ಮುಂಬೈ ಏರ್‌ಪೋರ್ಟ್‌ನಲ್ಲಿರುವ ‘ಅದಾನಿ ವಿಮಾನ ನಿಲ್ದಾಣ’ ಫಲಕ ಧ್ವಂಸಗೊಳಿಸಿದ ಶಿವಸೇನೆ
ಮುಂಬೈ ಏರ್‌ಪೋರ್ಟ್‌ನಲ್ಲಿರುವ ‘ಅದಾನಿ ವಿಮಾನ ನಿಲ್ದಾಣ’ ಫಲಕ ಧ್ವಂಸಗೊಳಿಸಿದ ಶಿವಸೇನೆ
ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವನ್ನು ಜಿವಿಕೆ ಸಮೂಹದಿಂದ ಹಸ್ತಾಂತರ ಮಾಡಿಕೊಂಡಿರುವುದಾಗಿ ಅದಾನಿ ಸಮೂಹವು ಕಳೆದು ತಿಂಗಳು ಘೋಷಿಸಿದೆ. ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಮುಹಕ್ಕೆ ಒಪ್ಪಿಸುವುದನ್ನು ಶಿವಸೇನೆ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿತ್ತು.
ಮುಂಬಯಿ: ನಗರದ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಆವರಣದಲ್ಲಿ ಅಳವಡಿಸಲಾಗಿದ್ದ '' ಎಂಬ ಫಲಕವನ್ನು ಶಿವಸೇನೆ ಕಾರ್ಯಕರ್ತರು ಸೋಮವಾರ ಧ್ವಂಸಗೊಳಿಸಿದ್ದಾರೆ.
ವಿಮಾನ ನಿಲ್ದಾಣದ ಆವರಣದಲ್ಲಿರುವ ಶಿವಾಜಿ ಪತ್ರಿಮೆ ಬಳಿ ಅಳವಡಿಸಿದ್ದ ಫಲಕ ಧ್ವಂಸಗೊಳಿಸಿದ ಕಾರ್ಯಕರ್ತರು, ನಂತರ ಸಮೀಪದ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. 'ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಸರಕಾರವೇ ನಾಮಕರಣ ಮಾಡಿರುವುದರಿಂದ ಅದಾನಿ ಸಮೂಹ ಈ ರೀತಿಯ ಫಲಕ ಅಳವಡಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವನ್ನು ಜಿವಿಕೆ ಸಮೂಹದಿಂದ ಹಸ್ತಾಂತರ ಮಾಡಿಕೊಂಡಿರುವುದಾಗಿ ಅದಾನಿ ಸಮೂಹವು ಕಳೆದು ತಿಂಗಳು ಘೋಷಿಸಿದೆ. ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಮುಂಬಯಿ ವಿಮಾನ ನಿಲ್ದಾಣದವು ಅತಿಹೆಚ್ಚು ಪ್ರಯಾಣಿಕರು ಮತ್ತು ಸರಕು ಸಾಗಣೆಯನ್ನು ನಿರ್ವಹಿಸುವ ದೇಶದ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಆಡಳಿತವನ್ನು ಅದಾನಿ ಸಮೂಹಕ್ಕೆ ವಹಿಸುವ ತೀರ್ಮಾನ ಕೈಗೊಂಡಿದೆ. ಕಳೆದ ವರ್ಷ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಅದಾನಿ ಸಮೂಹಕ್ಕೆ ಮೋದಿ ಸರ್ಕಾರ ಒಪ್ಪಿಸಿತ್ತು. ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಮುಹಕ್ಕೆ ಒಪ್ಪಿಸುವುದನ್ನು ಶಿವಸೇನೆ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿತ್ತು.