ಬಾಲಿವುಡ್‌ನ 'ಈ ನಟ'ನೊಂದಿಗೆ ನಟಿ ಸಮಂತಾಗೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡುವಾಸೆ!

ಬಾಲಿವುಡ್‌ನ ಖ್ಯಾತ ನಟರೊಬ್ಬರ ಜೊತೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡುವ ಬಯಕೆ ನಟಿ ಸಮಂತಾಗೆ ಇದೆ. ಆ ನಟ ಯಾರು ಅಂದ್ರಾ? ಬೇರೆ ಯಾರೂ ಅಲ್ಲ.. ರಣ್‌ಬೀರ್ ಕಪೂರ್!

ಬಾಲಿವುಡ್‌ನ 'ಈ ನಟ'ನೊಂದಿಗೆ ನಟಿ ಸಮಂತಾಗೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡುವಾಸೆ!
Linkup
ಟಾಲಿವುಡ್‌ನಲ್ಲಿ ಬಹುಬೇಡಿಕೆ ಹೊಂದಿರುವ ನಟಿಯರ ಪೈಕಿ ಕೂಡ ಒಬ್ಬರು. ಈಗಾಗಲೇ, ನಾಗ ಚೈತನ್ಯ, ಜೂ.ಎನ್.ಟಿ.ಆರ್, ಪ್ರಿನ್ಸ್ ಮಹೇಶ್ ಬಾಬು, ಪವನ್ ಕಲ್ಯಾಣ್, ವಿಜಯ್ ಮುಂತಾದ ಸ್ಟಾರ್ ನಟರ ಜೊತೆಗೆ ನಟಿ ಸಮಂತಾ ತೆರೆಹಂಚಿಕೊಂಡಿದ್ದಾರೆ. ಇಂತಿಪ್ಪ ನಟಿ ಸಮಂತಾಗೆ ಒಂದು ಆಸೆ ಇದೆ. ಬಾಲಿವುಡ್‌ನ ಖ್ಯಾತ ನಟರೊಬ್ಬರ ಜೊತೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡುವ ಬಯಕೆ ನಟಿ ಸಮಂತಾಗೆ ಇದೆ. ಆ ನಟ ಯಾರು ಅಂದ್ರಾ? ಬೇರೆ ಯಾರೂ ಅಲ್ಲ.. ರಣ್‌ಬೀರ್ ಕಪೂರ್! ಹೌದು, ಚಾಕಲೇಟ್ ಬಾಯ್ ಜೊತೆ ತೆರೆಹಂಚಿಕೊಳ್ಳುವ ಬಯಕೆ ನಟಿ ಸಮಂತಾಗಿದೆ. ಈ ವಿಚಾರವನ್ನು ಇತ್ತೀಚೆಗಷ್ಟೇ ನಟಿ ಸಮಂತಾ ಬಹಿರಂಗ ಪಡಿಸಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸೀರೀಸ್ ಮೂಲಕ ನಟಿ ಸಮಂತಾ ಡಿಜಿಟಲ್ ದುನಿಯಾದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಈ ವೆಬ್ ಸೀರೀಸ್‌ನ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ, ''ಬಾಲಿವುಡ್‌ನ ಯಾವ ನಟನೊಂದಿಗೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡಲು ಇಷ್ಟ?'' ಎಂಬ ಪ್ರಶ್ನೆಗೆ ಸಮಂತಾಗೆ ತೂರಿಬಂದಿತ್ತು. ಈ ಪ್ರಶ್ನೆಗೆ ''ರಣ್‌ಬೀರ್ ಕಪೂರ್'' ಎಂದು ನಟಿ ಸಮಂತಾ ಉತ್ತರ ಕೊಟ್ಟಿದ್ದರು. ಅಂದ್ಹಾಗೆ, 'ಜಾನು' ಚಿತ್ರದ ಬಳಿಕ ನಟಿ ಸಮಂತಾ ತಮಿಳಿನ 'ಕಾಥು ವಾಕುಳ ರೆಂಡು ಕಾದಲ್' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ ಜೊತೆಗೆ ಸಮಂತಾ ನಟಿಸುತ್ತಿದ್ದಾರೆ. ಇದರೊಂದಿಗೆ ಗುಣಶೇಖರ್ ನಿರ್ದೇಶನದ 'ಶಾಕುಂತಲಂ' ಚಿತ್ರದಲ್ಲೂ ನಟಿ ಸಮಂತಾ ಬಿಜಿಯಾಗಿದ್ದಾರೆ.