ಶ್ರೀರಾಮನಿಲ್ಲದ ಅಯೋಧ್ಯೆ ಏನೂ ಅಲ್ಲ: ರಾಷ್ಟ್ರಪತಿ ರಾಮನಾಥ್ ಕೋವಿಂದ್

ಶ್ರೀರಾಮ ಇರುವಲ್ಲಿ ಅಯೋಧ್ಯಾ ಇರುತ್ತದೆ. ರಾಮ ಇಲ್ಲದ ಅಯೋಧ್ಯಾ ಅಯೋಧ್ಯೆಯೇ ಅಲ್ಲ. ಶ್ರೀರಾಮ ಇಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಹೀಗಾಗಿ ಈ ಪ್ರದೇಶವು ಅಯೋಧ್ಯಾವಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಶ್ರೀರಾಮನಿಲ್ಲದ ಅಯೋಧ್ಯೆ ಏನೂ ಅಲ್ಲ: ರಾಷ್ಟ್ರಪತಿ ರಾಮನಾಥ್ ಕೋವಿಂದ್
Linkup
ಲಕ್ನೋ: ಇಲ್ಲದ ಅಯೋಧ್ಯೆ ಏನೂ ಅಲ್ಲ ಎಂದು ರಾಷ್ಟ್ರಪತಿ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ ಹಂತದಲ್ಲಿರುವ ಅಯೋಧ್ಯಾಕ್ಕೆ ಭಾನುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು. 'ರಾಮ ಇಲ್ಲದೆ, ಅಯೋಧ್ಯಾವೇ ಅಲ್ಲ. ರಾಮ ಇರುವಲ್ಲಿ ಅಯೋಧ್ಯೆಯ ಅಸ್ತಿತ್ವ ಇರುತ್ತದೆ. ರಾಮ ದೇವ ಈ ನಗರದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾನೆ. ಹೀಗಾಗಿ ನಿಜಾರ್ಥದಲ್ಲಿ ಈ ಪ್ರದೇಶವು ಅಯೋಧ್ಯೆಯಾಗಿದೆ' ಎಂದು ಸಮಾವೇಶ ಉದ್ಘಾಟಿಸಿದ ಬಳಿಕ ಕೋವಿಂದ್ ಹೇಳಿದರು. ತಮ್ಮ ಹೆಸರಿನಲ್ಲಿ 'ರಾಮ' ಪದವನ್ನು ಉಲ್ಲೇಖಿಸಿದ ಅವರು, 'ಈ ಹೆಸರನ್ನು ನನ್ನ ಕುಟುಂಬದವರು ನನಗೆ ಇರಿಸುವಾಗ, ರಾಮಕಥೆ ಹಾಗೂ ಶ್ರೀರಾಮನ ಮೇಲಿನ ಅಪಾರ ಗೌರವ ಹಾಗೂ ಒಲವಿನ ಭಾವನೆ ಹೊಂದಿದ್ದರು ಎಂದು ನನಗೆ ಅನಿಸುತ್ತದೆ. ಇದು ಜನರಲ್ಲಿ ಸಾಮಾನ್ಯವಾಗಿ ಇರುವ ವಿಚಾರ' ಎಂದರು. 'ಅಯೋಧ್ಯಾ ಎನ್ನುವುದರ ವಾಸ್ತವ ಅರ್ಥ, ಅವರ ವಿರುದ್ಧ ಯುದ್ಧವನ್ನೇ ಮಾಡಲು ಆಗುವುದಿಲ್ಲ ಎಂದು. ರಘುವಂಶದ ರಾಜರಾದ ರಘು, ದಿಲೀಪ, ಅಜ, ದಶರಥ ಮತ್ತು ರಾಮ ಅವರ ಧೈರ್ಯ ಹಾಗೂ ಶಕ್ತಿಯಿಂದಾಗಿ ಅವರ ರಾಜಧಾನಿಯನ್ನು ಆಕ್ರಮಣ ಮಾಡಲಾಗದಂತಹದ್ದು ಎಂದೇ ಪರಿಗಣಿಸಲಾಗಿತ್ತು. ಹೀಗಾಗಿ ಈ ನಗರದ ಹೆಸರಾದ 'ಅಯೋಧ್ಯಾ' ಎನ್ನುವುದು ಎಂದೆಂದಿಗೂ ಪ್ರಸ್ತುತವಾಗಿರುತ್ತದೆ' ಎಂದು ಬಣ್ಣಿಸಿದರು. ಬುಡಕಟ್ಟುಗಳೆಡೆಗಿನ ರಾಮನ ಪ್ರೀತಿಯನ್ನು ವರ್ಣಿಸಿದ ಅವರು, 'ರಾಮ ತನ್ನ ವನವಾಸದ ಸಂದರ್ಭದಲ್ಲಿ ಅಯೋಧ್ಯಾ ಮತ್ತು ಮಿಥಿಲಾದ ಸೇನೆಗಳನ್ನು ಯುದ್ಧಕ್ಕೆ ಕರೆಯಲಿಲ್ಲ. ಬದಲಾಗಿ ಕೋಲ, ಭಿಲ್ಲರು, ವಾನರಗಳನ್ನು ಸೇರಿಸಿ ತನ್ನ ಸೇನೆ ರಚಿಸಿದ. ಬುಡಕಟ್ಟುಗಳೊಂದಿಗಿನ ತನ್ನ ಪ್ರೀತಿ ಮತ್ತು ಗೆಳೆತನವನ್ನು ಬಲಪಡಿಸಿದ್ದ' ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಕೋವಿಂದ್ ಅವರು ರಾಮಾಯಣ ಸಮಾವೇಶದ ಅಂಚೆ ಪತ್ರವನ್ನು ಬಿಡುಗಡೆ ಮಾಡಿದರು.