ಜಾತಿಗಣತಿ ವರದಿ: ಯಾವುದೇ ದುರುದ್ದೇಶದಿಂದ ಸಮೀಕ್ಷೆ ನಡೆಸಿಲ್ಲ; ಸಿದ್ದರಾಮಯ್ಯ

ಜಾತಿಗಣತಿ ಸಮೀಕ್ಷೆ ವೈಜ್ಞಾನಿಕವಾಗಿಲ್ಲ, ಪಾರದರ್ಶಕವಾಗಿಲ್ಲ ಮತ್ತು ಸಮಗ್ರವಾಗಿಲ್ಲ ಎಂದು ವೀರಶೈವ ಮಹಾಸಭಾ ಅಭಿಪ್ರಾಯ ಪಟ್ಟಿದ್ದು ಈ ಕುರಿಗಾಗಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜನಗಣತಿ ಇನ್ನು ಹೊರಗಡೆ ಬಂದಿಲ್ಲ. ಎಲ್ಲಾದರೂ ಬಿಡುಗಡೆ ಆಗಿದೆಯಾ?ನಿಮಗೇನಾದ್ರೂ ಗೊತ್ತಾ? ನನಗೆ ಗೊತ್ತಿರುವ ಪ್ರಕಾರ ಜಾತಿ ಜನಗಣತಿ ಸೋರಿಕೆ ಆಗಿಲ್ಲ ಎಂದಿದ್ದಾರೆ.

ಜಾತಿಗಣತಿ ವರದಿ: ಯಾವುದೇ ದುರುದ್ದೇಶದಿಂದ ಸಮೀಕ್ಷೆ ನಡೆಸಿಲ್ಲ; ಸಿದ್ದರಾಮಯ್ಯ
Linkup
ಬೆಂಗಳೂರು: ಜಾತಿಗಣತಿ ಸಮೀಕ್ಷೆಯ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಜಾತಿ ಜನಗಣತಿಗೆ ವೀರಶೈವ ಲಿಂಗಾಯತ ಸಮಯದಾಯದ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಜಾತಿ ಜನಗಣತಿ ಇನ್ನು ಹೊರಗಡೆ ಬಂದಿಲ್ಲ. ಎಲ್ಲಾದರೂ ಬಿಡುಗಡೆ ಆಗಿದೆಯಾ?ನಿಮಗೇನಾದ್ರೂ ಗೊತ್ತಾ? ಎಂದು ಪ್ರಶ್ನಿಸಿದರು. ಜಾತಿ ಗಣತಿ ವರದಿ ಸೋರಿಕೆ ಆಗಿಲ್ಲ, ಅದರಲ್ಲಿ ಏನಿದೆ ಎನ್ನುವುದೇ ಗೊತ್ತಿಲ್ಲ. ಅವರಿಗೇನಾದ್ರೂ ಗೊತ್ತಾಗಿದೆಯಾ? ನನಗೆ ಗೊತ್ತಿರುವ ಪ್ರಕಾರ ಜಾತಿ ಜನಗಣತಿ ಸೋರಿಕೆ ಆಗಿಲ್ಲ ಎಂದರು. ನಮ್ಮ ಕಾಲದಲ್ಲಿ ವರದಿ ತಯಾರಾಗಿರಲಿಲ್ಲ. ವರದಿ ತಯಾರಾಗಿದ್ದಲ್ಲಿ ನಾನು ಸ್ವೀಕಾರ ಮಾಡುತ್ತಿದ್ದೆ. ಇದುವರೆಗೆ ವರದಿಯೇ ಸ್ವೀಕಾರವಾಗಿಲ್ಲ. ಎಲ್ಲ ಜಾತಿಗಳ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿ ಏನು ಎನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಮಾಡಲಾಗಿದೆ. ಸಾಮಾಜಿಕ ನ್ಯಾಯ ಸಿಗಬೇಕಾದರೆ ದಾಖಲಾತಿಯ ಅಗತ್ಯವಿದೆ, ದಾಖಲಾತಿ ಇಲ್ಲದೆ ಸಾಮಾಜಿಕ ನ್ಯಾಯ ನೀಡಲು ಅಸಾಧ್ಯ. ಆ ಉದ್ದೇಶದಿಂದ ಸಮೀಕ್ಷೆ ಮಾಡಲಾಗಿದೆ ಎಂದರು. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಯಾವ ಜಾತಿ, ಯಾವ ವರ್ಗದ ವಿರುದ್ಧವೂ ನಾವಿಲ್ಲ. ಹೈಕಮಾಂಡ್ ಒಂದು ಸಮಿತಿ ಮಾಡಿದ್ದಾರೆ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಆಗಿದೆ. ಅವರು ಅಧ್ಯಯನ ಮಾಡಿ ವರದಿ ಕೊಡಲಿ ಎಂದರು. ಇಡೀ ದೇಶದಲ್ಲಿ ಕರ್ನಾಟಕ ಜಾತಿ ಸಮೀಕ್ಷೆ ಮಾಡಿದೆ. ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರ ಸ್ವಾಮಿ ವರದಿ ಸ್ವೀಕಾರ ಮಾಡಲು ಒಪ್ಪಿಲ್ಲ. ಈವಾಗಲೂ ಹಾಗೇ ಇದೆ ಎಂದ‌ ಅವರು, ಸದನದಲ್ಲಿ ವರದಿ ಪ್ರಸ್ತಾಪ ಮಾಡ್ತೀರಾ ಎಂಬ ಪ್ರಶ್ನೆಗೆ ಆಮೇಲೆ ಹೇಳ್ತೀನಿ ಎಂದರು. ಜಾತಿಗಣತಿ ಸಮೀಕ್ಷೆ ವೈಜ್ಞಾನಿಕವಾಗಿಲ್ಲ, ಪಾರದರ್ಶಕವಾಗಿಲ್ಲ ಮತ್ತು ಸಮಗ್ರವಾಗಿಲ್ಲ ಎಂದು ವೀರಶೈವ ಮಹಾಸಭಾ ಅಭಿಪ್ರಾಯಪಟ್ಟಿದೆ. ಅಲ್ಲದೆ ಈ ವರದಿ ಸೋರಿಕೆಯಾಗಿದೆ ಎಂದೂ ಹೇಳಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.