ವೀಕೆಂಡ್ ಕರ್ಫ್ಯೂಗೆ ಮುನ್ನವೇ ಬೆಂಗಳೂರನ್ನು ಲಾಕ್‌ಡೌನ್‌ ಮಾಡಿದ ಭರ್ಜರಿ ಮಳೆ, ಬಿರುಗಾಳಿ!

ಬೆಂಗಳೂರು ನಗರದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಗುಡುಗು ಸಹಿತ ಮಳೆ ಒಂದು ಗಂಟೆಗೂ ಹೆಚ್ಚು ಕಾಲದಿಂದ ಸುರಿಯುತ್ತಲೇ ಇದೆ. ಮಳೆಯಿಂದಕೆಲವೆಡೆ ರಸ್ತೆಯಲ್ಲಿ ಮೊಣಕಾಲೆತ್ತರ ನೀರು ನಿಂತಿದ್ದು, ವಾಹನ ಸಂಚಾರ ದುಸ್ತರವಾಗಿದೆ.

ವೀಕೆಂಡ್ ಕರ್ಫ್ಯೂಗೆ ಮುನ್ನವೇ ಬೆಂಗಳೂರನ್ನು ಲಾಕ್‌ಡೌನ್‌ ಮಾಡಿದ ಭರ್ಜರಿ ಮಳೆ, ಬಿರುಗಾಳಿ!
Linkup
ಬೆಂಗಳೂರು: ಕಳೆದ ಹಲವು ದಿನಗಳಿಂದ ನಗರದಲ್ಲಿ ಸಂಜೆ ವೇಳೆ ಸುರಿಯುತ್ತಿರುವ ಅಕಾಲಿಕ ಮಳೆ ಶುಕ್ರವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಗುಡುಗು ಸಹಿತ ಮಳೆ ಒಂದು ಗಂಟೆಗೂ ಹೆಚ್ಚು ಕಾಲದಿಂದ ಸುರಿಯುತ್ತಲೇ ಇದೆ. ಹಲವೆಡೆ ಆಲಿಕಲ್ಲು ಕೂಡ ಬಿದ್ದಿದ್ದು, ಭಾರಿ ಗಾಳಿಯೂ ಮಳೆಗೆ ಸಾಥ್‌ ನೀಡಿತ್ತು. ಬೆಂಗಳೂರಿನ ಹೆಮ್ಮಿಗೆ ಪುರ, ಕೆಂಗೇರಿ, ಮಾರುತಿ ಮಂದಿರ, ನಾಗರಬಾವಿ, ಹಾರೋಹಳ್ಳಿ, ಹೆಗ್ಗನಹಳ್ಳಿ, ಅಗ್ರಹಾರ ಸುತ್ತಮುತ್ತ ಮಧ್ಯಮ ಸ್ವರೂಪದ ಮಳೆ ಹಾಗೂ ಉಳಿದೆಡೆ ಮಿಂಚಿನೊಂದಿಗೆ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ ಎಂದು ರಾಜ್ಯ ವಿಕೋಪ ನಿಯಂತ್ರಣ ಕೇಂದ್ರ ಟ್ಟೀಟ್‌ ಮಾಡಿತ್ತು. ಆದರೆ ಹೆಚ್ಚು ಕಡಿಮೆ ಬೆಂಗಳೂರಿನಲ್ಲಿ ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಅಲ್ಲಲ್ಲಿ ಮರ, ಕರೆಂಟ್‌ ಕಂಬ ಬಿದ್ದ ವರದಿಗಳು ಬರುತ್ತಿವೆ. ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲೂ ಮಳೆ ಇತ್ತ ಶುಕ್ರವಾರ ಸಂಜೆ ರಾಜ್ಯದ ಮಲೆನಾಡು ಮತ್ತ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಕೆಲವೆಡೆ ಚದುರಿದಂತೆ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಕೋಪ ಕೇಂದ್ರ ಮುನ್ಸೂಚನೆ ನೀಡಿದೆ.