ಅಲ್ಲು ಅರ್ಜುನ್ ಸೋದರನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರಾಮ್ ಗೋಪಾಲ್‌ ವರ್ಮ; ಕೆರಳಿದ ಫ್ಯಾನ್ಸ್!

90ರ ದಶಕದಲ್ಲಿ ಬಾಲಿವುಡ್/ಟಾಲಿವುಡ್‌ನಲ್ಲಿ ಹಿಟ್ ಸಿನಿಮಾಗಳನ್ನು ಸಾಲು ಸಾಲಾಗಿ ನೀಡಿದವರು ರಾಮ್ ಗೋಪಾಲ್‌ ವರ್ಮ. ಆದರೆ ಈಚೆಗೆ ಅವರ ಸಿನಿಮಾಗಳ್ಯಾವುವು ದೊಡ್ಡ ಯಶಸ್ಸು ಕಾಣುತ್ತಿಲ್ಲ. ಅದರ ಜೊತೆಗೆ ಆರ್‌ಜಿವಿ ವಿವಾದಿತ ಹೇಳಿಕೆಗಳು ನಿಲ್ಲುತ್ತಿಲ್ಲ! ಇದೀಗ ಹೊಸ ವಿವಾದವೊಂದು ಅವರನ್ನು ಸುತ್ತಿಕೊಂಡಿದೆ!

ಅಲ್ಲು ಅರ್ಜುನ್ ಸೋದರನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರಾಮ್ ಗೋಪಾಲ್‌ ವರ್ಮ; ಕೆರಳಿದ ಫ್ಯಾನ್ಸ್!
Linkup
ನಿರ್ದೇಶಕ/ನಿರ್ಮಾಪಕ ಒಂದು ಕಾಲದಲ್ಲಿ ಬರೀ ಹಿಟ್ ಸಿನಿಮಾಗಳಿಂದಲೇ ಗುರುತಿಸಿಕೊಂಡವರು. 90ರ ದಶಕದಲ್ಲಿ ಹೊಸ ಬಗೆಯ ಸಿನಿಮಾಗಳೆಂದರೆ, ಅದು ಆರ್‌ಜಿವಿ ಅವರದ್ದೇ ಇರಬೇಕು ಎಂಬಷ್ಟರ ಮಟ್ಟಿಗೆ ಅವರು ಫೇಮಸ್ ಆಗಿದ್ದರು. ಆದರೆ ಈಗ ಆರ್‌ಜಿವಿ ಬರೀ ವಿವಾದಗಳಿಗೆ ಫೇಮಸ್‌. ಆಗಾಗ ಯಾರ ಬಗ್ಗೆಯಾದರೂ ಕಾಮೆಂಟ್ ಮಾಡುವುದೇ ಅವರ ಹೊಸ ಹವ್ಯಾಸವಾಗಿದೆ. ಈಚೆಗೆ ಸಹೋದರ ಬಗ್ಗೆಯೂ ಒಂದು ಕಾಮೆಂಟ್ ಮಾಡಿದ್ದಾರೆ. ಅದೀಗ ದೊಡ್ಡ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಆರ್‌ಜಿವಿ ಮಾಡಿದ ಕಾಮೆಂಟ್‌ ಏನು? ಅಲ್ಲು ಸಿರೀಶ್‌ ಹೆಚ್ಚು ವರ್ಕೌಟ್‌ಗೆ ಮಹತ್ವ ನೀಡುತ್ತಾರೆ. ಜಿಮ್‌ನಲ್ಲಿ ಬೆವರಿಳಿಸುವುದು ಎಂದರೆ ಅವರಿಗೆ ತುಂಬ ಇಷ್ಟ. ಇದೀಗ ಅವರು ವರ್ಕೌಟ್ ಮಾಡುತ್ತ ಶರ್ಟ್‌ಲೆಸ್‌ ಆಗಿ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಖಡಕ್‌ ಆಗಿ ಕಾಣಿಸಿಕೊಂಡಿರುವ ಅವರ ಲುಕ್ ಎಲ್ಲರ ಗಮನೆಸೆಳೆದಿತ್ತು. ಜೊತೆಗೆ ರಾಮ್‌ ಗೋಪಾಲ್ ವರ್ಮ ಅವರ ಗಮನವನ್ನೂ ಸೆಳೆದಿತ್ತು. ಕೂಡಲೇ ಆ ಫೋಟೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಿದ ಆರ್‌ಜಿವಿ, 'ಈ ನನ್ನ ಮಗ, 'ಕೊನನ್ ದ ಬರ್ಬಾರಿಯಿನ್' ಅರ್ನಾಲ್ಡ್ ಸ್ವಾರ್ಚುನೆಗರ್ ಪುತ್ರನಲ್ಲ, ಅಲ್ಲುಅರವಿಂದ್‌ ಮಗ..' ಎಂದು ಹೇಳಿದ್ದಾರೆ. ಇದು ಹೊಗಳಿಕೆಯೋ, ತೆಗಳಿಕೆಯೋ? ಆರ್‌ಜಿವಿ ಈ ರೀತಿ ಕಾಮೆಂಟ್ ಮಾಡಿದ್ದನ್ನು ಅಲ್ಲು ಫ್ಯಾನ್ಸ್ ಖಂಡಿಸಿದ್ದಾರೆ. ಆರಂಭದಲ್ಲೇ 'ಈ ನನ್ನ ಮಗ..' ಎಂದು ಹೇಳಿರುವುದು ಅವರೆಲ್ಲರ ಕೋಪಕ್ಕೆ ಕಾರಣವಾಗಿದೆ. ಆದರೆ ಇನ್ನೂ ಕೆಲವರ ಪ್ರಕಾರ, ಇದು ಸಿರೀಶ್‌ ಅವರನ್ನು ಹೊಗಳಿ ಹಾಕಿರುವ ಪೋಸ್ಟ್ ಅಂತೆ. ಅವರ ಫಿಸಿಕ್ ನೋಡಿ, ಹೀಗೆ ರಾಮ್ ಗೋಪಾಲ್ ವರ್ಮ ತಮ್ಮದೇ ಸ್ಟೈಲ್‌ನಲ್ಲಿ ಹೇಳಿದ್ದಾರೆ ಎಂದು ಬಣ್ಣಿಸಿದ್ದಾರೆ. ಆದರೆ ಅಲ್ಲು ಫ್ಯಾನ್ಸ್‌ ಮಾತ್ರ ಕೆರಳಿ ಕೆಂಡವಾಗಿರುವುದಂತೂ ನಿಜ! ಈ ಹಿಂದೆ ಪವನ್ ಕಲ್ಯಾಣ್ ಸೇರಿದಂತೆ ಒಂದಷ್ಟು ತೆಲುಗು ನಟರ ಕುರಿತು ಆರ್‌ಜಿವಿ ಹೀಗೆ ಟ್ವೀಟ್ ಮಾಡಿದ್ದರು. ಕೆಲವರು ಪ್ರತ್ಯುತ್ತರ ನೀಡಿದರೆ, ಇನ್ನೂ ಕೆಲವರು ಅದನ್ನು ಉದಾಸೀನ ಮಾಡಿದ್ದರು. ಆದರೆ ರಾಮ್‌ ಗೋಪಾಲ್ ವರ್ಮ ತಮಗನ್ನಿಸಿದ್ದನ್ನು ನೇರವಾಗಿ ಹೇಳುವುದನ್ನು ಬಿಡುವಂತೆ ಮಾತ್ರ ಕಾಣುತ್ತಿಲ್ಲ. ಸದ್ಯ ಹೊಸದೊಂದು ಓಟಿಟಿ ಶುರು ಮಾಡಿರುವ ಅವರು, ಅದರ ಮೂಲಕ ಡಿ ಕಂಪನಿ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ.