ಮದುವೆಯ ಸುಳ್ಳು ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರ: ಅಲಹಾಬಾದ್‌ ಹೈಕೋರ್ಟ್‌

ಮದುವೆಯ ಸುಳ್ಳು ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ರೀತಿ ಮಾಡುವುದು ತ್ಯಾಚಾರಕ್ಕೆ ಸಮ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ. ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಕಠಿಣ ಕಾನೂನು ರೂಪಿಸುವ ಅಗತ್ಯವಿದೆ ಎಂದು ಕೂಡ ಇದೆ ವೇಳೆ ನ್ಯಾಯಮೂರ್ತಿ ತಿಳಿಸಿದರು.

ಮದುವೆಯ ಸುಳ್ಳು ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರ: ಅಲಹಾಬಾದ್‌ ಹೈಕೋರ್ಟ್‌
Linkup
ಅಲಹಾಬಾದ್‌: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮ ಎಂದು ತೀರ್ಪು ನೀಡಿದೆ. ''ಸುಳ್ಳು ಭರವಸೆ ನೀಡಿ ನಡೆಸುವ ಒಪ್ಪಿತ ಲೈಂಗಿಕ ಕ್ರಿಯೆಯು ಅತ್ಯಾಚಾರವೇ ಸರಿ. ಏಕೆಂದರೆ ಸಂತ್ರಸ್ತೆಯು ಸುಳ್ಳು ಭರವಸೆ ನಂಬಿ ಒಪ್ಪಿಗೆ ನೀಡಿರುತ್ತಾಳೆ,'' ಎಂದು ನ್ಯಾಯಮೂರ್ತಿ ಪ್ರದೀಪ್‌ಕುಮಾರ್‌ ಶ್ರೀವಾಸ್ತವ ಹೇಳಿದರು. ''ಸಮಾಜದಲ್ಲಿ ದಿನೇದಿನೇ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಲೈಂಗಿಕ ದೌರ್ಜನ್ಯದಂತೆಯೇ ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ದೊಡ್ಡ ಪಿಡುಗಿನ ರೀತಿ ಬೆಳೆಯುತ್ತಿದೆ. ಒಪ್ಪಿತ ಲೈಂಗಿಕ ಕ್ರಿಯೆ ಎಂಬ ಕಾರಣದಿಂದ ಆರೋಪಿಗಳು ಬಚಾವಾಗುತ್ತಿದ್ದಾರೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಕಠಿಣ ಕಾನೂನು ರೂಪಿಸುವ ಅಗತ್ಯವಿದೆ,'' ಎಂದು ನ್ಯಾಯಮೂರ್ತಿ ಹೇಳಿದರು.