ಗಡಿಯಲ್ಲಿ ಚೀನಾ ಮೇಲೆ ತಂತ್ರಜ್ಞಾನ ಗಸ್ತು..! ಉಪಟಳ ತಡೆಯಲು ಭಾರತೀಯ ಸೇನೆ ಹೊಸ ಉಪಾಯ..!

ಕೃತಕ ಬುದ್ಮತೆ ಅಳವಡಿಕೆ, ಚಹರೆ ಗುರುತಿಸುವಿಕೆ, ಚಟುವಟಿಕೆ ಆಧರಿಸಿ ಸಿಗ್ನಲ್‌ ನೀಡುವ ಹಲವು ಉಪಕರಣಗಳನ್ನು ಗಡಿಯಲ್ಲಿ ಅಳವಡಿಸಲಾಗಿದೆ. ಇವುಗಳಲ್ಲಿ, ಚಹರೆ ಗುರುತಿಸುವಿಕೆ ಉಪಕರಣವನ್ನು ಮೇಜರ್‌ ಭವ್ಯಾ ಶರ್ಮಾ ಅವರು ಅಭಿವೃದ್ಧಿಪಡಿಸಿದ್ದಾರೆ.

ಗಡಿಯಲ್ಲಿ ಚೀನಾ ಮೇಲೆ ತಂತ್ರಜ್ಞಾನ ಗಸ್ತು..! ಉಪಟಳ ತಡೆಯಲು ಭಾರತೀಯ ಸೇನೆ ಹೊಸ ಉಪಾಯ..!
Linkup
ತವಾಂಗ್‌: ಗಡಿಯಲ್ಲಿ ಆಗಾಗ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಸೇನಾ ಚಟುವಟಿಕೆ ಬಿರುಸುಗೊಳಿಸಲು ಚೀನಾದ ಮಿಲಿಟರಿ ಮೇಲೆ ನಿಗಾ ಇಡಲು ಭಾರತೀಯ ಸೇನೆಯು ವಾಸ್ತವಿಕ ನಿಯಂತ್ರಣ ರೇಖೆ () ಯ ಪೂರ್ವ ವಲಯದಲ್ಲಿ ದೇಶೀಯ ನಿರ್ಮಿತ 'ನಿಗಾ ಸಲಕರಣೆ'ಗಳನ್ನು ಅಳವಡಿಸಿದೆ. ಕಳೆದ ವಾರವಷ್ಟೇ ಗಡಿಯಲ್ಲಿ ಸಮರಾಭ್ಯಾಸ, ತರಬೇತಿ ಹೆಚ್ಚಿಸುತ್ತಿದೆ ಎಂದು ಸೇನಾ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಮನೋಜ್‌ ಪಾಂಡೆ ಎಚ್ಚರಿಸಿದ್ದರು. ಅಲ್ಲದೆ, ಚೀನಾವು ಪೀಪಲ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಯನ್ನು ನಿಯೋಜಿಸಿ ಉದ್ಧಟತನ ಮೆರೆಯುತ್ತಿರುವ ಕಾರಣ ಭಾರತೀಯ ಸೇನೆಯು ತಂತ್ರಜ್ಞಾನದ ಮೊರೆ ಹೋಗಿದೆ. ಕೃತಕ ಬುದ್ಮತೆ ಅಳವಡಿಕೆ, ಚಹರೆ ಗುರುತಿಸುವಿಕೆ, ಚಟುವಟಿಕೆ ಆಧರಿಸಿ ಸಿಗ್ನಲ್‌ ನೀಡುವ ಹಲವು ಉಪಕರಣಗಳನ್ನು ಗಡಿಯಲ್ಲಿ ಅಳವಡಿಸಲಾಗಿದೆ. ಇವುಗಳಲ್ಲಿ, ಚಹರೆ ಗುರುತಿಸುವಿಕೆ ಉಪಕರಣವನ್ನು ಮೇಜರ್‌ ಭವ್ಯಾ ಶರ್ಮಾ ಅವರು ಅಭಿವೃದ್ಧಿಪಡಿಸಿದ್ದು, ಎಲ್‌ಎಸಿ ಬಳಿ ಪಿಎಲ್‌ಎ ಸೈನಿಕರು ಬಂದರೆ, ಅದನ್ನು ಗುರುತಿಸಿ ಮಾಹಿತಿ ಒದಗಿಸುವ ಸಾಫ್ಟ್‌ವೇರ್‌ ಇದಾಗಿದೆ. ಅರುಣಾಚಲ ಪ್ರದೇಶ ಗಡಿ ಬಳಿಕ ತವಾಂಗ್‌, ನಮ್ಕಾ ಚು ವ್ಯಾಲಿ, ಸಮ್‌ಡೊರೊಂಗ್‌ ಚು ಹಾಗೂ ಯಾಂಗ್‌ಸ್ತೆ ಬಳಿ ನೂತನ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಮೇಜರ್‌ ಭವ್ಯಾ ಶರ್ಮಾ ಅವರು ಇದನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕಾಗಿ ಕೇವಲ ಐದು ಸಾವಿರ ರೂಪಾಯಿ ಖರ್ಚಾಗಿದೆ. ಇಂಟರ್‌ನೆಟ್‌ ಇಲ್ಲದೆಯೂ ಇದು ಕಾರ್ಯ ನಿರ್ವಹಿಸಲಿದೆ. ಇವುಗಳ ಜತೆಗೆ ಥರ್ಮಲ್‌ ಇಮೇಜರ್‌ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಚೀನಾ ಸೈನಿಕರು ಮಾತ್ರವಲ್ಲ, ಸಣ್ಣ ಪ್ರಮಾಣದ ವಾಹನಗಳು, ಯುದ್ಧ ಟ್ಯಾಂಕರ್‌ಗಳು ಗಡಿ ದಾಟಿ ನುಸುಳಲು ಯತ್ನಿಸಿದರೆ, ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಮೂಲಕ ಸೇನೆಗೆ ಸಂಪೂರ್ಣ ಮಾಹಿತಿ ದೊರೆಯುತ್ತಿದೆ. ಇದರಿಂದ ಗಡಿಯಲ್ಲಿ ಚೀನಾ ಯಾವುದೇ ಕುತಂತ್ರ ಮಾಡಿದರೂ ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡಲು ಸಹಕಾರಿಯಾಗಲಿದೆ. ಕಳೆದ ವರ್ಷದ ಮೇ ತಿಂಗಳಿನಿಂದಲೂ ಗಡಿಯಲ್ಲಿ ಚೀನಾ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ಇದುವರೆಗೆ ಭಾರತ - ಚೀನಾ ಮಧ್ಯೆ 13 ಸುತ್ತಿನ ಮಾತುಕತೆ ನಡೆದರೂ ಕಮ್ಯುನಿಸ್ಟ್‌ ರಾಷ್ಟ್ರ ಮಾತ್ರ ಕುಟಿಲ ನೀತಿ ಬದಲಾಯಿಸುತ್ತಿಲ್ಲ. ಆದರೆ, ಇದಕ್ಕೆ ಭಾರತ ಸಹ ಸಕಲ ರೀತಿಯಲ್ಲಿ ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದು, ನೂತನ ಅಳವಡಿಕೆಯೂ ಇದರ ಭಾಗವಾಗಿದೆ. ಏನೇನು ಅಳವಡಿಕೆ? - ಪಿಎಲ್‌ಎ ಸೈನಿಕರ ಗುರುತಿಸಲು ಚಹರೆ ಗುರುತಿಸುವ ಸಾಫ್ಟ್‌ವೇರ್‌ - ನೆರೆ ರಾಷ್ಟ್ರದ ಯಾವುದೇ ಚಟುವಟಿಕೆ ಮೇಲೆ ನಿಗಾ ಇಡಲು ಥರ್ಮಲ್‌ ಇಮೇಜರ್‌ ಸದ್ಯ ಎಲ್ಲೆಲ್ಲಿ ನಿಯೋಜನೆ? ತವಾಂಗ್‌, ನಮ್ಕಾ ಚು ವ್ಯಾಲಿ, ಸಮ್‌ಡೊರೊಂಗ್‌ ಚು, ಯಾಂಗ್‌ಸ್ತೆ