ರಾಜ್ಯ ಒಕ್ಕಲಿಗರ ಸಂಘಕ್ಕೆ ಮತದಾನ: ಕ್ಷೇತ್ರವಾರು ಪಿನ್‌ಕೋಡ್‌ ಆಧಾರದಲ್ಲಿ ಬೆಂಗಳೂರಿನಲ್ಲಿವೆ 23 ಮತಗಟ್ಟೆಗಳು

.ಒಬ್ಬ ಮತದಾರ 15 ಅಭ್ಯರ್ಥಿಗಳಿಗೆ ಮತ ಹಾಕಬಹುದು. ಮತದಾನದ ವೇಳೆ ಒಕ್ಕಲಿಗರ ಸಂಘದ ಸದಸ್ಯತ್ವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಮತಗಟ್ಟೆಗೆ ಕೊಂಡೊಯ್ಯಬೇಕು. ಇತರೆ ಗುರುತಿನ ಪತ್ರಗಳನ್ನು ಕೊಂಡೊಯ್ದರೂ ಮತದಾನಕ್ಕೆ ಅವಕಾಶವಿಲ್ಲ.

ರಾಜ್ಯ ಒಕ್ಕಲಿಗರ ಸಂಘಕ್ಕೆ ಮತದಾನ: ಕ್ಷೇತ್ರವಾರು ಪಿನ್‌ಕೋಡ್‌ ಆಧಾರದಲ್ಲಿ ಬೆಂಗಳೂರಿನಲ್ಲಿವೆ 23 ಮತಗಟ್ಟೆಗಳು
Linkup
ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಸೇರಿದಂತೆ ರಾಮನಗರ, ಕನಕಪುರ, ಹೊಸಕೋಟೆ ಮತ್ತಿತರ ಭಾಗಗಳಲ್ಲಿಭಾನುವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ನಡೆಯಲಿದೆ. ಡಿ.15ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಆಯಾ ಕ್ಷೇತ್ರದ ಮತದಾರರು ಆಯಾ ಕ್ಷೇತ್ರಗಳಲ್ಲೇ ಮತ ಚಲಾಯಿಸಲು ಅನುಕೂಲವಾಗುವಂತೆ 23 ಮತಗಟ್ಟೆಗಳನ್ನು ತೆರೆಯಲಾಗಿದೆ. ಆಧಾರದಲ್ಲಿಮತಗಟ್ಟೆಗಳನ್ನು ತೆರೆಯಲಾಗಿದ್ದು, ಆಯಾ ಕ್ಷೇತ್ರದ ಪಿನ್‌ಕೋಡ್‌ದಾರರು ಆಯಾ ನಿಗದಿತ ಮತಗಟ್ಟೆಧಿಗಳಲ್ಲೇ ಮತ ಚಲಾಯಿಸಬೇಕು. ಒಬ್ಬ ಮತದಾರ 15 ಅಭ್ಯರ್ಥಿಗಳಿಗೆ ಮತ ಹಾಕಬಹುದು. ಮತದಾನದ ವೇಳೆ ಒಕ್ಕಲಿಗರ ಸಂಘದ ಸದಸ್ಯತ್ವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಮತಗಟ್ಟೆಗೆ ಕೊಂಡೊಯ್ಯಬೇಕು. ಇತರೆ ಗುರುತಿನ ಪತ್ರಗಳನ್ನು ಕೊಂಡೊಯ್ದರೂ ಮತದಾನಕ್ಕೆ ಅವಕಾಶವಿಲ್ಲ. ಬೆಂಗಳೂರಿನ ಮತಗಟ್ಟೆಗಳು ಯಾವ ಪಿನ್‌ಕೋಡ್‌ಗೆ ಯಾವ ಮತಗಟ್ಟೆ ಬಿಐಟಿ (ಒಕ್ಕಲಿಗರ ಸಂಘದ ಆವರಣ) ಕೃಷ್ಣರಾಜ ರಸ್ತೆ, ವಿವಿ ಪುರ, ಬೆಂಗಳೂರು-04 (ಪಿನ್‌ಕೋಡ್‌ಗಳು: 560 002, 04, 18, 19 ಹಾಗೂ 53) ಅಗ್ರಗಾಮಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ನಂ.360, ಮೇಜರ್‌ ಅಕ್ಷಯ್‌ ಗಿರೀಶ್‌ಕುಮಾರ್‌ ರೋಡ್‌, ಸೆಕ್ಟರ್‌ ಎ, ಯಲಹಂಕ ಸ್ಯಾಟಲೈಟ್‌ ಟೌನ್‌, ಯಲಹಂಕ, ಬೆಂಗಳೂರು-64. (560024, 63, 64, 65, 89, 92, 97, 106, 561203, 562110). ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಗಲೂರು, ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು (562129, 149, 157, 114, 127) ಎಸ್‌ಇಎ ಪ್ರಾಥಮಿಕ ಮತ್ತು ಪ್ರೌಢಶಾಲೆ, ಏಕ್ತಾನಗರ, ಅಧಿಯ್ಯಪ್ಪ ಸರ್ಕಲ್‌, ವರ್ಗೋನಗರ ಪೋಸ್ಟ್‌, ದೇವಸಂದ್ರ ಮುಖ್ಯರಸ್ತೆ, ಕೆ.ಆರ್‌. ಪುರಂ, ಬೆಂಗಳೂರು-29. (560016, 33, 36, 43, 45, 48, 49, 77, 84, 113) ಕೈರಳಿ ಕಲಾ ಸಮಿತಿ ವಿದ್ಯಾಮಂದಿರ, ಎಚ್‌ಎಎಲ್‌ ಕಲ್ಯಾಣ ಮಂಟಪದ ಹಿಂಭಾಗ, ವಿಮಾನಪುರ, ಬೆಂಗಳೂರು. (560007, 08, 17, 37, 38, 66, 67, 71, 75, 87, 93, 103) ಸರಕಾರಿ ಆರ್‌ಸಿ ಕಾಲೇಜು, ಚಾಲುಕ್ಯ ಸರ್ಕಲ್‌, ಪ್ಯಾಲೇಸ್‌ ರಸ್ತೆ, ಬೆಂಗಳೂರು. (560001, 05, 06, 09, 20, 25, 32, 42, 46, 51, 52) ಮಹಾರಾಣಿ ಲಕ್ಷ್ಮೇ ಅಮ್ಮಣ್ಣಿ ಮಹಿಳಾ ಕಾಲೇಜು, ಮಲ್ಲೇಶ್ವರ 18ನೇ ಕ್ರಾಸ್‌, ಬೆಂಗಳೂರು. (560003, 12, 54, 80, 94) ಬಸವೇಶ್ವರ ಪ್ರೌಢಶಾಲೆ, ಮಹಾಲಕ್ಷ್ಮೇ ಲೇಔಟ್‌, ಬೆಂಗಳೂರು-86. (560013, 14, 15, 22, 31, 55, 86, 96) ಬಸವೇಶ್ವರ ಪ್ರೌಢಶಾಲೆ, 2ನೇ ಹಂತ, ಕೆಇಬಿ ಕ್ವಾರ್ಟರ್ಸ್‌ ಎದುರು, ರಾಜಾಜಿನಗರ, ಬೆಂಗಳೂರು. (560010, 21, 44). ಕಡಂಬಿ ವಿದ್ಯಾಕೇಂದ್ರ, ನಂ.ಸಿವಿ-2, 10ನೇ ಮೈನ್‌, 2ನೇ ಕ್ರಾಸ್‌, 3ನೇ ಸ್ಟೇಜ್‌, ಬಸವೇಶ್ವರನಗರ, ಬೆಂಗಳೂರು. (560079) ನ್ಯೂ ಕೇಂಬ್ರಿಡ್ಜ್‌ ಹೈಸ್ಕೂಲ್‌, ಆರ್‌ಪಿಸಿ ಲೇಔಟ್‌, ವಿಜಯನಗರ, ಬೆಂಗಳೂರು. (560023, 40, 04) ಸರಕಾರಿ ಪ್ರಥಮ ದರ್ಜೆ ಕಾಲೇಜು, ಪೀಣ್ಯ 1ನೇ ಹಂತ, ಪೀಣ್ಯ ವಿಲೇಜ್‌, ಬೆಂಗಳೂರು. (560057, 