ವಿದೇಶಕ್ಕೆ ಪ್ರಯಾಣಿಸುವವರ ಅನುಕೂಲಕ್ಕಾಗಿ ಹೊಸ ಲಸಿಕೆ ನೀತಿ ತಂದ ಕೇರಳ ಸರ್ಕಾರ

ವಿದೇಶಕ್ಕೆ ಪ್ರಯಾಣಿಸುವ ಜನರ ಅನುಕೂಲತೆಗಾಗಿ ಅವರ ಪಾಸ್‌ಪೋರ್ಟ್ ಸಂಖ್ಯೆಯ ಸಹಿತ ಲಸಿಕೆ ಪ್ರಮಾಣಪತ್ರ ವಿತರಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಅದಕ್ಕೆ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ.

ವಿದೇಶಕ್ಕೆ ಪ್ರಯಾಣಿಸುವವರ ಅನುಕೂಲಕ್ಕಾಗಿ ಹೊಸ ಲಸಿಕೆ ನೀತಿ ತಂದ ಕೇರಳ ಸರ್ಕಾರ
Linkup
ತಿರುವನಂತಪುರಂ: ವಿದೇಶಗಳಿಗೆ ತೆರಳುವ ಜನರಿಗೆ ಅವರ ಪಾಸ್‌ಪೋರ್ಟ್ ಸಂಖ್ಯೆಯ ಸಹಿತ ಕೋವಿಡ್ 19 ಪ್ರಮಾಣಪತ್ರವನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಬಹುತೇಕ ದೇಶಗಳಲ್ಲಿ ಕೋವಿಡ್ ನೆಗೆಟಿವ್ ವರದಿಯ ಜತೆಗೆ ಲಸಿಕೆ ಪಡೆದ ಪ್ರಮಾಣಪತ್ರವೂ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾ ವೈದ್ಯಕೀಯ ಅಧಿಕಾರಿಗಳು ಈ ಪ್ರಮಾಣಪತ್ರಗಳಿಗೆ ಸಹಿ ಹಾಕುವ ಅಧಿಕಾರ ನೀಡಲಾಗಿದೆ. 'ವಿದೇಶಕ್ಕೆ ಪ್ರಯಾಣಿಸುವ ಹಾಗೂ ರಾಜ್ಯ ವಿತರಿಸುವ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಬಯಸುವ 18 ವರ್ಷ ಮೇಲಿನ ಲಸಿಕೆ ಅರ್ಹ ಫಲಾನುಭವಿಗಳಿಗೆ ಪಾಸ್‌ಪೋರ್ಟ್ ಸಂಖ್ಯೆ ಹಾಗೂ ಲಸಿಕೆ ಕಂಪೆನಿ ಹೆಸರಿನೊಂದಿಗೆ ನೀಡಲಾಗುವುದು' ಎಂದು ಕೇರಳ ಸರ್ಕಾರ ಶನಿವಾರ ತಿಳಿಸಿದೆ. 'ಈ ರೀತಿ ಸಲ್ಲಿಸಲಾದ ಅರ್ಜಿಗಳನ್ನು ಸಂಬಂಧಿತ ಜಿಲ್ಲಾ ವೈದ್ಯಾಧಿಕಾರಿ ಅಥವಾ ಡಿಎಂಒ ಹುದ್ದೆಯ ಅಧಿಕಾರಿಗಳು ಪರಿಶೀಲಿಸುತ್ತಾರೆ. ಬಳಿಕ ಅವುಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅನುಮೋದನೆಗೊಂಡ ಬಳಿಕ ಡಿಜಿಟಲ್ ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ. ಇದರ ಬಗ್ಗೆ ಫಲಾನುಭವಿಗೆ ಎಸ್‌ಎಂಎಸ್ ಮೂಲಕ ಖಾತರಿ ದೊರಕಲಿದೆ. ' ಮಾಡಲು ಬಯಸುವವರಿಗೆ ಲಸಿಕೆಯ ಎರಡನೆಯ ಡೋಸ್ ಅಂತರವನ್ನು ನಾಲ್ಕರಿಂದ ಆರು ವಾರಕ್ಕೆ ಇಳಿಸಲು ಕೂಡ ರಾಜ್ಯ ಸರ್ಕಾರ ನಿರ್ಧರಿಸಿದೆ. ತಕ್ಷಣದ ಪ್ರಯಾಣಕ್ಕೆ ಪೂರಕವಾದ ದಾಖಲೆಗಳೊಂದಿಗೆ ಇ-ಹೆಲ್ತ್ ಪೋರ್ಟಲ್ ಮೂಲಕ ಆದ್ಯತೆ ಮೇರೆ ಲಸಿಕೆ ಪಡೆಯಲು ಅರ್ಜಿ ಸಲ್ಲಿಸಬಹುದು' ಎಂದು ಸರ್ಕಾರ ತಿಳಿಸಿದೆ.