ಬರಲಿದೆ ಮತ್ತೊಂದು ಸ್ವದೇಶಿ ಲಸಿಕೆ: ಬಯಾಲಾಜಿಕಲ್-ಇ ಕಂಪೆನಿ ಜತೆ 30 ಕೋಟಿ ಲಸಿಕೆ ಒಪ್ಪಂದ ಮಾಡಿಕೊಂಡ ಸರ್ಕಾರ

ಲಸಿಕೆ ಅಭಿಯಾನ ಚುರುಕುಗೊಳಿಸಲು ಸರ್ಕಾರ ಮತ್ತೊಂದು ಸ್ವದೇಶಿ ಲಸಿಕೆ ಕಂಪೆನಿಯ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಹೈದರಾಬಾದ್ ಮೂಲದ ಬಯಾಲಾಜಿಕಲ್-ಇ ಕಂಪೆನಿಯಿಂದ 30 ಕೋಟಿ ಲಸಿಕೆಗೆ ಸರ್ಕಾರ ಮುಂದಾಗಿದೆ.

ಬರಲಿದೆ ಮತ್ತೊಂದು ಸ್ವದೇಶಿ ಲಸಿಕೆ: ಬಯಾಲಾಜಿಕಲ್-ಇ ಕಂಪೆನಿ ಜತೆ 30 ಕೋಟಿ ಲಸಿಕೆ ಒಪ್ಪಂದ ಮಾಡಿಕೊಂಡ ಸರ್ಕಾರ
Linkup
ಹೊಸದಿಲ್ಲಿ: ಬೃಹತ್ ಮಟ್ಟದ ಅಭಿಯಾನ ನಡೆಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ, ಹೈದರಾಬಾದ್ ಮೂಲದ ಕಂಪೆನಿಯ ಕೋವಿಡ್ ಲಸಿಕೆಯ 30 ಕೋಟಿ ಡೋಸ್‌ಗಳಿಗೆ ಒಪ್ಪಂದ ಮಾಡಿಕೊಂಡಿದೆ. ಬಯಾಲಾಜಿಕಲ್-ಇ ಕಂಪೆನಿಯ ಲಸಿಕೆಗಳು ಇನ್ನೂ ಪ್ರಯೋಗದ ಹಂತದಲ್ಲಿವೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಬಳಿಕ ಅನುಮೋದನೆ ಪಡೆದುಕೊಳ್ಳಲಿರುವ ಎರಡನೆಯ ಸ್ವದೇಶಿ ನಿರ್ಮಿತ ಲಸಿಕೆ ಎನಿಸಲಿರುವ ಈ ಕಂಪೆನಿಗೆ 1500 ಕೋಟಿ ರೂ ಮುಂಗಡ ಪಾವತಿ ಮಾಡಲಿದೆ. ಈ ಡೋಸ್‌ಗಳನ್ನು 2021ರ ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ ಬಯಾಲಾಜಿಕಲ್-ಇ ಕಂಪೆನಿಯು ಉತ್ಪಾದಿಸಿ ದಾಸ್ತಾನು ಮಾಡಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಆರ್‌ಬಿಟಿ ಪ್ರೊಟೀನ್ ಉಪ ಘಟಕದ ಲಸಿಕೆಯಾಗಿರುವ ಇದು, ಪ್ರಸ್ತುತ ಮೂರನೇ ಹಂತದ ಪರೀಕ್ಷಾರ್ಥ ಪ್ರಯೋಗದ ಹಂತದಲ್ಲಿದೆ. ಮೊದಲ ಎರಡು ಹಂತಗಳಲ್ಲಿ ಭರವಸೆಯ ಫಲಿತಾಂಶ ದೊರಕಿದೆ. ಮುಂದಿನ ಕೆಲವು ತಿಂಗಳಲ್ಲಿ ಇದು ಲಭ್ಯವಾಗುವ ನಿರೀಕ್ಷೆಯಿದೆ ಎಂದು ಸಚಿವಾಲಯ ತಿಳಿಸಿದೆ. ಬಯಾಲಾಜಿಕಲ್-ಇ ಕಂಪೆನಿಯು ವರ್ಷಕ್ಕೆ 600 ಮಿಲಿಯನ್ ಡೋಸ್‌ನಷ್ಟು ಜಾನ್ಸನ್ ಆಂಡ್ ಜಾನ್ಸನ್ ಕಂಪೆನಿಯ ಲಸಿಕೆಗಳನ್ನು ಉತ್ಪಾದಿಸುವ ಪ್ರತ್ಯೇಕ ಒಪ್ಪಂದವನ್ನು ಕೂಡ ಮಾಡಿಕೊಂಡಿದೆ.