ತಾಯಿ ಮತ್ತು 4 ವರ್ಷದ ಮಗುವಿನ ಬರ್ಬರ ಕೊಲೆ; ಬೇಗೂರಿನಲ್ಲಿ ಹಾಡಹಗಲೇ ಹರಿಯಿತು ರಕ್ತದೋಕುಳಿ!

ಯಮುನಾಳ ಕತ್ತಿನಲ್ಲಿದ್ದ ಮಾಂಗಲ್ಯ ಸರ, ಕಿವಿಯಲ್ಲಿದ್ದ ಓಲೆಯನ್ನು ಕದ್ದೊಯ್ಯಲಾಗಿದೆ. ಯಮುನಾಳ ಶವದ ಮೇಲೆ ಹೊದಿಕೆ ಹೊದಿಸಿರುವುದು ಕಂಡು ಬಂದಿದೆ. ಕೊಲೆ ನಡೆದ ಮನೆಯಲ್ಲಿ ಚೆನ್ನವೀರ ಸ್ವಾಮಿ ಕುಟುಂಬ ಒಂದೂವರೆ ವರ್ಷದಿಂದ ವಾಸವಿದೆ. ಒಂದನೇ ಮಹಡಿಯಲ್ಲಿ ಮಾಲೀಕರು ವಾಸವಿದ್ದರೆ, ಚನ್ನವೀರ ಸ್ವಾಮಿ ಕುಟುಂಬ 2ನೇ ಮಹಡಿಯಲ್ಲಿ ವಾಸಿಸುತ್ತಿತ್ತು. ತಳ ಮಹಡಿ ಮತ್ತು 3ನೇ ಮಹಡಿಯಲ್ಲಿ ಬಾಡಿಗೆದಾರರು ವಾಸವಿದ್ದಾರೆ.

ತಾಯಿ ಮತ್ತು 4 ವರ್ಷದ ಮಗುವಿನ ಬರ್ಬರ ಕೊಲೆ; ಬೇಗೂರಿನಲ್ಲಿ ಹಾಡಹಗಲೇ ಹರಿಯಿತು ರಕ್ತದೋಕುಳಿ!
Linkup
ದಕ್ಷಿಣ: ಹಾಡಹಗಲೇ ಮನೆಯೊಂದರಲ್ಲಿ ತಾಯಿ ಹಾಗೂ ನಾಲ್ಕು ವರ್ಷದ ಮಗುವನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೇಗೂರಿನ ವಿಶ್ವಪ್ರಿಯ ಲೇಔಟ್‌ ಸಮೀಪದ ಚೌಡೇಶ್ವರಿ ಬಡಾವಣೆಯಲ್ಲಿ ಬುಧವಾರ ನಡೆದಿದೆ. ಗಾರ್ಮೆಂಟ್‌ ಕಾರ್ಖಾನೆ ಉದ್ಯೋಗಿ ಚೆನ್ನವೀರ ಸ್ವಾಮಿ ಪತ್ನಿ ಯಮುನಾ ಅಲಿಯಾಸ್‌ ಚಂದ್ರಕಲಾ (36) ಹಾಗೂ ಪುತ್ರಿ ರತನ್ಯ (4) ಕೊಲೆಯಾದವರು. ಚೆನ್ನವೀರ ಸ್ವಾಮಿ ಕೆಲಸದ ನಿಮಿತ್ತ ಬುಧವಾರ ಬೆಳಗ್ಗೆಯೇ ಗಾರ್ಮೆಂಟ್ಸ್‌ ಕಾರ್ಖಾನೆಗೆ ತೆರಳಿದ್ದರು. ತಾಯಿ, ಮಗು ಇಬ್ಬರೇ ಇದ್ದಾಗ ಘಟನೆ ನಡೆದಿದೆ. ಯಮುನಾ ಸಹೋದರಿ ಬುಧವಾರ ಮಧ್ಯಾಹ್ನ ಮನೆಗೆ ಬಂದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಕೋಣೆಯಲ್ಲಿ ಹಾಸಿಗೆ ಮೇಲೆ ಮಗುವಿನ ಮೃತದೇಹವಿದ್ದರೆ, ಹಾಲ್‌ನಲ್ಲಿ ತಾಯಿಯ ಕಳೇಬರ ಕಂಡು ಬಂದಿದೆ. ಕಿವಿಯಲ್ಲಿದ್ದ ಓಲೆಯನ್ನೂ ಬಿಡಲಿಲ್ಲ :ಯಮುನಾಳ ಕತ್ತಿನಲ್ಲಿದ್ದ ಮಾಂಗಲ್ಯ ಸರ, ಕಿವಿಯಲ್ಲಿದ್ದ ಓಲೆಯನ್ನು