KGF 2 Release: ಮುಂದಿನ ವರ್ಷ ತೆರೆಗೆ ಬರಲಿದೆ ಕೆಜಿಎಫ್: ಚಾಪ್ಟರ್ 2

'ಕೆಜಿಎಫ್: ಚಾಪ್ಟರ್ 2' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ. 2022 ರ ಏಪ್ರಿಲ್ 14 ರಂದು 'ಕೆಜಿಎಫ್: ಚಾಪ್ಟರ್ 2' ಚಿತ್ರ ರಿಲೀಸ್ ಆಗಲಿದೆ.

KGF 2 Release: ಮುಂದಿನ ವರ್ಷ ತೆರೆಗೆ ಬರಲಿದೆ ಕೆಜಿಎಫ್: ಚಾಪ್ಟರ್ 2
Linkup
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿ, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೊಸ ಹವಾ ಕ್ರಿಯೇಟ್ ಮಾಡಿದ ಸಿನಿಮಾ ರಾಕಿಂಗ್ ಸ್ಟಾರ್ ಅಭಿನಯದ 'ಕೆಜಿಎಫ್: ಚಾಪ್ಟರ್ 1'. ನಿರ್ದೇಶನದ 'ಕೆಜಿಎಫ್: ಚಾಪ್ಟರ್ 1' ಸೂಪರ್ ಡ್ಯೂಪರ್ ಹಿಟ್ ಆಯ್ತು. ಇದೀಗ ಎಲ್ಲರ ಕಣ್ಣು 'ಕೆಜಿಎಫ್: ಚಾಪ್ಟರ್ 2' ಮೇಲಿದೆ. 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಬಿಡುಗಡೆ ದಿನಾಂಕ ಇಂದು ಘೋಷಣೆಯಾಗಿದೆ. 'ಕೆಜಿಎಫ್: ಚಾಪ್ಟರ್ 2' ಬಿಡುಗಡೆ ಯಾವಾಗ? ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗಾಗಲೇ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಬಿಡುಗಡೆಯಾಗಿರಬೇಕಿತ್ತು. ಜುಲೈ 16, 2021 ರಂದು 'ಕೆಜಿಎಫ್: ಚಾಪ್ಟರ್ 2' ರಿಲೀಸ್ ಆಗಬೇಕಿತ್ತು. ಆದರೆ, ಕೋವಿಡ್ ಎರಡನೇ ಅಲೆ ಹಾಗೂ ಲಾಕ್‌ಡೌನ್‌ನಿಂದಾಗಿ ಜುಲೈ ತಿಂಗಳಿನಲ್ಲಿ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಬಿಡುಗಡೆ ಆಗಲಿಲ್ಲ. ಈಗಲೂ ಕೋವಿಡ್ ಮೂರನೇ ಅಲೆಯ ಭೀತಿ ಕಾಡುತ್ತಿದೆ. ಹೀಗಿರುವಾಗಲೇ, 'ಕೆಜಿಎಫ್: ಚಾಪ್ಟರ್ 2' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ. 2022 ರ ಏಪ್ರಿಲ್ 14 ರಂದು 'ಕೆಜಿಎಫ್: ಚಾಪ್ಟರ್ 2' ಚಿತ್ರ ರಿಲೀಸ್ ಆಗಲಿದೆ. ಥಿಯೇಟರ್‌ಗಳಲ್ಲೇ ವಿಶ್ವದಾದ್ಯಂತ ತೆರೆಗೆ ಬರಲಿದೆ ಚಿತ್ರ 2022 ಏಪ್ರಿಲ್ 14 ರಂದು 'ಕೆಜಿಎಫ್: ಚಾಪ್ಟರ್ 2' ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲಿದೆ. ಆ ಮೂಲಕ ಚಿತ್ರಮಂದಿರಗಳಲ್ಲೇ 'ಕೆಜಿಎಫ್: ಚಾಪ್ಟರ್ 2' ರಿಲೀಸ್ ಆಗಲಿದೆ ಎಂದು ಚಿತ್ರತಂಡ ಸ್ಪಷ್ಟ ಪಡಿಸಿದೆ. ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ''ಇಂದಿನ ಅನಿಶ್ಚಿತತೆಗಳು ನಮ್ಮ ಸಂಕಲ್ಪವನ್ನು ವಿಳಂಬ ಮಾಡಬಹುದು. ಆದರೆ ನಾವು ಭರವಸೆ ನೀಡಿದಂತೆಯೇ ನಡೆಯಲಿದೆ. ಏಪ್ರಿಲ್ 14, 2022 ರಂದು ಚಿತ್ರಮಂದಿರಗಳಲ್ಲಿ 'ಕೆಜಿಎಫ್: ಚಾಪ್ಟರ್ 2' ಬಿಡುಗಡೆಯಾಗಲಿದೆ'' ಎಂದು ನಟ ಯಶ್ ಟ್ವೀಟ್ ಮಾಡಿದ್ದಾರೆ. ಹಾಗೇ, 'ಕೆಜಿಎಫ್: ಚಾಪ್ಟರ್ 2' ರಿಲೀಸ್ ಪೋಸ್ಟರ್‌ಅನ್ನೂ ಯಶ್ ಹಂಚಿಕೊಂಡಿದ್ದಾರೆ. 'ಕೆಜಿಎಫ್: ಚಾಪ್ಟರ್ 2'ನಲ್ಲಿ ದಿಗ್ಗಜರ ನಟನೆ 'ಕೆಜಿಎಫ್: ಚಾಪ್ಟರ್ 2' ಸಿನಿಮಾದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ 'ಕೆಜಿಎಫ್: ಚಾಪ್ಟರ್ 2' ಚಿತ್ರ ತೆರೆಗೆ ಬರಲಿದೆ.