Darshan: 'ಡಿ ಬಾಸ್ ಪರವಾಗಿ ಸ್ಟೇಟ್‌ಮೆಂಟ್ ಕೊಡಿ' ಎಂದವರಿಗೆ ನಟ ಜಗ್ಗೇಶ್‌ ಹೇಳಿದ್ದು ಒಂದೇ ಮಾತು!

ನಟ ದರ್ಶನ್ ಅವರ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮತ್ತೊಂದೆಡೆ ಸ್ಯಾಂಡಲ್‌ವುಡ್‌ನ ಕೆಲವರು ದರ್ಶನ್ ಅವರ ಪರವಾಗಿ ನಿಂತಿದ್ದಾರೆ. ಇದೀಗ 'ಡಿ ಬಾಸ್ ಪರವಾಗಿ ಸ್ಟೇಟ್‌ಮೆಂಟ್ ಕೊಡಿ' ಎಂದ ಫ್ಯಾನ್‌ಗೆ ನಟ ಜಗ್ಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

Darshan: 'ಡಿ ಬಾಸ್ ಪರವಾಗಿ ಸ್ಟೇಟ್‌ಮೆಂಟ್ ಕೊಡಿ' ಎಂದವರಿಗೆ ನಟ ಜಗ್ಗೇಶ್‌ ಹೇಳಿದ್ದು ಒಂದೇ ಮಾತು!
Linkup
'ಚಾಲೆಂಜಿಂಗ್ ಸ್ಟಾರ್' ದರ್ಶನ್ ಫ್ಯಾನ್ಸ್ ಮತ್ತು 'ನವರಸ ನಾಯಕ' ಅವರ ನಡುವೆ ಕೆಲ ತಿಂಗಳ ಹಿಂದೆ ವಿವಾದ ಉಂಟಾಗಿತ್ತು. ಇದೀಗ ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿರುವ . ಆದರೂ ಚಿತ್ರೋದ್ಯಮದ ಅನೇಕ ಮಂದಿ ದರ್ಶನ್‌ಗೆ ಸಪೋರ್ಟ್ ಮಾಡಿದ್ದಾರೆ. ಈ ಮಧ್ಯೆ ಡಿ ಬಾಸ್ ಅಭಿಮಾನಿಯೊಬ್ಬರು ಜಗ್ಗೇಶ್‌ ಅವರ ಬಳಿ ಈ ಬಗ್ಗೆ ಮಾತನಾಡಿದ್ದಾರೆ. 'ಡಿ ಬಾಸ್ ಪರವಾಗಿ ಸ್ಟೇಟ್‌ಮೆಂಟ್ ಕೊಡಿ' ಎಂದು ನೇರವಾಗಿ ಕೇಳಿದ್ದಾರೆ. ಅದಕ್ಕೆ ಜಗ್ಗೇಶ್ ಹೇಳಿದ್ದೇನು ಗೊತ್ತಾ? ಮುಂದೆ ಓದಿ. ದರ್ಶನ್ ಅಭಿಮಾನಿ ಕೇಳಿದ್ದೇನು?ಜಗ್ಗೇಶ್ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ವೊಂದಕ್ಕೆ ಕಾಮೆಂಟ್ ಮಾಡಿದ್ದ ದರ್ಶನ್ ಅಭಿಮಾನಿ, 'ಪ್ಲೀಸ್ ಸರ್, ಡಿ ಬಾಸ್ ಪರವಾಗಿ ಸ್ಟೇಟ್‌ಮೆಂಟ್ ಕೊಡಿ ಸರ್. ನಿಮ್ಮ ನಡುವೆ ಮನಸ್ತಾಪ ಇದ್ದರೂ, ಅಭಿಮಾನಿಗಳ ಸಲುವಾಗಿ ಡಿ ಬಾಸ್ ಜೊತೆ ಕೈ ಜೋಡಿಸಿ' ಎಂದು ಕೇಳಿಕೊಂಡಿದ್ದರು. ಈ ಕಾಮೆಂಟ್‌ಗೆ ರಿಯಾಕ್ಟ್ ಮಾಡಿರುವ ನಟ ಜಗ್ಗೇಶ್‌, 