'ಲೆಟ್ಸ್ ಬ್ರೇಕಪ್' ಎಂದ ನಟ ಶ್ರೀ ಮಹದೇವ್ ಹಾಗೂ 'ಲವ್ ಮಾಕ್ಟೇಲ್' ಸಿನಿಮಾ ನಟಿ ರಚನಾ ಇಂದರ್!

ಕಳೆದ ವರ್ಷ ಸದ್ದು ಮಾಡಿದ್ದ 'ಲೆಟ್ಸ್‌ ಬ್ರೇಕಪ್‌' ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ನಾಯಕ, ನಾಯಕಿಯ ಆಯ್ಕೆಯಾಗಿದೆ. ಸಿನಿಮಾ ಬಗ್ಗೆ ನಿರ್ದೇಶಕ ಮತ್ತು ನಾಯಕ ನಟ ಇಬ್ಬರೂ 'ಲವಲವಿ'ಕೆ ಜತೆ ಮಾತನಾಡಿದ್ದಾರೆ.

'ಲೆಟ್ಸ್ ಬ್ರೇಕಪ್' ಎಂದ ನಟ ಶ್ರೀ ಮಹದೇವ್ ಹಾಗೂ 'ಲವ್ ಮಾಕ್ಟೇಲ್' ಸಿನಿಮಾ ನಟಿ ರಚನಾ ಇಂದರ್!
Linkup
(ಹರೀಶ್‌ ಬಸವರಾಜ್‌) 'ಬ್ರಹ್ಮ ವಿಷ್ಣು ಮಹೇಶ್ವರ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಯುವ ನಿರ್ದೇಶಕ ಸ್ವರೂಪ್‌ ಈಗ 'ಲೆಟ್ಸ್‌ ಬ್ರೇಕಪ್‌' ಎನ್ನುತ್ತಿದ್ದಾರೆ. ಕಳೆದ ವರ್ಷ ಸುದ್ದಿಯಲ್ಲಿದ್ದ ಈ ಸಿನಿಮಾ ಸದ್ದಿಲ್ಲದೆ ಸ್ಕ್ರಿಪ್ಟ್ ಪೂಜೆ ಮಾಡಿಕೊಂಡಿದೆ. ಈ ಚಿತ್ರದಲ್ಲಿ ಶ್ರೀ ಮಹದೇವ್, 'ಲವ್‌ ಮಾಕ್ಟೇಲ್‌' ಸಿನಿಮಾ ನಟಿ ರಚನಾ ಇಂದರ್‌ ನಟಿಸುತ್ತಿದ್ದಾರೆ. 'ಲೆಟ್ಸ್‌ ಬ್ರೇಕಪ್‌' ಒಂದು ಇಂಟೆನ್ಸ್‌ ಲವ್‌ ಸ್ಟೋರಿ. ಸ್ವರೂಪ್‌ ಅವರು ಬಂದು ಕಥೆ ಹೇಳಿದಾಗ ನನಗೆ ಬಹಳ ಥ್ರಿಲ್‌ ಆಯಿತು. ಇಡೀ ಚಿತ್ರ ಲವ್‌ ಟ್ರ್ಯಾಕ್‌ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ. ಪ್ರದೀಪ್‌ ಯಾದವ್‌ ಎನ್ನುವವರು ಹಣ ಹೂಡುತ್ತಿದ್ದಾರೆ. ನನಗೆ ಸಿನಿಮಾದಲ್ಲಿ ಎರಡು ಶೇಡ್‌ ಇದೆ. ಪ್ರೀತಿಯ ತೀವ್ರತೆ ಮತ್ತು ಅದರಿಂದ ಯುವ ಜೋಡಿ ಹೊರಬರುವಾಗಿನ ಕಷ್ಟಗಳು ಎಲ್ಲವೂ ಹೇಗಿರುತ್ತವೆ ಎಂಬುದನ್ನು ನಿರ್ದೇಶಕ ಸ್ವರೂಪ್‌ ಬಹಳ ಚೆನ್ನಾಗಿ ಬರೆದಿದ್ದಾರೆ. ನನಗಂತೂ ಬಹಳ ಒಳ್ಳೆಯ ಪಾತ್ರ ಸಿಕ್ಕಿದೆ ಎನ್ನಬಹುದು' ಎಂದು ಹೇಳಿದರು ಶ್ರೀ ಮಹದೇವ್‌. 