58, 73, 88, 90, 107, 562123, 162, 163) ಒಕ್ಕಲಿಗರ ಸಂಘ ಪದವಿಪೂರ್ವ ಕಾಲೇಜು, ಶ್ರೀಗಂಧದ ಕಾವಲು, ನಾಗರಬಾವಿ 2ನೇ ಹಂತ, ಬೆಂಗಳೂರು. (560091) ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ತಾವರೆಕೆರೆ, ಬೆಂಗಳೂರು. (562120, 130, 112, 211) ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ದೃಶ್ಯ ಕಲಾ ವಿಭಾಗ, ಬೆಂಗಳೂರು. (560039, 56, 72, 110) ಜವಾಹರಲಾಲ್‌ ಪದವಿಪೂರ್ವಕಾಲೇಜು, ಕೆಂಗೇರಿ ಎಜುಕೇಷನಲ್‌ ಟ್ರಸ್ಟ್‌, ಮೇಲ್ಸೇತುವೆ ಹತ್ತಿರ, ಕೆಂಗೇರಿ, ಬೆಂಗಳೂರು. (560059, 60, 74, 98, 562109) ಶ್ರೀ ಪಟೇಲ್‌ ಗುಳ್ಳಪ್ಪ ಪ್ರೌಢಶಾಲೆ, ನಂ.1, ಜ್ಞಾನಕಾಶಿ (25), ಮುನೇಶ್ವರ ಬ್ಲಾಕ್‌, ಆವಲಹಳ್ಳಿ, ಮೈಸೂರು ರಸ್ತೆ, ಬೆಂಗಳೂರು. (560026) ಐಟಿಐ ಕಾಲೇಜು, ಡೇರಿ ಸರ್ಕಲ್‌, ಹೊಸೂರು ರಸ್ತೆ, ಬೆಂಗಳೂರು. (560027, 29, 30, 34, 35, 47, 68, 76, 95, 102, 114) ವಿಜಯ ಬೈಫರ್‌ಕೇಟೆಡ್‌ ಪದವಿ ಪೂರ್ವ ಕಾಲೇಜು, ಆರ್‌.ವಿ. ರಸ್ತೆ, ಬವನಗುಡಿ, ಬೆಂಗಳೂರು-04. (560011, 41, 69, 70, 82) ದಯಾನಂದ ಸಾಗರ್‌ ಕಾಲೇಜು, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು. (560061, 62, 78, 111, 108, 109, 116) ಕೆಂಪೇಗೌಡ ವೈದ್ಯಕೀಯ ಫಾರ್ಮಸಿ ಕಾಲೇಜಿನ ಸಿಎ ಸೈಟ್‌ ನಂ.21, 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು. (560028, 85) ಪಿಇಎಸ್‌ ಕಾಲೇಜು, 50 ಅಡಿ ರಸ್ತೆ, ಹನುಮಂತನಗರ, ಬೆಂಗಳೂರು. (560050) ಎಎಸ್‌ಬಿ ಸರಕಾರಿ ಪದವಿ ಪೂರ್ವ ಕಾಲೇಜು, ತಹಸೀಲ್ದಾರ್‌ ಕಚೇರಿ ಬಳಿ, ಅತ್ತಿಬೆಲೆ ರಸ್ತೆ, ಆನೇಕಲ್‌ ಟೌನ್‌, ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು. (560081, 83, 99, 105, 125, 105, 106, 107, 125, 145)