ಮಹಾರಾಷ್ಟ್ರದಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ಪತ್ತೆ: 50 ವರ್ಷದ ಮಹಿಳೆಯಲ್ಲಿ ಸೋಂಕು

ಮಹಾರಾಷ್ಟ್ರದಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ಪತ್ತೆಯಾಗಿದೆ. ಪುಣೆ ಜಿಲ್ಲೆಯ ಗ್ರಾಮವೊಂದರಲ್ಲಿನ 50 ವರ್ಷ ಗೃಹಿಣಿಯೊಬ್ಬರಲ್ಲಿ ಜಿಕಾ ಸೋಂಕು ಕಂಡುಬಂದಿದೆ. ಈ ಗ್ರಾಮದಲ್ಲಿ ಚಿಕೂನ್‌ಗುನ್ಯಾ ಕೂಡ ವ್ಯಾಪಕವಾಗಿದೆ.

ಮಹಾರಾಷ್ಟ್ರದಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ಪತ್ತೆ: 50 ವರ್ಷದ ಮಹಿಳೆಯಲ್ಲಿ ಸೋಂಕು
Linkup
ಮುಂಬಯಿ: ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡುಬರುತ್ತಿರುವುದರ ಮಧ್ಯೆ, ಮಹಾರಾಷ್ಟ್ರದಲ್ಲಿ ಮೊದಲ ಪ್ರಕರಣ ಶನಿವಾರ ಪತ್ತೆಯಾಗಿದೆ. ಸೊಳ್ಳೆಯಿಂದ ಹರಡುವ ಈ ಅಪಾಯಕಾರಿ ವೈರಸ್, ಕೆಲವು ದಿನಗಳ ಹಿಂದೆ ಕೇರಳದ ಅನೇಕರಲ್ಲಿ ಕಂಡುಬಂದಿತ್ತು. ಜಿಲ್ಲೆಯ ಪುರಂದರ ತಾಲ್ಲೂಕಿನ ಬೆಲ್ಸಾರ್ ಗ್ರಾಮದ ನಿವಾಸಿಯಾಗಿರುವ 50 ವರ್ಷದ ಮಹಿಳೆಯೊಬ್ಬರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾಗ, ಅದರಲ್ಲಿ ಜಿಕಾ-ಚಿಕೂನ್‌ಗುನ್ಯಾ ಸಹ-ಸೋಂಕು ಇರುವುದು ದೃಢಪಟ್ಟಿದೆ ಎಂದು ಪುಣೆಯಲ್ಲಿನ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ- ರಾಷ್ಟ್ರೀಯ ವೈರಾಣು ಸಂಸ್ಥೆ (ಐಸಿಎಂಆರ್-ಎನ್‌ಐವಿ) ತಿಳಿಸಿದೆ. ಬೆಲ್ಸಾರ್ ಮತ್ತು ಪರಿಂಚೆ ಗ್ರಾಮಗಳಲ್ಲಿ ಜುಲೈ ಆರಂಭದಲ್ಲಿ ಅನೇಕರಲ್ಲಿ ಡೆಂಗ್ಯೂ, ಸೋಂಕು ಹೋಲುವ ಲಕ್ಷಣಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ನಡೆಸಲಾಗುತ್ತಿದ್ದ ದೈನಂದಿನ ತಪಾಸಣೆಯ ವೇಳೆ ಜಿಕಾ ವೈರಸ್ ಕೂಡ ಪತ್ತೆಯಾಗಿದೆ. 'ಆ ಮಹಿಳೆ ಗೃಹಿಣಿಯಾಗಿದ್ದು, ಯಾವುದೇ ಪ್ರಯಾಣ ಇತಿಹಾಸ ಹೊಂದಿಲ್ಲ. ಜುಲೈ 14ರಂದು ಅವರಲ್ಲಿ ರೋ ಲಕ್ಷಣಗಳು ಕಂಡುಬಂದಿದ್ದವು. ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಈಗ ಯಾವುದೇ ಲಕ್ಷಣವಿಲ್ಲ. ಕುಟುಂಬದ ಇತರೆ ಯಾವ ಸದಸ್ಯರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ' ಎಂದು ರಾಜ್ಯ ನಿಗಾವಣೆ ಅಧಿಕಾರಿ ಪ್ರದೀಪ್ ಅವಾಟೆ ತಿಳಿಸಿದ್ದಾರೆ. ಐಸಿಎಂಆರ್-ಎನ್‌ಐವಿ ನಡೆಸಿರುವ ಪ್ರಾಥಮಿಕ ತನಿಖೆ ಪ್ರಕಾರ, ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಜಿಕಾ ವೈರಸ್‌ಗಳ ಮಿಶ್ರಣ ಸಾಂಕ್ರಾಮಿಕವಾಗಿದೆ. ಬೆಲ್ಸಾರ್‌ನಲ್ಲಿ ಚಿಕೂನ್‌ಗುನ್ಯಾ ಹಾವಳಿ ತೀವ್ರವಾಗಿದೆ. ಜಿಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ತಪಾಸಣೆಯನ್ನು ಹೆಚ್ಚಿಸಲಾಗಿದೆ. ಈಗಾಗಲೇ ಕೋವಿಡ್ 19 ಸೋಂಕಿನಿಂದ ತತ್ತರಿಸಿದ್ದು, ಇನ್ನೊಂದೆಡೆ ಸೊಳ್ಳೆಯಿಂದ ಹರಡುವ ಕಾಯಿಲೆಗಳು ಕೂಡ ವ್ಯಾಪಿಸುತ್ತಿರುವುದು ಕಳವಳ ಹೆಚ್ಚಿಸಿದೆ.