ಬಿಜೆಪಿ ಕೊಲೆ ಬೆದರಿಕೆ ಹಾಕಿದೆ ಎಂದು ಸಿದ್ದಾರ್ಥ್ ಆರೋಪ; ಇಷ್ಟುದಿನ ಸರ್ಕಾರ ಟೀಕಿಸಿದ್ದು ತಪ್ಪಾಯ್ತೇ?

ಟಾಲಿವುಡ್‌ನ ಖ್ಯಾತ ನಟ ಸಿದ್ದಾರ್ಥ್ ಹಾಗೂ ಅವರ ಕುಟುಂಬಕ್ಕೆ ಕೊಲೆ, ರೇಪ್ ಬೆದರಿಕೆ ಹಾಕಲಾಗುತ್ತಿದೆ, ನಿಂದನೆ ಮಾಡಲಾಗುತ್ತಿದೆಯಂತೆ. ಈ ಕೆಲಸ ಮಾಡಿರೋದು ಬಿಜೆಪಿ ಐಟಿ ಸೆಲ್ ಅಂತ ಸಿದ್ದಾರ್ಥ್ ಆರೋಪ ಮಾಡಿದ್ದಾರೆ. ಹಾಗಾದರೆ ಸಿದ್ದಾರ್ಥ್ ಅವರು ಬಿಜೆಪಿ ವಿರುದ್ಧ ಏನು ಕೆಲಸ ಮಾಡಿದ್ದಾರೆ?

ಬಿಜೆಪಿ ಕೊಲೆ ಬೆದರಿಕೆ ಹಾಕಿದೆ ಎಂದು ಸಿದ್ದಾರ್ಥ್ ಆರೋಪ; ಇಷ್ಟುದಿನ ಸರ್ಕಾರ ಟೀಕಿಸಿದ್ದು ತಪ್ಪಾಯ್ತೇ?
Linkup
ಟಾಲಿವುಡ್‌ನ ಖ್ಯಾತ ನಟ ಅವರ ಕುಟುಂಬಕ್ಕೆ ಕೊಲೆ, ರೇಪ್ ಬೆದರಿಕೆ ಬರುತ್ತಿವೆಯಂತೆ. "ಈಗಾಗಲೇ 500 ಫೋನ್ ಕರೆಗಳು ಬಂದಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದೆ. ನಾನು ಸುಮ್ಮನಿರೋದಿಲ್ಲ. ಪೊಲೀಸರಿಗೆ ಫೋನ್ ಕರೆಗಳ ರೆಕಾರ್ಡ್ ನೀಡುವೆ. ತಮಿಳು ನಾಡಿನ ಐಟಿ ಸೆಲ್ ನನ್ನ ಫೋನ್ ನಂಬರ್ ಲೀಕ್ ಮಾಡಿ, ನನ್ನನ್ನು ಅಟ್ಯಾಕ್ ಮಾಡಲು ಹೇಳಿದೆ" ಎಂದು ಸಿದ್ದಾರ್ಥ್ ಆರೋಪ ಮಾಡಿದ್ದಾರೆ. ಬಿಜೆಪಿ ವಿರುದ್ಧ ಸಿದ್ದಾರ್ಥ್ ಏನು ಮಾಡಿದ್ದಾರೆ? ನಟ ಸಿದ್ದಾರ್ಥ್ ಪರವಾಗಿ ನಟಿ ಸೇರಿದಂತೆ ಕೆಲ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದಾರೆ. ಹಾಗಾದರೆ ಬಿಜೆಪಿ ಒಂದು ವೇಳೆ ಫೋನ್ ನಂಬರ್ ಲೀಕ್ ಮಾಡಿದ್ದರೆ ಯಾಕೆ ಮಾಡಬೇಕು ಎಂಬ ಪ್ರಶ್ನೆ ಏಳುವುದು ಸಹಜ. ಸಿದ್ದಾರ್ಥ್ ಅವರು ಸಾಮಾಜಿಕ ಘಟನೆಗಳು, ಸರ್ಕಾರದ ಆಡಳಿತದ ಬಗ್ಗೆ ಮಾತನಾಡೋದರಲ್ಲಿ ಎತ್ತಿದ ಕೈ. ಇನ್ನು ಬಿಜೆಪಿ ವಿರುದ್ಧ ಅವರು ಮಾಡಿದ ಆರೋಪಗಳು, ವ್ಯಂಗ್ಯಗಳು ಇಲ್ಲಿವೆ
  • ಸಿದ್ದಾರ್ಥ್ ಅನೇಕ ಬಾರಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿದ್ದರು.
