'ರೈಡರ್‌' ಸಿನಿಮಾದಲ್ಲಿ ಬಾಸ್ಕೆಟ್‌ ಬಾಲ್‌ ಆಟಗಾರನಾಗಿ ಮಿಂಚಲಿದ್ದಾರೆ ನಿಖಿಲ್ ಕುಮಾರಸ್ವಾಮಿ

ನಿಖಿಲ್‌ ಕುಮಾರಸ್ವಾಮಿ ನಟನೆಯ 'ರೈಡರ್‌' ಸಿನಿಮಾದ ಬಗ್ಗೆ ಒಂದು ವಿಶೇಷ ಮಾಹಿತಿಯನ್ನು ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಿಖಿಲ್ ಪಾತ್ರದ ಬಗ್ಗೆ ಅವರು ಹೇಳಿದ್ದಾರೆ.

'ರೈಡರ್‌' ಸಿನಿಮಾದಲ್ಲಿ ಬಾಸ್ಕೆಟ್‌ ಬಾಲ್‌ ಆಟಗಾರನಾಗಿ ಮಿಂಚಲಿದ್ದಾರೆ ನಿಖಿಲ್ ಕುಮಾರಸ್ವಾಮಿ
Linkup
ಹರೀಶ್‌ ಬಸವರಾಜ್‌ ನಿಖಿಲ್‌ ಕುಮಾರಸ್ವಾಮಿ '' ಸಿನಿಮಾದಲ್ಲಿ ಬಾಸ್ಕೆಟ್‌ ಬಾಲ್‌ ಆಟಗಾರನಾಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಈ ಸಿನಿಮಾದಲ್ಲಿ ಸಿಗಲಿದೆ ಎಂದು ಹೇಳಿದ್ದಾರೆ ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ. ತೆಲುಗಿನಲ್ಲಿ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿ ಯಶಸ್ವಿ ನಿರ್ದೇಶಕರ ಪಟ್ಟಿಗೆ ಸೇರಿಕೊಂಡಿರುವ ವಿಜಯ್‌ ಕುಮಾರ್‌ಗೆ 'ರೈಡರ್‌' ಸಿನಿಮಾ ಕನ್ನಡದಲ್ಲಿ ಮೊದಲ ಸಿನಿಮಾ. 'ರೈಡರ್‌'ನಲ್ಲಿ ಫ್ಯಾಮಿಲಿ ಆಡಿಯನ್ಸ್‌ ಮತ್ತು ಯುವ ಪ್ರೇಕ್ಷಕರನ್ನು ಸೆಳೆಯುವಂತಹ ಕಥೆಯನ್ನು ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. 'ರೈಡರ್‌ ಕ್ರೀಡೆಯನ್ನು ಆಧರಿಸಿದ ಒಂದು ಮನರಂಜನಾತ್ಮಕ ಸಿನಿಮಾ. ನಿಖಿಲ್‌ ಕುಮಾರಸ್ವಾಮಿ ಅವರು ಆ್ಯಕ್ಷನ್‌ ಹೀರೋ ರೀತಿಯ ಲುಕ್‌ ಹೊಂದಿದ್ದಾರೆ. ಅವರು ತುಂಬಾ ಎಕ್ಸ್‌ಪ್ರೆಸ್ಸಿವ್‌ ನಟ. ಈ ಸಿನಿಮಾದಲ್ಲಿ ಅವರ ಎಲ್ಲಾ ರಸಗಳನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಉದಾಹರಣೆಗೆ ಕಾಮಿಡಿ, ಭಾವನಾತ್ಮಕತೆ, ಆ್ಯಕ್ಷನ್‌, ಡಾನ್ಸ್‌ ಹೀಗೆ ಎಲ್ಲ ರೀತಿಯಲ್ಲಿ ಪರ್ಫೆಕ್ಟ್ ಕಲಾವಿದರಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ' ಎಂದಿದ್ದಾರೆ ವಿಜಯ್‌ ಕುಮಾರ್‌. 