ಲಸಿಕೆ ಪಡೆಯದಿದ್ದರೆ 'ಎಣ್ಣೆ'ಯೂ ಇಲ್ಲ: ಮದ್ಯ ಖರೀದಿಗೆ ಲಸಿಕೆ ಪ್ರಮಾಣಪತ್ರ ಕಡ್ಡಾಯ!

ಮದ್ಯ ಖರೀದಿಗೆ ಬರುವವರು ಲಸಿಕೆ ಪಡೆದುಕೊಂಡಿರಬೇಕು ಎಂಬ ಸೂಚನಾ ಪತ್ರಗಳನ್ನು ಉತ್ತರ ಪ್ರದೇಶದ ಎಟಾವ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಂಟಿಸಲಾಗಿದೆ. ಎಡಿಎಂ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಲಸಿಕೆ ಪಡೆಯದಿದ್ದರೆ 'ಎಣ್ಣೆ'ಯೂ ಇಲ್ಲ: ಮದ್ಯ ಖರೀದಿಗೆ ಲಸಿಕೆ ಪ್ರಮಾಣಪತ್ರ ಕಡ್ಡಾಯ!
Linkup
ಎಟಾವ: ಪಡೆದ ಪ್ರಮಾಣಪತ್ರವಿಲ್ಲದೆ ಇದ್ದರೆ ನೀಡಲಾಗುವುದಿಲ್ಲ- ಹೀಗೊಂದು ಸೂಚನೆಗಳು ಉತ್ತರ ಪ್ರದೇಶದ ಎಟಾವ ಜಿಲ್ಲೆಯಲ್ಲಿ ಕಂಡುಬಂದಿವೆ. ಎಟಾವ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಹೇಮ್ ಕುಮಾರ್ ಸಿಂಗ್ ಅವರ ಸೂಚನೆಯಂತೆ ಈ ನೋಟಿಸ್‌ಗಳನ್ನು ಮದ್ಯದಂಗಡಿಗಳ ಮುಂಭಾಗದಲ್ಲಿ ಅಂಟಿಸಲಾಗಿದೆ. ಎಟಾವ ಜಿಲ್ಲೆಯ ಸೈಫಾಯಿ ಎಂಬಲ್ಲಿ ಈ ನೋಟಿಸ್‌ಗಳನ್ನು ಎಲ್ಲ ಮದ್ಯದಂಗಡಿಗಳಲ್ಲಿಯೂ ಅಳವಡಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಅಲಿಗಡದಲ್ಲಿ ಕಳಪೆ ಮದ್ಯ ಸೇವಿಸಿ ಕನಿಷ್ಠ 25 ಮಂದಿ ಜೀವ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಲಸಿಕೆ ಪಡೆದುಕೊಳ್ಳದ ಯಾರಿಗೂ ಮದ್ಯ ಮಾರಾಟ ಮಾಡುವುದಿಲ್ಲ ಮದ್ಯದಂಗಡಿಗಳ ಮುಂಭಾಗದಲ್ಲಿ ನೋಟಿಸ್‌ಗಳನ್ನು ಸ್ಪಷ್ಟವಾಗಿ ಅಂಟಿಸುವಂತೆ ಪರಿಶೀಲನೆ ಸಂದರ್ಭದಲ್ಲಿ ಎಡಿಎಂ ಹೇಮ್ ಕುಮಾರ್ ಸಿಂಗ್ ನಿರ್ದೇಶನ ನೀಡಿದ್ದರು. ಜನರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಳ್ಳಲು ಇದು ನೆರವಾಗುತ್ತಿದೆ ಎಂದು ಮದ್ಯದಂಗಡಿಗಳ ಉದ್ಯೋಗಿಗಳು ತಿಳಿಸಿದ್ದಾರೆ. ಆದರೆ ಲಸಿಕೆ ಪಡೆದುಕೊಳ್ಳದ ಜನರಿಗೆ ಮದ್ಯ ಮಾರಾಟವನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿಲ್ಲ ಎಂದು ಎಟಾವದ ಅಬಕಾರಿ ಅಧಿಕಾರಿ ಕಮಲ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.