ಕದ್ದೊಯ್ಯಲಾಗಿದೆ. ಯಮುನಾಳ ಶವದ ಮೇಲೆ ಹೊದಿಕೆ ಹೊದಿಸಿರುವುದು ಕಂಡು ಬಂದಿದೆ. ಕೊಲೆ ನಡೆದ ಮನೆಯಲ್ಲಿ ಚೆನ್ನವೀರ ಸ್ವಾಮಿ ಕುಟುಂಬ ಒಂದೂವರೆ ವರ್ಷದಿಂದ ವಾಸವಿದೆ. ಒಂದನೇ ಮಹಡಿಯಲ್ಲಿ ಮಾಲೀಕರು ವಾಸವಿದ್ದರೆ, ಚನ್ನವೀರ ಸ್ವಾಮಿ ಕುಟುಂಬ 2ನೇ ಮಹಡಿಯಲ್ಲಿ ವಾಸಿಸುತ್ತಿತ್ತು. ತಳ ಮಹಡಿ ಮತ್ತು 3ನೇ ಮಹಡಿಯಲ್ಲಿ ಬಾಡಿಗೆದಾರರು ವಾಸವಿದ್ದಾರೆ. ಕೂಗಾಟದ ಯಾವುದೇ ಶಬ್ದ ಕೇಳಿ ಬಂದಿಲ್ಲ ಎಂದು ಮಾಲೀಕರ ಕುಟುಂಬಸ್ಥರು ಹೇಳಿದ್ದಾರೆ. ಇದರಿಂದ ಪರಿಚಿತರೇ ಕೃತ್ಯ ನಡೆಸಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಎಫ್‌ಎಸ್‌ಎಲ್‌ ತಂಡ ಭೇಟಿ:ಸ್ಥಳಕ್ಕೆ ಎಫ್‌ಎಸ್‌ಎಲ್‌ ತಂಡ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿದೆ. ಸ್ಥಳಕ್ಕೆ ಡಿಸಿಪಿ ಶ್ರೀನಾಥ್‌ ಜೋಶಿ, ಜಂಟಿ ಆಯುಕ್ತ ಮುರುಗನ್‌ ಭೇಟಿ ನೀಡಿ ಪರಿಶೀಲಿದ್ದಾರೆ. ಆಸುಪಾಸಿನ ಕಟ್ಟಡಗಳ ಸಿಸಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಗಿಲು ಅರ್ಧ ಮುಚ್ಚಿತ್ತುಯಮುನಾ ಸಹೋದರಿ ಮನೆಗೆ ಬಂದಾಗ ಬಾಗಿಲು ಅರ್ಧ ಮುಚ್ಚಿತ್ತು. ಬೆರಳಿನಿಂದ ಸರಿಸಿದಾಗ ಹಾಲ್‌ನಲ್ಲಿ ಸಹೋದರಿಯ ಶವ ಕಂಡು ಬಂದಿದೆ. ಆಕೆ ಕಿರುಚಿಕೊಂಡಾಗ ಸ್ಥಳೀಯರ ಗಮನಕ್ಕೆ ಬಂದಿದೆ. ಚಿತ್ರದುರ್ಗದ ಬಂಗಾರಕ್ಕನಹಳ್ಳಿ ಮೂಲದ ಚೆನ್ನವೀರ ಸ್ವಾಮಿ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕ್ವಾಲಿಟಿ ಕಂಟ್ರೋಲರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೆನ್ನವೀರ ಸ್ವಾಮಿ ಹಾಗೂ ಯಮುನಾ ದಂಪತಿಗೆ ಇನ್ನೊಬ್ಬ ಪುತ್ರನಿದ್ದು, ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆತ ಕೂಡ ಮನೆಯಲ್ಲಿದ್ದರೆ ಬಲಿಯಾಗುವ ಸಾಧ್ಯತೆ ಇತ್ತು.