'ನಿಖಿಲ್‌ ಅವರ ಅಭಿಮಾನಿಗಳ ನಿರೀಕ್ಷೆಗಿಂತಲೂ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ರಾಜಕೀಯಕ್ಕೆ ಸಂಬಂಧಪಟ್ಟ ಯಾವುದೇ ಅಂಶವನ್ನೂ ಸೇರಿಸಿಲ್ಲ. ಮೈಸೂರು, ಮಂಗಳೂರು, ಬೆಂಗಳೂರು, ಶಿರಸಿಯ ಸುತ್ತಮುತ್ತಲಿನ ಕಾಡು, ಲೇಹ್‌ ಲಡಾಖ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಲೇಜು ನಂತರ ನಾಯಕ ನಟ ಬಾಸ್ಕೆಟ್‌ ಬಾಲ್‌ ಆಟಗಾರನಾಗಿ ಏನು ಮಾಡುತ್ತಾನೆ ಎಂಬುದೇ ಕಥೆ. ಇದಕ್ಕಾಗಿ ನಿಖಿಲ್‌ ಕುಮಾರಸ್ವಾಮಿ ಮೂರು ತಿಂಗಳ ಕಾಲ ತರಬೇತಿ ಪಡೆದುಕೊಂಡಿದ್ದಾರೆ. ಪ್ರತಿ ಸಿನಿಮಾದಲ್ಲಿ ಹೊಸ ವಿಷಯವನ್ನು ಪ್ರೇಕ್ಷಕರಿಗೆ ಹೇಳಬೇಕು. ಎಲ್ಲರಿಗೂ ಹೆಚ್ಚು ಪರಿಚಿತವಾಗಿರುವ ಕ್ರೀಡೆ ಬಗ್ಗೆ ಹೇಳುವುದಕ್ಕಿಂತಲೂ, ಅಷ್ಟಾಗಿ ಗೊತ್ತಿಲ್ಲದಿರುವ ಕ್ರೀಡೆ ಬಗ್ಗೆ ಹೇಳಿದರೆ ಜನ ಇಷ್ಟಪಡುತ್ತಾರೆ ಎಂದು ಬಾಸ್ಕೆಟ್‌ ಬಾಲ್‌ ಕ್ರೀಡೆಯ ಕಥೆಯನ್ನು ಮಾಡಿದ್ದೇವೆ' ಎಂದು ಮಾಹಿತಿ ನೀಡಿದರು ವಿಜಯ್‌ ಕುಮಾರ್‌. ಈ ಸಿನಿಮಾದಲ್ಲಿ ಕಾಶ್ಮೀರ ಪರದೇಸಿ ಮತ್ತು ಸಂಪದಾ ನಾಯಕಿಯರಾಗಿ ನಟಿಸಿದ್ದಾರೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಆರಂಭವಾಗಿದೆ. ಸದ್ಯದಲ್ಲೇ ಟೀಸರ್‌ ಒಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ಕೋಟ್‌ ನಮ್ಮ ದೇಶದಲ್ಲಿ ಬ್ಯಾಸ್ಕೆಟ್‌ ಬಾಲ್‌ ಆಟಗಾರರು ಕಡಿಮೆ ಇರಬಹುದು. ಆದರೆ ಪ್ರತಿ ಊರಿನಲ್ಲೂ ಬಾಸ್ಕೆಟ್‌ ಬಾಲ್‌ ಕೋರ್ಟ್‌ ಇದೆ. ರಾಷ್ಟ್ರ ಮಟ್ಟದಲ್ಲಿ ಅಷ್ಟೊಂದು ಕ್ರೇಜ್‌ ಇಲ್ಲದೇ ಇದ್ದರೂ ಈ ಸಿನಿಮಾ ನೋಡುವಾಗ ಎಲ್ಲ ಬಾಸ್ಕೆಟ್‌ ಬಾಲ್‌ ಆಟಗಾರರೂ ಈ ಸಿನಿಮಾವನ್ನು ಕನೆಕ್ಟ್ ಮಾಡಿಕೊಳ್ಳುತ್ತಾರೆ. -ವಿಜಯ್‌ ಕುಮಾರ್‌ ಕೊಂಡ, ನಿರ್ದೇಶಕ ಟಾಕಿ ಭಾಗದ ಚಿತ್ರೀಕರಣ ಮುಗಿಸಿದ್ದೇವೆ. ಸದ್ಯದಲ್ಲೇ ಪ್ರೀತಿಗೆ ಸಂಬಂಧಪಟ್ಟ ಟೀಸರ್‌ ಒಂದನ್ನು ಬಿಡುಗಡೆ ಮಾಡಲಿದ್ದೇವೆ. ಪಾತ್ರದ ಬಗ್ಗೆ ಜಾಸ್ತಿ ಹೇಳುವುದು ಬೇಡ. ಇಡೀ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. -ನಿಖಿಲ್‌ ಕುಮಾರಸ್ವಾಮಿ, ನಟ