‘ಶಬರಿ: ಸರ್ಚಿಂಗ್ ಫಾರ್ ರಾವಣ’ ಚಿತ್ರದಲ್ಲಿ ಡಬಲ್ ಶೇಡ್‌ನಲ್ಲಿ ರಚಿತಾ ರಾಮ್

ನಟಿ ರಚಿತಾ ರಾಮ್‌ ‘ಶಬರಿ’ ಚಿತ್ರದಲ್ಲಿ ಡಬಲ್‌ ಶೇಡ್‌ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡಿಗ್ಲ್ಯಾಮ್‌ ಪಾತ್ರದೊಂದಿಗೆ ತದ್ವಿರುದ್ಧವಾಗಿ ಎರಡು ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಶಬರಿ: ಸರ್ಚಿಂಗ್ ಫಾರ್ ರಾವಣ’ ಚಿತ್ರದಲ್ಲಿ ಡಬಲ್ ಶೇಡ್‌ನಲ್ಲಿ ರಚಿತಾ ರಾಮ್
Linkup
ನಟಿ ರಚಿತಾ ರಾಮ್‌ ‘’ ಚಿತ್ರದಲ್ಲಿ ಡಬಲ್‌ ಶೇಡ್‌ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡಿಗ್ಲ್ಯಾಮ್‌ ಪಾತ್ರದೊಂದಿಗೆ ತದ್ವಿರುದ್ಧವಾಗಿ ಎರಡು ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ರಚಿತಾ ರಾಮ್‌ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ನಡುವೆ ಅವರು ಅಪರೂಪದ, ಡಿಗ್ಲ್ಯಾಮ್‌ ಪಾತ್ರಗಳನ್ನೂ ಆರಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಉದಾಹರಣೆ ಇತ್ತೀಚೆಗೆ ರಿಲೀಸ್‌ ಆದ ‘ಶಬರಿ’ ಚಿತ್ರದ ಲುಕ್‌. ‘ಶಬರಿ’ ಚಿತ್ರದ ಟೈಟಲ್‌ಗೆ ‘ಸರ್ಚಿಂಗ್‌ ಫಾರ್‌ ರಾವಣ’ ಎಂಬ ಟ್ಯಾಗ್‌ಲೈನ್‌ ಕೊಡಲಾಗಿದೆ. ಈ ಹಿಂದೆ ಈ ಚಿತ್ರದಲ್ಲಿನ ರಚಿತಾರ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಸಿಂಪಲ್‌ ಆಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಹುಟ್ಟುಹಬ್ಬದಂದು ಮತ್ತೊಂದು ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ಇದರಲ್ಲಿ ಮೊದಲಿನ ಪೋಸ್ಟರ್‌ಗೆ ತದ್ವಿರುದ್ಧವಾದ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನವೀನ್‌ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದು ರಚಿತಾ ರಾಮ್ ನಟನೆಯ 36ನೇ ಸಿನಿಮಾ ಎನ್ನುವುದು ವಿಶೇಷ. ‘ನಾನು ಇದುವರೆಗೆ ನನ್ನ ಸಿನಿಮಾಗಳ ಲೆಕ್ಕ ಇಟ್ಟಿಲ್ಲ. ಅಭಿಮಾನಿಗಳು ಲಿಸ್ಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದಾಗಲೇ ನನಗೆ ಗೊತ್ತಾಗಿದ್ದು. 