ಭಾರತದಲ್ಲಿ ಲಸಿಕೆ ಪಡೆದ 26 ಸಾವಿರ ಜನರಲ್ಲಿ ಅಡ್ಡಪರಿಣಾಮ, 488 ಮಂದಿ ಸಾವು

ಜ. 16ರಿಂದ ಜೂನ್‌ 7ರವರೆಗೆ ದೇಶದಲ್ಲಿ 23.5 ಕೋಟಿ ಡೋಸ್‌ ಕೊರೊನಾ ಲಸಿಕೆ ನೀಡಲಾಗಿದ್ದು, ಈ ಪೈಕಿ 26,200 ಜನರಲ್ಲಿ ಅಡ್ಡಪರಿಣಾಮ ಕಾಣಿಸಿಕೊಂಡಿವೆ. ಲಸಿಕೆ ನಂತರದ ಅಡ್ಡಪರಿಣಾಮಗಳಿಂದ 488 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಭಾರತದಲ್ಲಿ ಲಸಿಕೆ ಪಡೆದ 26 ಸಾವಿರ ಜನರಲ್ಲಿ ಅಡ್ಡಪರಿಣಾಮ, 488 ಮಂದಿ ಸಾವು
Linkup
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ನಿರೋಧಕ ಲಸಿಕೆ ಪಡೆದವರ ಪೈಕಿ ಅತ್ಯಲ್ಪ ಪ್ರಮಾಣದ ಜನರಲ್ಲಿ ಅಡ್ಡಪರಿಣಾಮಗಳು ಕಂಡುಬಂದಿದ್ದು, ದೇಸಿ ಲಸಿಕೆಗಳು ಸಂಪೂರ್ಣ ಸುರಕ್ಷಿತ ಎನ್ನುವುದು ಸಾಬೀತಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಜನವರಿ 16ರಿಂದ ಜೂನ್‌ 7ರವರೆಗೆ ದೇಶದಲ್ಲಿ 23.5 ಕೋಟಿ ಡೋಸ್‌ ಕೊರೊನಾ ನಿರೋಧಕ ಲಸಿಕೆ ನೀಡಲಾಗಿದೆ. ಅ ಪೈಕಿ 26,200 ಜನರಲ್ಲಿ ಅಡ್ಡಪರಿಣಾಮ ಕಾಣಿಸಿಕೊಂಡಿದ್ದು (ಶೇ.0.01), ಲಸಿಕೆ ನಂತರದ ಅಡ್ಡಪರಿಣಾಮಗಳಿಂದ 488 ಮಂದಿ (ಶೇ.0.000020) ಮೃತಪಟ್ಟಿದ್ದಾರೆ. ಈ ಪ್ರಮಾಣ ನಗಣ್ಯ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಲಸಿಕೆ ಅಡ್ಡಪರಿಣಾಮಗಳಿಂದ ಮೃತಪಟ್ಟವರಲ್ಲಿ ಜಮ್ಮು-ಕಾಶ್ಮೀರದ ಕಠುವಾದಲ್ಲಿನ 27 ವರ್ಷದ ಯುವಕ ಅತ್ಯಂತ ಕಿರಿಯನಾಗಿದ್ದರೆ, ಕರ್ನಾಟಕದ ಕೋಲಾರದ 97 ವರ್ಷದ ವೃದ್ಧ ಅತ್ಯಂತ ಹಿರಿಯರಾಗಿದ್ದಾರೆ. ಮೃತರಲ್ಲಿ 301 ಪುರುಷರು ಹಾಗೂ 178 ಮಹಿಳೆಯರಿದ್ದಾರೆ. ಲಸಿಕೆ ಪಡೆದ ಬಳಿಕ ನೋವು, ವಾಂತಿ, ಜ್ವರ ಸಾಮಾನ್ಯವಾಗಿದೆ. ಅಡ್ಡಪರಿಣಾಮದ ಅತ್ಯಂತ ಗಂಭೀರ ಪ್ರಕರಣಗಳಲ್ಲಿ ರಕ್ತವಾಂತಿ, ಏಕಾಏಕಿ ಪ್ರಜ್ಞೆ ತಪ್ಪುವುದು, ಎದೆ ನೋವು, ಉಸಿರಾಟದ ತೊಂದರೆಗಳು ಕಾಣಿಸಿಕೊಂಡಿವೆ.

ಅಡ್ಡ ಪರಿಣಾಮ ಯಾರಲ್ಲಿ, ಎಷ್ಟು? 24,703 (94%) - ಸೀರಂ ಇನ್ಸ್‌ಟಿಟ್ಯೂಟ್‌ನ ಕೋವಿಶೀಲ್ಡ್‌ ಪಡೆದವರು 1,497 (6%) - ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಪಡೆದವರು ಭಾರತದಲ್ಲಿ ಜ.16ರಿಂದ ಜೂ.7ರವರೆಗೆ 21 ಕೋಟಿ ಡೋಸ್‌ ಕೋವಿಶೀಲ್ಡ್‌, 2.3 ಕೋಟಿ ಡೋಸ್‌ ಕೊವ್ಯಾಕ್ಸಿನ್‌ ಲಸಿಕೆ ನೀಡಲಾಗಿದೆ ಅಡ್ಡಪರಿಣಾಮದ ಸ್ವರೂಪ ಹೇಗೆ? 24,901 (95%) ಜನರಲ್ಲಿಅತ್ಯಲ್ಪ ಪ್ರಮಾಣದ ತೊಂದರೆ 412 (2%) ಜನರಲ್ಲಿ ಗಂಭೀರ ಸ್ವರೂಪದ ತೊಂದರೆ 887 (3.39%) ಜನರಲ್ಲಿಅತ್ಯಂತ ಗಂಭೀರ ಸ್ವರೂಪದ ತೊಂದರೆ 2,318 (8.85%) - ಜನರು ಲಸಿಕೆ ಪಡೆದ ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಯಾರಲ್ಲಿ ಎಷ್ಟು ಸಾವು? 457 ಜನ ಕೋವಿಶೀಲ್ಡ್‌ ಪಡೆದಿದ್ದರು 20 ಜನ ಕೊವ್ಯಾಕ್ಸಿನ್‌ ಪಡೆದಿದ್ದರು 11 ಜನರ ಕುರಿತು ಮಾಹಿತಿ ಲಭ್ಯವಾಗಿಲ್ಲ