ಜೂನ್ 3ರಂದು ಮುಂಗಾರು ಪ್ರವೇಶ: ಕರ್ನಾಟಕ, ಕೇರಳದಲ್ಲಿ ಮುಂದಿನ ಕೆಲವು ದಿನ ಭಾರಿ ಮಳೆ ಸೂಚನೆ

ನೈಋತ್ಯ ಮುಂಗಾರು ಮಾರುತಗಳು ಎರಡು ದಿನ ತಡವಾಗಿ, ಜೂನ್ 3ರಂದು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಮುಂದುವರಿಯಲಿದೆ.

ಜೂನ್ 3ರಂದು ಮುಂಗಾರು ಪ್ರವೇಶ: ಕರ್ನಾಟಕ, ಕೇರಳದಲ್ಲಿ ಮುಂದಿನ ಕೆಲವು ದಿನ ಭಾರಿ ಮಳೆ ಸೂಚನೆ
Linkup
ಹೊಸದಿಲ್ಲಿ: ಬೇಸಿಗೆ ಅವಧಿ ಕಳೆದು ಅವಧಿಯ ಆಗಮನದ ಸಮಯವಾಗಿದೆ. ದೇಶದ ಅನೇಕ ಭಾಗಗಳಲ್ಲಿ ಈಗಾಗಲೇ ಚಂಡಮಾರುತದ ಪರಿಣಾಮ ಮಳೆಗಾಲದ ಅನುಭವವಾಗುತ್ತಿದೆ. ಇದರ ಬೆನ್ನಲ್ಲೇ ವಾರ್ಷಿಕ ಮುಂಗಾರು ಮಾರುತಗಳು ಭಾರತ ಉಪಖಂಡವನ್ನು ಪ್ರವೇಶಿಸಲು ಸಿದ್ಧವಾಗುತ್ತಿವೆ. ಜೂನ್ 1ರಂದೇ ಮುಂಗಾರು ಮಾರುತಗಳು ಪ್ರವೇಶಿಸುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಎರಡು ದಿನ ವಿಳಂಬವಾಗಿ ಆಗಮಿಸಲಿವೆ. ಹೀಗಾಗಿ ಜೂನ್ 3ರಂದು ಕೇರಳ ಕರಾವಳಿಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾನುವಾರ ತಿಳಿಸಿದೆ. 'ಇತ್ತೀಚಿನ ಹವಾಮಾನ ಸೂಚನೆಗಳ ಪ್ರಕಾರ, ನೈಋತ್ಯ ಮಾರುತಗಳು ಜೂನ್ 1ರ ಬಳಿಕ ಕ್ರಮೇಣ ಪ್ರಬಲವಾಗುವ ಸಾಧ್ಯತೆ ಇದೆ. ಇದರಿಂದ ಕೇರಳದಲ್ಲಿ ಚಟುವಟಿಕೆ ವೃದ್ಧಿಸಲಿದೆ. ಕೇರಳದಲ್ಲಿ ಮುಂಗಾರು ಜೂನ್ 3ರಂದು ಪ್ರಬಲವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ' ಎಂದು ಐಎಂಡಿ ಮಾಹಿತಿಯನ್ನು ಆಧರಿಸಿ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. ಕೇರಳ ಮತ್ತು ಮಾಹೆಯಲ್ಲಿ ಅಲ್ಲಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಮುಂದುವರೆಯಲಿದೆ. ಮುಂದಿನ ಐದು ದಿನಗಳವರೆಗೆ ತೀವ್ರ ಮಳೆ ಸುರಿಯಲಿದೆ. ಕರಾವಳಿ ಕರ್ನಾಟಕದಲ್ಲಿ ಜೂನ್ 1-3ರವರೆಗೆ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಜೂನ್ 2 ಮತ್ತು 3ರಂದು ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.