36 ಸಿನಿಮಾಗಳಲ್ಲಿ ನಟಿಸಿದ್ದೇನೆ ಎನ್ನುವುದು ನನಗೂ ಆಶ್ಚರ್ಯವನ್ನು ಉಂಟು ಮಾಡಿತು’ ಎಂದಿದ್ದಾರೆ ರಚಿತಾ ರಾಮ್. ಅವರ ಲಕ್ಕಿ ನಂಬರ್‌ ‘9’ ಅಂತೆ. ಈ ಚಿತ್ರಕ್ಕಾಗಿ ಶಾರ್ಟ್‌ ಹೇರ್‌ಸ್ಟೈಲ್‌ನಲ್ಲಿ ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಈ ಹಿಂದೆ ನಾನು ಮಾಡಿರುವ ಪಾತ್ರಗಳೆಲ್ಲಕ್ಕಿಂತ ಇದು ಭಿನ್ನವಾದ ಪಾತ್ರ. ಇದಕ್ಕಾಗಿ ನಾನು ದಿನದಲ್ಲಿ12 ಗಂಟೆಗಳನ್ನು ಮೀಸಲಿಡಬೇಕಾಗಿದೆ’ ಎಂದಿದ್ದಾರೆ ಅವರು. ರಚಿತಾ ಶಾರ್ಟ್‌ ಹೇರ್‌ಗಾಗಿ ತಮ್ಮ ಕೂದಲನ್ನು ಕತ್ತರಿಸಿಕೊಂಡಿಲ್ಲ. ವಿಗ್‌ ಬಳಸಿ ಶೂಟ್‌ ಮಾಡಲಾಗುತ್ತಿದೆ. ‘ಹೇರ್‌ ಸ್ಟೈಲಿಸ್ಟ್‌ ನನ್ನ ಕೂದಲನ್ನೇ ಹೋಲುವ ವಿಗ್‌ ವ್ಯವಸ್ಥೆ ಮಾಡಿದ್ದರಿಂದ ನನ್ನ ಕೂದಲನ್ನು ಕತ್ತರಿಸಬೇಕಾಗಲಿಲ್ಲ. ವಿಗ್‌ ತುಂಬಾ ನೈಜವಾಗಿದೆ’ ಎಂದಿದ್ದಾರೆ ರಚಿತಾ. ‘ಶಬರಿ’ ಮಹಿಳಾ ಪ್ರಧಾನ ಚಿತ್ರ. ಡಿಗ್ಲ್ಯಾಮರಸ್‌ ಆಗಿ ರಚಿತಾ ಕಾಣಿಸಿಕೊಳ್ಳಲಿದ್ದಾರೆ. ‘ಬೇರೆಯವರೆಲ್ಲ ಡಿಗ್ಲ್ಯಾಮ್‌ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ನಾನೂ ರಿಸ್ಕ್‌ ತಗೊಂಡು ಈ ಪಾತ್ರ ಒಪ್ಪಿಕೊಂಡೆ. ಪೂರ್ಣ ಬೇರೆ ರೀತಿ ಕಾಣಿಸಿಕೊಳ್ಳಲಿದ್ದೇನೆ’ ಎಂದಿದ್ದಾರೆ. ರಚಿತಾ ‘ಮಾನ್ಸೂನ್‌ ರಾಗ’ ಸಿನಿಮಾದಲ್ಲೂ ಚಾಲೆಂಜಿಂಗ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧನಂಜಯ್‌ ಈ ಚಿತ್ರದ ನಾಯಕ. ಸದ್ಯ ರಚಿತಾ ರಾಮ್ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳಿವೆ. 'ದುನಿಯಾ' ಸೂರಿ ನಿರ್ದೇಶನದ 'ಬ್ಯಾಡ್‌ ಮ್ಯಾನರ್ಸ್‌', ಅಜಯ್ ರಾವ್ ಜೊತೆ 'ಲವ್ ಯೂ ರಚ್ಚು', ಪ್ರಜ್ವಲ್ ದೇವರಾಜ್‌ ಜೊತೆ 'ವೀರಂ' ಚಿತ್ರಗಳನ್ನು ರಚಿತಾ ಒಪ್ಪಿಕೊಂಡಿದ್ದಾರೆ. ಧನಂಜಯ, ಡಾರ್ಲಿಂಗ್ ಕೃಷ್ಣ ಜೊತೆಗೂ ಒಂದೊಂದು ಸಿನಿಮಾಗಳನ್ನು ರಚಿತಾ ಮಾಡುತ್ತಿದ್ದಾರೆ. ಈ ಮಧ್ಯೆ ಅವರ ನಟನೆಯ 100, ಏಕ್ ಲವ್ ಯಾ, ತೆಲುಗಿನ ಸೂಪರ್ ಮಚ್ಚಿ ಸಿನಿಮಾಗಳು ತೆರೆಗೆ ಬರಬೇಕಿವೆ.