'ನನಗೂ ದರ್ಶನ್‌ಗೂ ಯಾವ ಮನಸ್ತಾಪವಿಲ್ಲಾ. ಆತ ನನ್ನ ಕಲಾಬಂಧು' ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಹಾಗೂ ನಟ ದರ್ಶನ್ ನಡುವೆ ಯಾವುದೇ ಮುನಿಸು ಇಲ್ಲ ಎಂಬುದನ್ನು ನೇರವಾಗಿ ಸ್ಪಷ್ಟಪಡಿಸಿದ್ದಾರೆ ಜಗ್ಗೇಶ್. ದರ್ಶನ್ ವಿರುದ್ಧ ಗಂಭೀರ ಆರೋಪನಟ ದರ್ಶನ್ ಅವರು ಮೈಸೂರಿನ ಸಂದೇಶ್ ಹೋಟೆಲ್‌ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಗಂಭೀರ ಆರೋಪ ಮಾಡಿದ್ದರು. ನಂತರ ಇಬ್ಬರು ಕೂಡ ಮಾಧ್ಯಮಗಳ ಎದುರು ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು. ನಂತರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಗೃಹ ಸಚಿವರು, ಸೂಕ್ತ ತನಿಖೆ ಮಾಡುವಂತೆ ಮೈಸೂರು ಪೊಲೀಸರಿಗೆ ಸೂಚಿಸಿದ್ದರು. ಪೊಲೀಸರು ಕೂಡ ಹೋಟೆಲ್‌ಗೆ ತೆರಳಿ ವಿಚಾರಣೆ ಮಾಡಿಬಂದಿದ್ದರು. ಸದ್ಯ ಸ್ಯಾಂಡಲ್‌ವುಡ್‌ನ ಅನೇಕರು ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. 'ದರ್ಶನ್ ಭಾಯ್ ಜಾನ್ ನೀವು ಕನ್ನಡ ಚಿತ್ರರಂಗದ ಆಸ್ತಿ. ನೀವು ತಪ್ಪು ಮಾಡಿದ್ದರೆ ಹಿರಿಯರಿಂದ ನಿಮ್ಮ ತಪ್ಪನ್ನು ತಿದ್ದುವ ಪ್ರಯತ್ನವಾಗಲಿ, ಆದರೆ ನಿಮ್ಮನ್ನು ಚಿತ್ರರಂಗದಿಂದ ಬಹಿಷ್ಕರಿಸುವ ಹಕ್ಕು ಯಾರಿಗೂ ಇಲ್ಲ.. ನಿಮ್ಮ ಜೊತೆ ಒಬ್ಬ ಅಭಿಮಾನಿಯಾಗಿ, ಸ್ನೇಹಿತನಾಗಿ, ಸಹೋದರನಾಗಿ ನಾನಿದ್ದೇನೆ' ಎಂದು 'ನೆನಪಿರಲಿ' ಪ್ರೇಮ್ ಟ್ವೀಟ್ ಮಾಡಿದ್ದಾರೆ. 'ನವಗ್ರಹ ಚಿತ್ರದಿಂದ ಇಲ್ಲಿಯವರೆಗೂ ನೀವು ಕೊಟ್ಟಿರುವಂತಹ ಪ್ರೋತ್ಸಾಹ, ತೋರಿಸಿರುವಂತಹ ಪ್ರೀತಿಯನ್ನು ನಾನು ಮರೆಯೋಕೆ ಸಾಧ್ಯವಿಲ್ಲ. ನಿಮ್ಮ ಜೊತೆ ನಾನು ಸದಾ ಇರುತ್ತೇನೆ' ಎಂದು ನಟ ಧರ್ಮ ಕೀರ್ತಿರಾಜ್ ಟ್ವೀಟ್ ಮಾಡಿದ್ದಾರೆ.