ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣ: 16 ತಿಂಗಳ ಬಳಿಕ ಜೈಲಿನಿಂದ ಹೊರಬಂದ ಸ್ವಪ್ನಾ ಸುರೇಶ್

ದೇಶಾದ್ಯಂತ ಚರ್ಚೆಗೆ ಎಡೆಮಾಡಿಕೊಟ್ಟಿದ್ದ ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರನ್ನು 16 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ನ. 2ರಂದು ಅವರಿಗೆ ಕೇರಳ ಹೈಕೋರ್ಟ್ ಜಾಮೀನು ನೀಡಿತ್ತು.

ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣ: 16 ತಿಂಗಳ ಬಳಿಕ ಜೈಲಿನಿಂದ ಹೊರಬಂದ ಸ್ವಪ್ನಾ ಸುರೇಶ್
Linkup
ತಿರುವನಂತಪುರಂ: ಕೇರಳ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಪ್ರಮುಖ ಆರೋಪಿ ಅವರು 16 ತಿಂಗಳ ಸೆರೆವಾಸದ ಬಳಿಕ ಶನಿವಾರ ತಿರುವನಂತಪುರಂನ ಮಹಿಳಾ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ರಾಷ್ಟ್ರೀಯ ತನಿಖಾ ಸಂಸ್ಥೆ () ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ಸ್ವಪ್ನಾ ಅವರಿಗೆ ಹೈಕೋರ್ಟ್ ನವೆಂಬರ್ 2ರಂದು ಜಾಮೀನು ನೀಡಿತ್ತು. 25 ಲಕ್ಷ ಜಾಮೀನು ಬಾಂಡ್ ಹಾಗೂ ಇಬ್ಬರ ಶೂರಿಟಿಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. 2020ರ ಜುಲೈ 11ರಂದು ಸ್ವಪ್ನಾ ಸುರೇಶ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಬಳಿಕ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ರಾಜತಾಂತ್ರಿಕ ವಾಹಿನಿಗಳ ಮೂಲಕವೇ ರಾಜ್ಯದಲ್ಲಿ ಚಿನ್ನ ಕಳ್ಳಸಾಗಣೆ ನಡೆಯುತ್ತಿರುವ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. 2019ರ ಜುಲೈ 5ರಂದು ತಿರುವನಂತಪುರಂನ ಸುಂಕದ ಇಲಾಖೆಯು, ರಾಜತಾಂತ್ರಿಕ ಸರಕು ಎಂಬ ಸೋಗಿನಲ್ಲಿ ರವಾನೆ ಮಾಡುತ್ತಿದ್ದ 14.82 ಕೋಟಿ ರೂ ಮೌಲ್ಯದ 30 ಕೆಜಿ ತೂಕದ ಚಿನ್ನದ ಕಳ್ಳಸಾಗಣೆ ಬೆಳಕಿಗೆ ಬಂದಾಗ ಇಡೀ ಪ್ರಕರಣ ಬಯಲಿಗೆ ಬಂದಿತ್ತು. ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಸುಂಕ ಇಲಾಖೆ ತನಿಖೆ ನಡೆಸುತ್ತಿವೆ. ಸ್ವಪ್ನಾ ಸುರೇಶ್ ಅವರಲ್ಲದೆ, ಇತರೆ ಆರೋಪಿಗಳಾದ ಮೊಹಮ್ಮದ್ ಶಫಿ ಪಿ., ಜಲಾಲ್ ಎ.ಎಂ., ರಾಬಿನ್ಸ್ ಹಮೀದ್, ರಮೀಜ್ ಕೆಟಿ, ಶರಫುದ್ದೀನ್ ಕೆಟಿ, ಸರಿತಾ ಪಿಎಸ್, ಮತ್ತು ಮೊಹಮ್ಮದ್ ಅಲಿ ಅವರಿಗೂ ಜಾಮೀನು ಸಿಕ್ಕಿದೆ. ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ ಸುಮಾರು 15 ಕೋಟಿ ರುಪಾಯಿ ಮೌಲ್ಯದ, 30 ಕಿಲೋ ಚಿನ್ನ ಪತ್ತೆಯಾಗಿತ್ತು. ಇದು ದುಬೈನಿಂದ ಆಗಮಿಸಿತ್ತು. ಯುಎಇ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌)ನ ತಿರುವನಂತಪುರ ಕಾನ್ಸುಲೇಟ್‌ ಜನರಲ್‌ ಕಚೇರಿಯ ವಿಳಾಸ ಹೊಂದಿದ್ದ ಪಾರ್ಸೆಲ್‌ನಲ್ಲಿ ಚಿನ್ನ ಇತ್ತು. ರಾಯಭಾರ ಕಚೇರಿಗೆ ಕಳಿಸಲ್ಪಟ್ಟದ್ದರಿಂದ, 'ಡಿಪ್ಲೊಮ್ಯಾಟಿಕ್‌ ಕಾರ್ಗೊ' ಎಂಬ ಹೆಸರು ಇದ್ದಿದ್ದರಿಂದ ಇಂಥ ಸಾಮಗ್ರಿಗಳು ಯಾವುದೇ ಕಸ್ಟಮ್ಸ್‌ ತಪಾಸಣೆ ಇಲ್ಲದೆ ಶೀಘ್ರ ವಿಲೇವಾರಿಯಾಗುತ್ತವೆ. ಆದರೆ ಈ ಪಾರ್ಸೆಲ್‌ ವಿಚಾರದಲ್ಲಿ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಈ ಪಾರ್ಸೆಲ್ ಪಡೆಯಲು ಕಾನ್ಸುಲೇಟ್‌ ಕಚೇರಿಯಿಂದ ಒಂದು ವರ್ಷದ ಹಿಂದೆ ಅಮಾನತಾಗಿದ್ದ ಸಂದೀಪ್‌ ನಾಯರ್‌ ಎಂಬ ಮಾಜಿ ಮಾಧ್ಯಮ ಅಧಿಕಾರಿ ಆಗಮಿಸಿದ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಆತನನ್ನು ಬಂಧಿಸಿ, ಪಾರ್ಸೆಲ್‌ ಒಡೆದಾಗ ಚಿನ್ನ ಪತ್ತೆಯಾಗಿತ್ತು. ಸಂದೀಪ್‌ ನಾಯರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಸ್ವಪ್ನಾ ಸುರೇಶ್‌ ಹೆಸರು ಹೇಳಿದ್ದ. ಆಕೆಯೂ ತಿರುವನಂತಪುರದ ಯುಎಇ ಕಾನ್ಸುಲೇಟ್‌ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಹಾಗೂ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಗಳ ಲಿಂಕು ಹೊಂದಿದ್ದವರು. ನಿರರ್ಗಳ ಉರ್ದು ಭಾಷೆಯ ಬಳಕೆ, ಸಂವಹನ ಸಾಮರ್ಥ್ಯದ ಕಾರಣಗಳಿಂದಾಗಿ ಯುಎಇ ಅಧಿಕಾರಿಗಳು ಹಾಗೂ ಕೇರಳದ ರಾಜಕಾರಣಿಗಳ ನಡುವಿನ ಕೊಂಡಿಯಾಗಿದ್ದರು. ಆದರೆ ಆಕೆ ಕೂಡ ಅಲ್ಲಿಂದ 6 ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದರು. ಈ ಹಿಂದೆ ಒಂದು ಫೋರ್ಜರಿ ಕೇಸಿನಲ್ಲಿ ಸಿಕ್ಕಿಬಿದ್ದು, ಪ್ರಭಾವಿಗಳ ಒತ್ತಡ ತಂದು ಪೊಲೀಸರಿಂದ ಬಿಡಿಸಿಕೊಂಡಿದ್ದರು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪೊಲೀಸರು ಹುಡುಕತೊಡಗಿದಾಗ ಈಕೆ ಕೇರಳದಿಂದ ಪರಾರಿಯಾದರು. ಬಳಿಕ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದರು.