸಿದ ನ್ಯಾಯಮೂರ್ತಿ ಚಂದ್ರಶೇಖರ್‌, ಬಿಡಿಎ ಕಾರ್ಯದರ್ಶಿ ಆನಂದ್‌ ಅವರನ್ನು ಕರೆದು ಸಾರ್ವಜನಿಕವಾಗಿಯೇ ಈ ಬಗ್ಗೆ ತಕ್ಷಣ ಆದೇಶ ಹೊರಡಿಸಿ, ಬೆಸ್ಕಾಂಗೆ ಸೂಚನೆ ನೀಡಬೇಕೆಂದು ತಿಳಿಸಿದರು.