  • ಕೊರೊನಾ ವೈರಸ್ ಸೋಂಕಿನಿಂದಾಗಿ ಜನರು ನಿತ್ಯ ಸಾಯುತ್ತಿದ್ದಾರೆ. ಅದರೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಮಾಡಿದ್ದರು.
  • ನರೇಂದ್ರ ಮೋದಿ ಬಯೋಪಿಕ್ ಟ್ರೇಲರ್ ನೋಡಿದ ನಂತರದಲ್ಲಿ ಸಿದ್ದಾರ್ಥ್ ಅವರು ಬ್ರಿಟಿಷ್ ಸಾಮ್ರಾಜ್ಯವನ್ನು ಒಂಟಿಯಾಗಿ ಅಳಿಸಿ ಹಾಕಿ, ಭಾರತದ ಸ್ವಾತಂತ್ರ್ಯವನ್ನು ಮೋದಿ ಅವರು ಹೇಗೆ ಗೆದ್ದರು ಎಂದು ಟ್ರೇಲರ್‌ನಲ್ಲಿ ತೋರಿಸಿಲ್ಲ ಎಂದು ಹೇಳಿಕೆ ನೀಡಿದ್ದರು
  • ನರೇಂದ್ರ ಮೋದಿ ಅವರು ಅಮೆರಿಕದಿಂದ ದೆಹಲಿಗೆ ಬಂದನಂತರದಲ್ಲಿ ಜನರು ಸ್ವಾಗತಿಸಿದ ವಿಡಿಯೋ ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ದಾರ್ಥ್ ಅವರು "ಒಟ್ಟುಗೂಡಿದ ಜನಸಮೂಹ ನೋಡಿ ಸುಪ್ರೀಂ ಲೀಡರ್ ಖುಷಿಯಾಗಿದ್ದಾರೆ. ಅವರ ತಂಡ ಅವರನ್ನು ಸ್ವಾಗತ ಮಾಡಿದೆ. ಮೊಗೆಂಬೊ ಖುಷ್ ಹುವಾ" ಎಂದು ವ್ಯಂಗ್ಯ ಮಾಡಿದ್ದರು.
ಬಿಜೆಪಿ ಐಟಿ ಸೆಲ್ ಸೆಕ್ರೆಟರಿ ನೀಡಿದ ಪ್ರತಿಕ್ರಿಯೆ ಏನು? ತಮಿಳುನಾಡಿನ ಬಿಜೆಪಿ ಐಟಿ ವಿಂಗ್ ಸೆಕ್ರೆಟರಿ ಸಿಟಿಆರ್ ನಿರ್ಮಲ್ ಕುಮಾರ್ ಅವರು ಸಿದ್ದಾರ್ಥ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಕೊಲೆ ಬೆದರಿಕೆ ಹಾಕುವ ಕೆಲಸದಲ್ಲಿ ಬಿಜೆಪಿ ಸಿಬ್ಬಂದಿಗಳು ಭಾಗಿಯಾಗೋದಿಲ್ಲ. ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ನಾವು ಜನರಿಗೆ ಔಷಧಿ, ಆಹಾರ ನೀಡಲು ಕಾರ್ಯ ಮಾಡುತ್ತಿದ್ದೇವೆ. ಬಿಜೆಪಿ ಸಿಬ್ಬಂದಿಯೇ ಈ ರೀತಿ ಮಾಡಿರೋದು ಎಂದು ಸಿದ್ದಾರ್ಥ್ ಸಾಬೀತುಪಡಿಸಿದರೆ ನಾವು ಯಾರು ಆ ಕೆಲಸ ಮಾಡಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ನಿರ್ಮಲ್ ಕುಮಾರ್ ಹೇಳಿದ್ದಾರೆ.