![](https://vijaykarnataka.com/photo/84403819/photo-84403819.jpg)
ಹೊಸದಿಲ್ಲಿ: ಚುನಾವಣೆಗಳ ಹಿಂದೆ ತಂತ್ರ ರೂಪಿಸುವುದರಲ್ಲಿ ಚಾಣಾಕ್ಷರಾದ , ಮತ್ತೆ ರಾಜಕೀಯ ಯಾನ ಆರಂಭಿಸಲಿದ್ದಾರೆಯೇ? ಹೀಗೊಂದು ಅನುಮಾನ ಶುರುವಾಗಲು ಕಾರಣ ಅವರು ನಾಯಕರಾದ , ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಜತೆ ನಡೆಸಿದ ಸುದೀರ್ಘ ಚರ್ಚೆಗಳು. ಬಿಹಾರದಲ್ಲಿ ಜೆಡಿಯು ಸೇರ್ಪಡೆಯಾಗಿ ನಿತೀಶ್ ಕುಮಾರ್ ಜತೆಗಿನ ಮುನಿಸಿನಿಂದ ಹೊರಬಂದಿದ್ದ ಪ್ರಶಾಂತ್ ಕಿಶೋರ್, ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳು ತೀವ್ರಗೊಂಡಿವೆ.
ಮುಂದಿನ ವರ್ಷ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರು ಪ್ರಮುಖ ಪಾತ್ರ ವಹಿಸಲಿದ್ದು, ಅವರನ್ನು ಪಕ್ಷದ ಭಾಗವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಬಯಸಿದೆ ಎನ್ನಲಾಗಿದೆ.
ಮಂಗಳವಾರ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಮತ್ತು ಪ್ರಿಯಾಂಕಾ ಅವರೂ ಭಾಗಿಯಾಗಿದ್ದರು. ಮತ್ತು ಉತ್ತರ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆಗಳಿಗೆ ಕಾಂಗ್ರೆಸ್ ತಂತ್ರ ರೂಪಿಸಲು ಈ ಸಭೆ ನಡೆಯುತ್ತಿದೆ ಎಂದು ಹೇಳಲಾಗಿದ್ದರೂ, ಅದಕ್ಕಿಂತಲೂ ದೊಡ್ಡದಾದ ಸಂಗತಿ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ. ಈ ಸಭೆಯು 2024ರ ಲೋಕಸಭೆ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್‌ಅನ್ನು ಸಜ್ಜುಗೊಳಿಸುವ ಮಹತ್ವದ ಪಾತ್ರವನ್ನು ಪ್ರಶಾಂತ್ ಕಿಶೋರ್ ಅವರಿಗೆ ವಹಿಸಿಕೊಡುವ ಸುಳಿವು ನೀಡಿದೆ.
ರಾಜಕೀಯದಿಂದ ದೂರವಾಗುವ ಮಾತುಈ ಹಿಂದೆ ಜೆಡಿಯು ಮೂಲಕ ರಾಜಕೀಯ ಪ್ರವೇಶಿಸಿದ್ದ ಪ್ರಶಾಂತ್ ಕಿಶೋರ್, ತಾವೊಬ್ಬ ವಿಫಲ ರಾಜಕಾರಣಿ ಎಂದು ಹೇಳಿಕೊಂಡಿದ್ದರು. ಅಸ್ಸಾಂಗೆ ಕುಟುಂಬ ಸಮೇತ ತೆರಳಿ ಚಹಾ ತೋಟ ಮಾಡುವ ಬಗ್ಗೆ ಹೇಳಿಕೊಂಡಿದ್ದರು. ಬಂಗಾಳ ಹಾಗೂ ತಮಿಳುನಾಡು ವಿಧಾನಸಭೆ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿ ಮತ್ತು ಎಂಕೆ ಸ್ಟಾಲಿನ್ ಅವರಿಗೆ ನೆರವಾಗಿದ್ದ ಅವರು, ಇಷ್ಟು ದಿನದ ಕೆಲಸ ಸಾಕಾಗಿದೆ. ಈಗ ಮಾಡುತ್ತಿರುವುದನ್ನು ಮುಂದುವರಿಸಲು ಬಯಸುವುದಿಲ್ಲ. ವಿರಾಮ ತೆಗೆದುಕೊಂಡು ಜೀವನದಲ್ಲಿ ಬೇರೆ ಏನಾದರೂ ಮಾಡಬೇಕಿದೆ. ಹೀಗಾಗಿ ಈ ಸ್ಥಾನವನ್ನು ತೊರೆಯುತ್ತೇನೆ ಎಂದು ತಿಳಿಸಿದ್ದರು.
ಆದರೆ, ಈಗ ಕಾಂಗ್ರೆಸ್ ನಾಯಕರ ಜತೆ ಮತ್ತೆ ಗಂಭೀರ ಮಾತುಕತೆಗಳನ್ನು ನಡೆಸಿರುವುದು ಅವರ ನಡೆ ಬದಲಾಗಲಿದೆಯೇ ಎಂಬ ಅನುಮಾನ ಮೂಡಿಸಿದೆ. ಚುನಾವಣಾ ತಂತ್ರಜ್ಞನಾಗಿ ಬೇರೆ ಪಕ್ಷಗಳಲ್ಲಿ ಪ್ರಶಾಂತ್ ಕಿಶೋರ್ ಉತ್ತಮ ಯಶಸ್ಸು ಗಳಿಸಿದ್ದರೂ ಕಾಂಗ್ರೆಸ್ ವಿಚಾರದಲ್ಲಿ ಅವರ ಸಾಧನೆ ತೃಪ್ತಿಕರವಾಗಿಲ್ಲ.
ಕಾಂಗ್ರೆಸ್‌ನಲ್ಲಿ ವೈಫಲ್ಯ2017ರಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಬಿಜೆಪಿ ಭಾರಿ ಅಂತರದಿಂದ ಗೆಲುವು ಕಂಡಿತ್ತು. ಅವರಿಗೆ ಕಾಂಗ್ರೆಸ್‌ನಲ್ಲಿ ಗಮನಾರ್ಹ ಗೆಲುವು ಸಿಕ್ಕಿರುವುದು ಪಂಜಾಬ್ ಚುನಾವಣೆಯಲ್ಲಿ ಮಾತ್ರ. ಹೀಗಾಗಿ ಪ್ರಶಾಂತ್ ಕಿಶೋರ್ ಮುಂದಿನ ಯಾನ ಕುತೂಹಲ ಮೂಡಿಸಿದೆ.