ರಾಜ್ಯಸಭೆ ನಾಯಕನಾಗಿ ಪಿಯೂಷ್ ಗೋಯಲ್: ಕರ್ನಾಟಕ ರಾಜ್ಯಪಾಲ ಗೆಹ್ಲೋಟ್ ಜಾಗಕ್ಕೆ ನೇಮಕ

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಜ್ಯಸಭೆಯಲ್ಲಿನ ನೂತನ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾದ ಥಾವರ್ ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ ಗೋಯಲ್ ಆಯ್ಕೆಯಾಗಿದ್ದಾರೆ.

ರಾಜ್ಯಸಭೆ ನಾಯಕನಾಗಿ ಪಿಯೂಷ್ ಗೋಯಲ್: ಕರ್ನಾಟಕ ರಾಜ್ಯಪಾಲ ಗೆಹ್ಲೋಟ್ ಜಾಗಕ್ಕೆ ನೇಮಕ
Linkup
ಹೊಸದಿಲ್ಲಿ: ಕೇಂದ್ರ ಸಚಿವ ಅವರು ರಾಜ್ಯಸಭೆಯ ನೂತನ ನಾಯಕರಾಗಲಿದ್ದಾರೆ. ಈವರೆಗೂ ನಾಯಕರಾಗಿದ್ದ ಅವರು ಕರ್ನಾಟಕದ ರಾಜ್ಯಪಾಲರಾಗಿ ಕಳೆದ ವಾರ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ ಪಿಯೂಷ್ ಗೋಯಲ್ ಅವರನ್ನು ಆಯ್ಕೆ ಮಾಡಲಾಗಿದೆ. 57 ವರ್ಷದ ಗೋಯಲ್ ಅವರು ರಾಜ್ಯಸಭೆಯ ಉಪ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮುಂಬರುವ ಮುಂಗಾರು ಅಧಿವೇಶನಕ್ಕೂ ಮುನ್ನ ಅವರನ್ನು ರಾಜ್ಯಸಭೆಯ ಈ ಮುಖ್ಯ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಗೋಯಲ್ ಅವರು 2010ರಿಂದಲೂ ರಾಜ್ಯಸಭೆ ಸಂಸದರಾಗಿದ್ದಾರೆ. ಕಳೆದ ವಾರ ನಡೆದ ಬೃಹತ್ ಸಂಪುಟ ವಿಸ್ತರಣೆ ಚಟುವಟಿಕೆಯಲ್ಲಿ ಗೋಯಲ್ ಅವರಿಗೆ ಜವಳಿ ಸಚಿವಾಲಯದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಇದುವರೆಗೂ ಈ ಸಚಿವಾಲಯವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ಬಳಿ ಇತ್ತು. ಒಡಿಶಾದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅಶ್ವಿನಿ ವೈಷ್ಣವ್, ಕೇಂದ್ರ ಸಂಪುಟಕ್ಕೆ ಹೊಸ ಸೇರ್ಪಡೆಯಾಗಿದ್ದು, ಗೋಯಲ್ ಅವರ ಬಳಿಯಿದ್ದ ರೈಲ್ವೆ ಸಚಿವಾಲಯವನ್ನು ಅವರಿಗೆ ಹಸ್ತಾಂತರಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯಸಭೆಯಲ್ಲಿ ಮಹತ್ವದ ಮಸೂದೆಗಳನ್ನು ಅಂಗೀಕರಿಸುವಾಗ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದ ಬಿಜೆಡಿ, ಎಐಎಡಿಎಂಕೆಯಂತಹ ಪಕ್ಷಗಳ ಬೆಂಬಲ ಪಡೆದುಕೊಳ್ಳುವಲ್ಲಿ ಗೋಯಲ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕೇಂದ್ರ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದ ಭೂಪೇಂದರ್ ಯಾದವ್ ಕೂಡ ಈ ರೇಸ್‌ನಲ್ಲಿದ್ದರು. ಕಾಂಗ್ರೆಸ್‌ನಲ್ಲಿ ಬದಲಾವಣೆಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕನನ್ನು ಬದಲಿಸಲು ಕಾಂಗ್ರೆಸ್ ಕೂಡ ಮುಂದಾಗಿದೆ. 2019ರಿಂದ ಲೋಕಸಭೆ ನಾಯಕರಾಗಿದ್ದ ಅಧೀರ್ ರಂಜನ್ ಚೌಧರಿ ಅವರನ್ನು ಬದಲಿಸಲು ರಾಹುಲ್ ಗಾಂಧಿ ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಮನೀಶ್ ತಿವಾರಿ, ಶಶಿ ತರೂರ್, ಗೌರವ್ ಗೊಗೊಯ್, ರವ್ನೀತ್ ಸಿಂಗ್ ಬಿಟ್ಟು ಮತ್ತು ಉತ್ತಮ್ ಕುಮಾರ್ ರೆಡ್ಡಿ ಅವರ ಹೆಸರುಗಳು ಕೇಳಿಬರುತ್ತಿವೆ.