'ಇದೊಂದು ಕಂಪ್ಲೀಟ್‌ ಲವ್‌ ಸ್ಟೋರಿ. ಈಗಿನ ಕಾಲದಲ್ಲಿ ಯುವ ಜನಾಂಗ ಎಷ್ಟು ವೇಗವಾಗಿ ಪ್ರೀತಿಯಲ್ಲಿ ಬೀಳುತ್ತಾರೆ, ನಂತರ ಎಷ್ಟು ವೇಗವಾಗಿ ಬ್ರೇಕಪ್‌ ಮಾಡಿಕೊಳ್ಳುತ್ತಾರೆ, ಅದರಿಂದ ಆಗುವ ತೊಂದರೆಗಳೇನು ಎಂಬುದೇ ಸಿನಿಮಾದ ಕಥೆ. ನಾಯಕ ಶ್ರೀಗೆ ಎಷ್ಟು ಮುಖ್ಯವಾದ ಪಾತ್ರ ಇದೆಯೋ ನಾಯಕಿಗೂ ಅಷ್ಟೇ ಮುಖ್ಯವಾದ ಪಾತ್ರವಿದೆ. ರಚನಾ ಮತ್ತು ಶ್ರೀ ನನ್ನ ಕಥೆಗೆ ಸೂಟ್‌ ಆಗುತ್ತಾರೆ' ಎಂದು ಹೇಳುತ್ತಾರೆ ನಿರ್ದೇಶಕ ಸ್ವರೂಪ್‌. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾದ ಚಿತ್ರೀಕರಣ ಇದೇ 26ರಿಂದ ಆರಂಭವಾಗಬೇಕಿತ್ತು. ಇಡೀ ತಂಡ ಚಾಮುಂಡಿ ಬೆಟ್ಟದಲ್ಲಿಸ್ಕಿ್ರಪ್ಟ್‌ ಪೂಜೆಯೊಂದನ್ನು ಮಾಡಿಕೊಂಡು ಬಂದಿದೆ. 'ಲವಲವಿಕೆ'ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಟೀಸರ್‌ ಸಹ ಚಿತ್ರೀಕರಣವಾಗಿದೆ. ಲಾಕ್‌ಡೌನ್‌ ತೆರವಾದ ಮೇಲೆ ಚಿತ್ರತಂಡ ಫೋಟೋ ಶೂಟ್‌ ಮಾಡಿಸಿ ಫಸ್ಟ್‌ ಲುಕ್‌ ರಿಲೀಸ್‌ ಮಾಡಿ ಚಿತ್ರೀಕರಣ ಆರಂಭಿಸಲು ಪ್ಲಾನ್‌ ಮಾಡಿಕೊಂಡಿದೆ. 'ರಾಮಾ ರಾಮಾ ರೇ' ಖ್ಯಾತಿಯ ಲವಿತ್‌ ಸಿನಿಮಾಟೋಗ್ರಫಿ ಮಾಡುತ್ತಿದ್ದಾರೆ. ವಿನೀತ್‌ ಎನ್ನುವವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಶೂಟಿಂಗ್‌ ನಡೆಯಲಿದೆ. ಲೆಟ್ಸ್‌ ಬ್ರೇಕಪ್‌ ಒಂದು ಕಾಡುವಂತಹ ಪ್ರೇಮಕಥೆ. ನನಗೆ ಪರ್ಫಾರ್ಮೆನ್ಸ್‌ ಮಾಡಲು ಒಳ್ಳೆಯ ಪಾತ್ರವಿದು. ಪ್ರೀತಿಗಿರುವ ಶಕ್ತಿ ಎಂತಹದ್ದು ಎಂಬುದನ್ನು ಈ ಚಿತ್ರದಲ್ಲಿತೋರಿಸುವ ಪ್ರಯತ್ನವಾಗುತ್ತಿದೆ. ಹೊಸ ರೀತಿಯಲ್ಲಿನಾನು ಈ ಚಿತ್ರದಲ್ಲಿಕಾಣಿಸಿಕೊಳ್ಳುತ್ತೇನೆ ಎಂದು ನಟ ಶ್ರೀ ಮಹದೇವ್ ಹೇಳಿದ್ದಾರೆ. ಪ್ರದೀಪ್‌ ಯಾದವ್‌ ಎಂಬ ಹೊಸ ನಿರ್ಮಾಪಕರು ನನ್ನ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಯುವ ಪ್ರೇಮಿಗಳ ನಡುವಿನ ತವಕ ತಲ್ಲಣಗಳು, ಪ್ರೀತಿ ಮಾಡಿದ ನಂತರ ಬ್ರೇಕಪ್‌ ಯಾಕೆ ಆಗುತ್ತದೆ ಎಂಬೆಲ್ಲವಿಷಯಗಳನ್ನು ವಿವರವಾಗಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ ನಿರ್ದೇಶಕ ಸ್ವರೂಪ್‌