ರೈತರ ಬೇಡಿಕೆ ಈಡೇರಿಸಲು ಒಪ್ಪಿದ ಕೇಂದ್ರ! 13 ತಿಂಗಳ ಬಳಿಕ ಕೊನೆಗೂ ರೈತರ ಪ್ರತಿಭಟನೆ ಅಂತ್ಯ

ರೈತರ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಕೃಷಿ ಕಾನೂನುಗಳ ರದ್ಧತಿಗಾಗಿ ಕಳೆದ 15 ತಿಂಗಳಿನಿಂದ ರಾಷ್ಟ್ರ ರಾಜಧಾನಿ ದಿಲ್ಲಿಯ ಗಡಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಕೊನೆಗೂ ಅಂತ್ಯವಾಗಿದೆ.

ರೈತರ ಬೇಡಿಕೆ ಈಡೇರಿಸಲು ಒಪ್ಪಿದ ಕೇಂದ್ರ! 13 ತಿಂಗಳ ಬಳಿಕ ಕೊನೆಗೂ ರೈತರ ಪ್ರತಿಭಟನೆ ಅಂತ್ಯ
Linkup
ಹೊಸದಿಲ್ಲಿ: ಕೃಷಿ ಕಾನೂನುಗಳ ರದ್ಧತಿಗಾಗಿ ಕಳೆದ 15 ತಿಂಗಳಿನಿಂದ ರಾಷ್ಟ್ರ ರಾಜಧಾನಿ ದಿಲ್ಲಿಯ ಗಡಿಯಲ್ಲಿ ನಡೆಯುತ್ತಿದ್ದ ಕೊನೆಗೂ ಅಂತ್ಯವಾಗಿದೆ. ರೈತರ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ರದ್ದುಗೊಳಿಸಲು ಆಗ್ರಹಿಸಿ ನಡೆಸುತ್ತಿದ್ದ ರೈತರ ಮೇಲೆ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು. ಹಾಗೂ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ವಿತರಿಸಬೇಕು ಎಂಬ ರೈತರ ಬೇಡಿಕೆಗಳನ್ನು ಕೂಡ ಸರ್ಕಾರ ಒಪ್ಪಿಕೊಂಡಿದೆ. ಈ ಹಿನ್ನೆಲೆ ರೈತರು ತಮ್ಮ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಒಪ್ಪಿಕೊಂಡ ಬಗ್ಗೆ ಕೇಂದ್ರ ಸರ್ಕಾರ ಲಿಖಿತ ಪತ್ರ ನೀಡಿದ ಬಳಿಕ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತೇವೆ ಎಂದು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್‌ ಮೋರ್ಚಾ ಬುಧವಾರ ಸಂಜೆ ಹೇಳಿತ್ತು. ರೈತರ ಬೇಡಿಕೆಗಳು ಏನಿತ್ತು?1. ಪ್ರತಿಭಟನೆಯ ವೇಳೆ ರೈತರ ಮೇಲೆ ದೇಶದ ಯಾವುದೇ ರಾಜ್ಯದಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಕರಣಗಳು ದಾಖಲಾಗಿದ್ದರೆ, ಆ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು. 2. ಪ್ರತಿಭಟನೆ ವೇಳೆ ಮೃತಪಟ್ಟ ಎಲ್ಲ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು. 3. ಹುಲ್ಲು ಸುಡುವ ಪ್ರಕರಣಗಳಲ್ಲಿ ರೈತರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತಿಲ್ಲ. 4. ಸರ್ಕಾರವು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ಸಂಯುಕ್ತ ಕಿಸಾನ್‌ ಮೋರ್ಚಾ ಅಥವಾ ಇತರ ರೈತ ಸಂಘಗಳೊಂದಿಗೆ ಚರ್ಚಿಸಬೇಕು. 5. ಕನಿಷ್ಠ ಬೆಂಬಲ ಬೆಲೆ (MSP) ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸಬೇಕು. ಸಂಯುಕ್ತ ಕಿಸಾನ್‌ ಮೋರ್ಚಾ ಸಮಿತಿಯಲ್ಲಿ ತಮ್ಮ ಸದಸ್ಯರನ್ನು ಪಟ್ಟಿ ಮಾಡುತ್ತದೆ. 6. ದೇಶದಲ್ಲಿ ಎಂಎಸ್‌ಪಿ ನೀತಿ ಮತ್ತು ಅದರ ಸಂಗ್ರಹಣೆ ಪ್ರಕ್ರಿಯೆಯನ್ನು ಹಾಗೆಯೇ ಮುಂದುವರಿಸಬೇಕು ಎಂದು ರೈತರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಪಂಜಾಬ್‌ ಸೇರಿ ಹರಿಯಾಣ, ಉತ್ತರ ಪ್ರದೇಶ ಸರ್ಕಾರಗಳು ಮೃತಪಟ್ಟ ರೈತರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ನೀಡಲು ಒಪ್ಪಿಕೊಂಡಿವೆ. ನವೆಂಬರ್‌ 19ರಂದು ಪ್ರಧಾನಿ ನರೇಂದ್ರ ಮೋದಿ ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುತ್ತೇವೆ ಎಂದು ಘೋಷಿಸಿದ್ದರು. ಅದಾದ ಬಳಿಕ ನವೆಂಬರ್‌ 29ರಂದು ಚಳಿಗಾಲದ ಅಧಿವೇಶನದ ಮೊದಲ ದಿನ ರಾಜ್ಯಸಭೆಯಲ್ಲಿ ಕೃಷಿ ಕಾನೂನುಗಳನ್ನು ರದ್ದುಪಡಿಸುವ ಮಸೂದೆ ಮಂಡಿಸಲಾಗಿತ್ತು. ನವೆಂಬರ್‌ 26, 2020ರಿಂದ ದಿಲ್ಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಡಿಸೆಂಬರ್‌ 11ರಿಂದ ರೈತರು ದಿಲ್ಲಿಯ ಗಡಿಗಳನ್ನು ಬಿಟ್ಟು ತೆರಳುತ್ತಿದ್ದು, ಡಿಸೆಂಬರ್‌ 13ಕ್ಕೆ ಸ್ವರ್ಣ ಮಂದಿರ ತಲುಪಲಿದ್ದಾರೆ. ನಾವು ದೊಡ್ಡ ಮಟ್ಟದ ಗೆಲುವನ್ನು ಪಡೆದು ವಾಪಸಾಗುತ್ತಿದ್ದೇವೆ. ಸರ್ಕಾರ ಭರವಸೆಗಳನ್ನು ಈಡೇರಿಸದಿದ್ದಲ್ಲಿ ಮತ್ತೆ ಪ್ರತಿಭಟನೆ ಆರಂಭಿಸುತ್ತೇವೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕರು ಹೇಳಿದ್ದಾರೆ.